'1,000ಕ್ಕೂ ಹೆಚ್ಚು ಇಂಜೆಕ್ಷನ್‌ಗಳು, 2 ಬಾರಿ ಗರ್ಭಪಾತ...': IVF ಹೋರಾಟದ ನೋವು ಬಿಚ್ಚಿಟ್ಟ ನಟಿ ತೇಜಸ್ವಿನಿ

ನಾನು ಐದು ಬಾರಿ ಐವಿಎಫ್ ಚಿಕಿತ್ಸೆ ಪಡೆದಿದ್ದೇನೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಆ ಅವಧಿಯಲ್ಲಿ ತುಂಬಾ ಕಷ್ಟ ಅನುಭವಿಸಿದೆ.
actress Tejaswini Kolhapure
ನಟಿ ತೇಜಸ್ವಿನಿ ಕೊಲ್ಹಾಪುರೆ
Updated on

ನವದೆಹಲಿ: ಬಾಲಿವುಡ್ ನಟಿ ಹಾಗೂ ರೂಪದರ್ಶಿ ತೇಜಸ್ವಿನಿ ಕೊಲ್ಹಾಪುರೆ ತಮ್ಮ ಜೀವನದ ಅತ್ಯಂತ ಕಠಿಣ ಹಂತವಾಗಿದ್ದ ಐವಿಎಫ್ (IVF) ಚಿಕಿತ್ಸೆಯ ಅನುಭವವನ್ನು ಮೊದಲ ಬಾರಿಗೆ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಹಿರಿಯ ನಟಿ ಪದ್ಮಿನಿ ಕೊಲ್ಹಾಪುರೆ ಅವರ ತಂಗಿ ಹಾಗೂ ನಟಿ ಶ್ರದ್ಧಾ ಕಪೂರ್ ಮತ್ತು ಸಿದ್ಧಾಂತ್ ಕಪೂರ್ ಅವರ ಚಿಕ್ಕಮ್ಮ ಆಗಿರುವ ತೇಜಸ್ವಿನಿ, ಐವಿಎಫ್ ಪ್ರಕ್ರಿಯೆ ದೈಹಿಕ ಮತ್ತು ಮಾನಸಿಕವಾಗಿ ಎಷ್ಟು ನೋವುಂಟು ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ತೇಜಸ್ವಿನಿ, "ನಾನು ಐದು ಬಾರಿ ಐವಿಎಫ್ ಚಿಕಿತ್ಸೆ ಪಡೆದಿದ್ದೇನೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಆ ಅವಧಿಯಲ್ಲಿ ತುಂಬಾ ಕಷ್ಟ ಅನುಭವಿಸಿದೆ.

ಐವಿಎಫ್ ಎನ್ನುವುದು ದೈಹಿಕವಾಗಿಯೂ, ಮಾನಸಿಕವಾಗಿಯೂ ಅತ್ಯಂತ ನೋವಿನ ಪ್ರಕ್ರಿಯೆ. ಮೊದಲ, ಎರಡನೇ ಬಾರಿ ತುಂಬಾ ಕಷ್ಟವಾಗುತ್ತದೆ. ಮೂರನೇ, ನಾಲ್ಕನೇ, ಐದನೇ ಬಾರಿ ಅದನ್ನು ಸಹಿಸಿಕೊಳ್ಳುವಂತಾಗುತ್ತದೆ. ಆದರೆ ಪ್ರತೀ ಬಾರಿ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್ ತೆಗೆದುಕೊಳ್ಳಲು ಅಪಾರ ಮಾನಸಿಕ ಧೈರ್ಯ ಬೇಕಾಗುತ್ತದೆ" ಎಂದು ಹೇಳಿದ್ದಾರೆ.

actress Tejaswini Kolhapure
10 ವರ್ಷದಲ್ಲಿ 152 ಪ್ರಶ್ನೆ ಪತ್ರಿಕೆ ಲೀಕ್: ಪ್ರಧಾನ್ ರಾಜಿನಾಮೆ ಕೊಡಬೇಕು, Modi ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು; 3 ಷರತ್ತು ಹಾಕಿದ ರಾಹುಲ್

'35 ವರ್ಷಕ್ಕೂ ಮುನ್ನವೇ ಮಗುವಿನ ಬಗ್ಗೆ ಯೋಚಿಸಿ'

ತಮ್ಮ ಅನುಭವದ ಆಧಾರದ ಮೇಲೆ ಮಹಿಳೆಯರಿಗೆ ಸಲಹೆ ನೀಡಿದ ಅವರು, "ನಾನು ತುಂಬಾ ತಡವಾಗಿ ತಾಯಿಯಾಗಲು ನಿರ್ಧರಿಸಿದೆ. ನನ್ನ ಸಲಹೆ ಏನೆಂದರೆ, ಸಾಧ್ಯವಾದರೆ 35 ವರ್ಷ ವಯಸ್ಸಿನೊಳಗೆ ಮಗುವಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ," ಎಂದರು.

'1,000ಕ್ಕೂ ಹೆಚ್ಚು ಇಂಜೆಕ್ಷನ್‌, ದೇಹದ ಆಕಾರವೇ ಬದಲಾಗಿ ಹೋಯಿತು'

ಐವಿಎಫ್ ಚಿಕಿತ್ಸೆಯ ಪರಿಣಾಮದ ಬಗ್ಗೆ ಮಾತನಾಡಿದ ತೇಜಸ್ವಿನಿ, "ಈ ಪ್ರಕ್ರಿಯೆ ನನ್ನ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಭಾರೀ ಪರಿಣಾಮ ಬೀರಿತು. ಆಗಿದ್ದ ನಾನು, ಈಗಿರುವ ನಾನು ಸಂಪೂರ್ಣ ವಿಭಿನ್ನ ವ್ಯಕ್ತಿ. ಮಾನಸಿಕವಾಗಿ ನಾನು ಹೆಚ್ಚು ಗಟ್ಟಿಯಾಗಿದ್ದೇನೆ. ಆದರೆ ದೈಹಿಕವಾಗಿ ನನ್ನ ದೇಹದ ಆಕಾರವೇ ಬದಲಾಗಿದೆ. ಕಾರಣ, ನಾನು 1,000ಕ್ಕೂ ಹೆಚ್ಚು ಇಂಜೆಕ್ಷನ್‌ಗಳನ್ನು ತೆಗೆದುಕೊಂಡಿದ್ದೇನೆ. ಗರ್ಭಧಾರಣೆ ಯಶಸ್ವಿಯಾದರೆ ಮಾತ್ರ ಆ ಇಂಜೆಕ್ಷನ್‌ಗಳನ್ನು ನಿಲ್ಲಿಸುತ್ತಾರೆ" ಎಂದು ಹೇಳಿದ್ದಾರೆ.

'ಎರಡು ಬಾರಿ ಗರ್ಭಪಾತ... ಮಾನಸಿಕವಾಗಿ ಕುಸಿದುಹೋಗಿದ್ದೆ'

ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡ ಅವರು, "ನನ್ನ ಮೊದಲ ನಾಲ್ಕು ಪ್ರಯತ್ನಗಳು ವಿಫಲವಾದವು. ಐದನೇ ಬಾರಿ ಮಾತ್ರ ಅದೃಷ್ಟ ಕೈಹಿಡಿಯಿತು. ಅದರ ನಡುವೆ ಎರಡು ಬಾರಿ ಗರ್ಭಪಾತವೂ ಆಯಿತು. ಅಂಥ ಸಂದರ್ಭಗಳಲ್ಲಿ ಮಾನಸಿಕವಾಗಿ ಸಂಪೂರ್ಣ ಕುಸಿದುಹೋಗುತ್ತೇವೆ. ಅದು ನನ್ನ ಜೀವನದ ಅತ್ಯಂತ ಕಠಿಣ ಅವಧಿಯಾಗಿತ್ತು" ಎಂದು ಭಾವುಕರಾಗಿ ಹೇಳಿದ್ದಾರೆ.

actress Tejaswini Kolhapure
'ನನ್ನನ್ನು ಏಕೆ 'ಹಿಂದೂ ವಿರೋಧಿ' ಎಂದು ಬಿಂಬಿಸುತ್ತಿದ್ದೀರಿ? ಹಿಂದುತ್ವಕ್ಕೂ ನನಗೂ ಯಾವುದೇ ಸಂಬಂಧವಿಲ್ಲ': ನಟ ಪ್ರಕಾಶ್ ರಾಜ್

ಯಾರು ಈ ತೇಜಸ್ವಿನಿ ಕೊಲ್ಹಾಪುರೆ?

ತೇಜಸ್ವಿನಿ ಕೊಲ್ಹಾಪುರೆ ಅವರು ನಿರ್ದೇಶಕ ಹಾಗೂ ನಟ ಪಂಕಜ್ ಸರಸ್ವತ್ ಅವರನ್ನು ವಿವಾಹವಾಗಿದ್ದು, ಅವರಿಗೆ ವೇದಿಕಾ ಎಂಬ ಮಗಳಿದ್ದಾಳೆ. ಮದುವೆಯಾಗಿ ಎಂಟು ವರ್ಷಗಳ ನಂತರ, 2015ರ ಜನವರಿ 30ರಂದು ಅವರು ಮೊದಲ ಮಗುವಿಗೆ ಜನ್ಮ ನೀಡಿದರು.

ತೇಜಸ್ವಿನಿ ಅವರು ಹಿರಿಯ ನಟಿ ಪದ್ಮಿನಿ ಕೊಲ್ಹಾಪುರೆ ಅವರ ತಂಗಿ. ಮತ್ತೊಬ್ಬ ಸಹೋದರಿ ಶಿವಾಂಗಿ ಕೊಲ್ಹಾಪುರೆ ಅವರು ನಟ ಶಕ್ತಿ ಕಪೂರ್ ಅವರ ಪತ್ನಿಯಾಗಿದ್ದು, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ನಟ ಸಿದ್ಧಾಂತ್ ಕಪೂರ್ ಅವರಿಗೆ ತೇಜಸ್ವಿನಿ ಚಿಕ್ಕಮ್ಮರಾಗಿದ್ದಾರೆ.

ತೇಜಸ್ವಿನಿ ಅವರು ದೂರದರ್ಶನದ 'ಮುಝೇ ಚಾಂದ್ ಚಾಹಿಯೇ' ಧಾರಾವಾಹಿಯ ಮೂಲಕ ಅಭಿನಯ ಆರಂಭಿಸಿದರು. ಬಳಿಕ 'ದಿ ಮ್ಯಾಜಿಕ್ ಪಿಲ್', 'ದಿ ಗ್ರಾಜುಯೇಟ್' ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದರು. ಅನುರಾಗ್ ಕಶ್ಯಪ್ ಅವರ 'ಪಾಂಚ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಲು ಉದ್ದೇಶಿಸಿದ್ದ ಅವರು, ನಂತರ 'ರಾವಣ್' (2010), 'ಅಗ್ಲಿ' (2013) ಹಾಗೂ ಇತ್ತೀಚೆಗೆ 'ದಾದಿ ಕಿ ಶಾದಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com