ಮುಸ್ಲಿಮೇತರರ ಮದುವೆ ಶರಿಯಾಕ್ಕೆ ವಿರುದ್ಧ: ನಟ ಆಮಿರ್ ಖಾನ್ ವಿರುದ್ಧ 'ಫತ್ವಾ' ಹೊರಡಿಸಿದ ಹಿರಿಯ ಧರ್ಮಗುರು!

ಇಸ್ಲಾಮಿಕ್ ಬೋಧನೆಗಳ ಪ್ರಕಾರ, ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗಲು ಅನುಮತಿ ಇಲ್ಲ ಎಂದು ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಹೇಳಿದ್ದಾರೆ.
Aamir Khan and Gauri Spratt got married at the actor’s Mumbai home on July 5.
ಗೌರಿ ಸ್ಪ್ರಾಟ್ ಜೊತೆಗೆ ಮೂರನೇ ವಿವಾಹವಾದ ಆಮಿರ್ ಖಾನ್
Updated on

ನವದೆಹಲಿ: ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ಇತ್ತೀಚಿಗೆ ತನ್ನ 61 ವಯಸ್ಸಿನಲ್ಲಿ ಉದ್ಯಮಿಯಾಗಿರುವ ಹಿಂದೂ ಮಹಿಳೆ ಗೌರಿ ಸ್ಪ್ರಾಟ್ ಜೊತೆಗೆ ಮೂರನೇ ವಿವಾಹವಾದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಇದೀಗ ಆಮಿರ್ ಖಾನ್ ವಿರುದ್ಧ ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಫತ್ವಾ ಹೊರಡಿಸಿದ್ದಾರೆ.

ಇಸ್ಲಾಮಿಕ್ ಬೋಧನೆಗಳ ಪ್ರಕಾರ, ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗಲು ಅನುಮತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ಮುಂಬೈನ ಮನೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಜುಲೈ 5 ರಂದು ದಂಪತಿಯಾದರು. ಮುಸ್ಲಿಮೇತರರನ್ನು ಮದುವೆಯಾಗುವುದು ಶರಿಯಾಕ್ಕೆ ವಿರುದ್ಧವಾಗಿದೆ. ಹಾಗೆ ಮಾಡುವವರು ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಬೇಕು ಎಂದು ಹುಸೇನ್ ಹೇಳಿದ್ದಾರೆ.

ಕುರಾನ್‌ನ ಬೋಧನೆಗಳ ಹಿನ್ನೆಲೆಯಲ್ಲಿ ಫತ್ವಾ-ಎ-ಆಮ್ (fatwa-e-aam) ಹೊರಡಿಸಿರುವುದಾಗಿ ಅವರು ಹೇಳಿದ್ದಾರೆ.

ಸಾರ್ವಜನಿಕ ಫತ್ವಾವನ್ನು ಹೊರಡಿಸಿದ್ದೇನೆ. ಕುರಾನ್‌ನಲ್ಲಿ ಹೇಳಿರುವಂತೆ ಅಲ್ಲಾಹನ ಆದೇಶವನ್ನು ವಿವರಿಸಿದ್ದೇನೆ. ನಂಬಿಕೆಯುಳ್ಳ ಮುಸ್ಲಿಂ ಪುರುಷರಿಗೆ, ಮುಸ್ಲಿಂ ಮಹಿಳೆಯರು ಮತ್ತು ನಂಬಿಕೆಯುಳ್ಳ ಮಹಿಳೆಯರೊಂದಿಗೆ ಮಾತ್ರ ವಿವಾಹವಾಗಲು ಅನುಮತಿಸಲ್ಪಡುತ್ತದೆ. ಒಂದು ಮುಸ್ಲಿಂ ಪುರುಷ ಬೇರೆ ಧರ್ಮದವರನ್ನು ವಿವಾಹವಾದರೆ, ಆಕೆ ಆ ಧರ್ಮವನ್ನು ಸ್ವೀಕರಿಸುವವರೆಗೂ ಅದಕ್ಕೆ ಅನುಮತಿ ನೀಡುವುದಿಲ್ಲ, ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗುವುದು "ಪಾಪ" ಎಂದು ಅವರು ಹೇಳಿದ್ದಾರೆ.

"ಇದು ಕಾನೂನುಬಾಹಿರ (ಹರಾಮ್) ಕೃತ್ಯ, ಮತ್ತು ಹಾಗೆ ಮಾಡುವ ವ್ಯಕ್ತಿಯು ಪಾಪ ಮಾಡಿದಂತೆ. ಅಂತಹ ವ್ಯಕ್ತಿಯು ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಬೇಕು. ಈ ಪಾಪದಿಂದ ದೂರ ಸರಿಯಬೇಕು. ಈ ಬಹಿರಂಗ ಫತ್ವಾವನ್ನು ಹೊರಡಿಸಿ ಈ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಇಂದು ಪ್ರಪಂಚದಾದ್ಯಂತ, ಇಸ್ಲಾಮಿಕ್ ಶರಿಯಾದ ಚಿತ್ರಣವು ಮುಸ್ಲಿಮರು ಮತ್ತು ಅವರ ಕ್ರಿಯೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಇದನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿತ್ತು ಎಂದಿದ್ದಾರೆ.

Aamir Khan and Gauri Spratt got married at the actor’s Mumbai home on July 5.
Amir Khan 3ನೇ ಮದುವೆ: ಆಮಿರ್​ ಖಾನ್ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ​? ಚರ್ಚೆಗೆ ಗ್ರಾಸವಾದ ಮಿಸ್ಟರ್ ಪರ್ಫೆಕ್ಟ್‌ ವಿವಾಹ!

ಮುಸ್ಲಿಮೇತರ ಮುಖಂಡರು ಕೂಡಾ ಮುಸ್ಲಿಂರು ಏನು ಮಾಡ್ತಾರೆ ಎಂಬುದನ್ನು ನೋಡ್ತಾರೆ. ಅಲ್ಲಾಹುನ ಆದೇಶದಂತೆ ನಡೆಯುತ್ತಾರೆ ಅಂದುಕೊಳ್ಳುತ್ತಾರೆ. ಹಾಗಾಗೀ ಯಾರೇ ಆದ್ರೂ ತಪ್ಪು ಕೃತ್ಯ ಮಾಡಿದಾಗ, ಅದು ತಪ್ಪು ಸಂದೇಶವಾಗುತ್ತದೆ. ಇಸ್ಲಾಂ ಮತ್ತು ಶರಿಯಾದ ಗುರಿ ಒಂದೇಯಾಗಿದೆ. ಮುಸ್ಲಿಮರು ತಮ್ಮ ಧಾರ್ಮಿಕ ಬೋಧನೆಗಳನ್ನು ಗೌರವಿಸಬೇಕು ಮತ್ತು ತಪ್ಪು ತಿಳುವಳಿಕೆಗಳನ್ನು ಉಂಟುಮಾಡುವ ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕ್ರಿಯೆಗಳನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com