ಉಪವಾಸ ಅಂತ್ಯಗೊಳಿಸಲು ಷರತ್ತು ವಿಧಿಸಿದ ಸೋನಮ್ ವಾಂಗ್‌ಚುಕ್

ಪ್ರತಿಭಟನೆಯನ್ನು ಶಾಂತಿಯುತ ಎಂದು ಹೇಳಿದ ಅವರು, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಸಮಾನ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.
Sonam Wangchuk
ಸೋನಮ್ ವಾಂಗ್ಚುಕ್online desk
Updated on

ನವದೆಹಲಿ: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಮತ್ತು 'ಚಲೋ ಸಂಸದ್' ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಕಾನೂನು ರಕ್ಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಭರವಸೆ ನೀಡಿದರೆ ತನ್ನ ಅನಿರ್ದಿಷ್ಟಾವಧಿ ಉಪವಾಸವನ್ನು ಕೊನೆಗೊಳಿಸಲು ಸಿದ್ಧನಿದ್ದೇನೆ ಎಂದು ಸೋನಮ್ ವಾಂಗ್‌ಚುಕ್ ಬುಧವಾರ ಹೇಳಿದ್ದಾರೆ.

ಶಿಕ್ಷಣ ಸಚಿವ ಧರಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪರಿಗಣಿಸುವುದು ಸೇರಿದಂತೆ (ಶಿಕ್ಷಣ ವ್ಯವಸ್ಥೆಯಲ್ಲಿ) ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಅವರು ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಮಂಗಳವಾರ ರಾತ್ರಿ ಅವರನ್ನು ಭೇಟಿ ಮಾಡಿ ಉಪವಾಸವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ ನಂತರ ವಾಂಗ್‌ಚುಕ್ ಹೇಳಿಕೆ ನೀಡಿದ್ದಾರೆ.

Sonam Wangchuk
ಉಪವಾಸ ಅಂತ್ಯಗೊಳಿಸುವಂತೆ ಸೋನಮ್ ವಾಂಗ್‌ಚುಕ್‌ಗೆ ಪ್ರತಿಪಕ್ಷಗಳ ಸಂಸದರ ನಿಯೋಗ, CJP ಮನವಿ!

ಜುಲೈ 20 ರ 'ಚಲೋ ಸಂಸದ್' ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ, ಕಿರುಕುಳ ಅಥವಾ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ವಾಂಗ್‌ಚುಕ್ ಸಚಿವರಿಂದ ಭರವಸೆ ಕೋರಿದರು.

ಪ್ರತಿಭಟನೆಯನ್ನು ಶಾಂತಿಯುತ ಎಂದು ಹೇಳಿದ ಅವರು, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಸಮಾನ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

"ಅಂತಹ ಭರವಸೆ ನೀಡಿದರೆ, ಸರ್ಕಾರ ನನ್ನ ಮನವಿಯನ್ನು ಮಾತ್ರವಲ್ಲದೆ ಲಕ್ಷಾಂತರ ಯುವ ಭಾರತೀಯರ ಆಕಾಂಕ್ಷೆಗಳನ್ನು ಸಹ ಆಲಿಸಿದೆ ಎಂಬ ನಂಬಿಕೆಯೊಂದಿಗೆ ನಾನು ನನ್ನ ಉಪವಾಸವನ್ನು ಕೊನೆಗೊಳಿಸುತ್ತೇನೆ. ಅಂತಹ ಭರವಸೆ ಇಲ್ಲದಿದ್ದರೆ, ನಾನು ನನ್ನ ಉಪವಾಸವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಬೇಕಾಗುತ್ತದೆ" ಎಂದು ವಾಂಗ್ಚುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com