ವಿಷ ಸೇವಿಸಿದ ಒಂದೇ ಕುಟುಂಬದ ನಾಲ್ವರು; ಇಬ್ಬರು ಸಾವು, ಇಬ್ಬರು ಸ್ಥಿತಿ ಗಂಭೀರ: ಇಲ್ಲಿದೆ ಕಾರಣ...

ಮೃತರನ್ನು ಖಾಸಗಿ ಬ್ಯಾಂಕ್ ಉದ್ಯೋಗಿ ವಿಕಾಸ್ ಬತೀಶ್(45) ಮತ್ತು ಅವರ ಮಗಳು ಖುಷಿ ಬತೀಶ್(13) ಎಂದು ಗುರುತಿಸಲಾಗಿದೆ.
Patiala: Family of 4 consumes poison; 2 dead, 2 critical
ಸಾಂದರ್ಭಿಕ ಚಿತ್ರ
Updated on

ಪಟಿಯಾಲಾ: ಪಟಿಯಾಲಾದಲ್ಲಿ ಒಂದೇ ಕುಟುಂಬದ ನಾಲ್ವರು ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇನ್ನಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತರನ್ನು ಖಾಸಗಿ ಬ್ಯಾಂಕ್ ಉದ್ಯೋಗಿ ವಿಕಾಸ್ ಬತೀಶ್(45) ಮತ್ತು ಅವರ ಮಗಳು ಖುಷಿ ಬತೀಶ್(13) ಎಂದು ಗುರುತಿಸಲಾಗಿದೆ. ಅವರ ಪತ್ನಿ ತಮನ್ನಾ ಬತೀಶ್(43) ಮತ್ತು ಮಗ ಕನವ್ ಬತೀಶ್(11) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಪೊಲೀಸರ ಪ್ರಕಾರ, ಬುಧವಾರ ರಾತ್ರಿ ಇಲ್ಲಿನ ಆಫೀಸರ್ಸ್ ಕಾಲೋನಿಯಲ್ಲಿರುವ ಬತೀಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ವಿಷಕಾರಿ ವಸ್ತು ಸೇವಿಸಿದ ಕೂಡಲೇ, ಕುಟುಂಬದ ನಾಲ್ವರೂ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು, ವಿಕಾಸ್ ಅವರ ಅತ್ತೆ-ಮಾವ ಚಿಕಿತ್ಸೆಗಾಗಿ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ.

Patiala: Family of 4 consumes poison; 2 dead, 2 critical
ಶಿವಮೊಗ್ಗ: ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ; ಕಾರಣ ನಿಗೂಢ!

ವೈದ್ಯರ ಪ್ರಯತ್ನಗಳ ಹೊರತಾಗಿಯೂ, ವಿಕಾಸ್ ಬತೀಶ್ ಮತ್ತು ಅವರ ಮಗಳು ಖುಷಿ ಬತೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಆದರೆ ವೈದ್ಯರು ತಮನ್ನಾ ಬತೀಶ್ ಮತ್ತು ಕನವ್ ಬತೀಶ್ ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆವೆ ಎಂದು ಡೆಪ್ಯೂಟಿ ಎಸ್‌ಪಿ ಸಂಜೀವ್ ಸಿಂಗ್ಲಾ ಅವರು ಹೇಳಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ವಿವಿಧ ಕೋನಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಡಿಎಸ್ಪಿ ಸಿಂಗ್ಲಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com