'Secret Family': ಹೆಂಡತಿ-ಮಗನ ಜೊತೆಗೆ ರಾಹುಲ್ ದೋಣಿ ವಿಹಾರ? ವೈರಲ್ Video ನಿಜನಾ? ಕಾಂಗ್ರೆಸ್ ಹೇಳಿದ್ದೇನು?

ಓರ್ವ ಮಹಿಳೆ ಹಾಗೂ ಮಗುವೊಂದಿಗೆ ದೋಣಿಯಲ್ಲಿ ವಿಹರಿಸುತ್ತಿರುವ ರಾಹುಲ್ ಗಾಂಧಿ ವಿಡಿಯೋ ವೈರಲ್ ಆಗಿದ್ದು, ಇದು ಅವರ ಕುಟುಂಬವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
Rahul Gandhi Video
ರಾಹುಲ್ ಗಾಂಧಿಯದು ಎನ್ನಲಾದ ವಿಡಿಯೋ
Updated on: 

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹೆಂಡತಿ ಹಾಗೂ ಮಗನ ಜೊತೆಗೆ ದೋಣಿಯಲ್ಲಿ ಸಂಚರಿಸುತ್ತಾ ಎಂಜಾಯ್ ಮಾಡಿದ್ದಾರೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಓರ್ವ ಮಹಿಳೆ ಹಾಗೂ ಮಗುವೊಂದಿಗೆ ದೋಣಿಯಲ್ಲಿ ವಿಹರಿಸುತ್ತಿರುವ ರಾಹುಲ್ ಗಾಂಧಿ ವಿಡಿಯೋ ವೈರಲ್ ಆಗಿದ್ದು, ಇದು ಅವರ ಕುಟುಂಬವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

56 ವರ್ಷದ ರಾಹುಲ್ ಗಾಂಧಿ, ಇಲ್ಲಿಯವರೆಗೂ ತನ್ನ ಮದುವೆ, ಹೆಂಡತಿ, ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಗೊಳಿಸಿಲ್ಲ. ಹೀಗಾಗಿ ಸಹಜವಾಗಿ ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಅವರ ವಿದೇಶ ಪ್ರವಾಸವನ್ನು ಪ್ರಸ್ತಾಪಿಸುತ್ತಾ ವಿಡಿಯೋದಲ್ಲಿ ಇರುವವರು ರಾಹುಲ್ ಗಾಂಧಿ ಅವರ ಹೆಂಡತಿ, ಮಗ ಇರಬಹುದು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಆದಾಗ್ಯೂ, ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ ಅಥವಾ ಗುಪ್ತವಾಗಿ ಕುಟುಂಬವನ್ನು ಹೊಂದಿದ್ದಾರೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಗಳು ಹೊರಬಂದಿಲ್ಲ. ರಾಹುಲ್ ಗಾಂಧಿಯನ್ನು ಒಳಗೊಂಡ ಇದೇ ರೀತಿಯ ವದಂತಿಗಳು ಮತ್ತು ಫೋಟೋಗಳು ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು.

Rahul Gandhi Video
ವಿದ್ಯಾರ್ಥಿಗಳ ಥಳಿಸುವುದು ಭಾರತೀಯ ಸಂಸ್ಕೃತಿಯಲ್ಲ: ಮೋದಿ, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಕಿಡಿ; ಕ್ಷಮೆಯಾಚಿಸುವಂತೆ ಆಗ್ರಹ..!

ಆದರೆ ಈ ಆರೋಪಗಳನ್ನು ಕಾಂಗ್ರೆಸ್ ಪಕ್ಷ ತಳ್ಳಿಹಾಕಿದೆ. ಇವು ಹಳೆಯ ಹಾಗೂ ಈಗಾಗಲೇ ಸುಳ್ಳೆಂದು ಸಾಬೀತಾಗಿರುವ ತಪ್ಪು ಮಾಹಿತಿ ಎಂದು ಹೇಳಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com