ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುವವರನ್ನು ಸುಮ್ಮನೆ ಬಿಡಬಾರದು; ಆಮಿರ್ ಖಾನ್ ಕೊಂದವರಿಗೆ 5 ಕೋಟಿ ರೂ ಬಹುಮಾನ ಘೋಷಿಸಿದ ಜಗದ್ಗುರು! Video

ಇದೀಗ ತಪಸ್ವಿ ಛವಾನಿ ಮುಖ್ಯಸ್ಥ ಜಗದ್ಗುರು ಪರಮಹಂಸ ಆಚಾರ್ಯ ಅವರು ಸಚಿವರ ಹೇಳಿಕೆಯನ್ನು ಬೆಂಬಲಿಸುತ್ತಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅಮೀರ್ ಖಾನ್ ಕೊಂದವರಿಗೆ 5 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.
Jagadguru Paramhans and  Aamir Khan family
ಜಗದ್ಗುರು ಪರಮಹಂಸ, ಆಮಿರ್ ಖಾನ್ ಜೋಡಿ
Updated on

ನವದೆಹಲಿ: ಇತ್ತೀಚಿಗೆ 61 ನೇ ವಯಸ್ಸಿನಲ್ಲಿ ಉದ್ಯಮಿಯಾಗಿರುವ ಹಿಂದೂ ಮಹಿಳೆ ಗೌರಿ ಸ್ಪ್ರಾಟ್ ಅವರನ್ನು ಕೈಹಿಡಿದ ಬಾಲಿವುಡ್ ನಟ ಆಮಿರ್ ಖಾನ್ ವೈಯಕ್ತಿಕ ಜೀವನದ ಬಗ್ಗೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ನೀಡಿದ ಹೇಳಿಕೆಯಿಂದ ಹೊಸ ವಿವಾದ ಭುಗಿಲೆದ್ದಿತ್ತು. ಆಮಿರ್ ಖಾನ್"ಲವ್ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್ ಎಂದಿದ್ದರು.

ಇದೀಗ ತಪಸ್ವಿ ಛವಾನಿ ಮುಖ್ಯಸ್ಥ ಜಗದ್ಗುರು ಪರಮಹಂಸ ಆಚಾರ್ಯ ಅವರು ಸಚಿವರ ಹೇಳಿಕೆಯನ್ನು ಬೆಂಬಲಿಸುತ್ತಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಆಮಿರ್ ಖಾನ್ ಕೊಂದವರಿಗೆ 5 ಕೋಟಿ ರೂ. ಬಹುಮಾನ ನೀಡಲಾಗುವುದು ಮತ್ತು ಕಾನೂನು ವೆಚ್ಚಗಳನ್ನು ಸಹ ತಾವೇ ಭರಿಸಲಾಗುವುದು ಎಂದು ಘೋಷಿಸಿದ್ದಾರೆ.

ಆಮಿರ್ ಖಾನ್ ಹಿಂದೂ ಮಹಿಳೆಯರನ್ನು ಮದುವೆಯಾಗುವುದು ಲವ್ ಜಿಹಾದ್ ಗೆ ಪ್ರೇರಣೆಯಾಗಲಿವೆ. ಅಂತಹ ಕ್ರಮಗಳನ್ನು ಪ್ರೋತ್ಸಾಹಿಸದಿರಲು ಇಂತಹ ಕ್ರಮವೇ ಸೂಕ್ತ ಎಂದು ಹೇಳಿದ್ದಾರೆ.

ಹಿಂದೂ ಮಹಿಳೆಯರನ್ನು "ಬಲೆಗೆ ಬೀಳಿಸುವ" ಜನರನ್ನು ಬಿಡಬಾರದು. ಆಮಿರ್ ಖಾನ್ ಅವರನ್ನು ಕೊಂದವರ ಕುಟುಂಬಕ್ಕೂ ಬಹುಮಾನ ಹಣವನ್ನು ತಲುಪಿಸಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.

ಪರಮಹಂಸ ಆಚಾರ್ಯ ಅವರು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದು,ಇದನ್ನು ಪ್ರಾಮಾಣಿಕವಾಗಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಭಗವಾನ್ ರಾಮನನ್ನು ವಿರೋಧಿಸುವವರು ಈ ವಿಷಯದ ಬಗ್ಗೆ ವಿವಾದವನ್ನು ಸೃಷ್ಟಿಸುತ್ತಲೇ ಇದ್ದಾರೆ ಎಂದು ಆರೋಪಿಸಿದ್ದಾರೆ.

Jagadguru Paramhans and  Aamir Khan family
ಮುಸ್ಲಿಮೇತರರ ಮದುವೆ ಶರಿಯಾಕ್ಕೆ ವಿರುದ್ಧ: ನಟ ಆಮಿರ್ ಖಾನ್ ವಿರುದ್ಧ 'ಫತ್ವಾ' ಹೊರಡಿಸಿದ ಹಿರಿಯ ಧರ್ಮಗುರು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com