ಪ್ರಧಾನ್ ರಾಜಿನಾಮೆ ಕುರಿತು ಕೇಂದ್ರ ನಾಳೆ ನಿರ್ಧಾರ; ಮೃತ NEET ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ ಪರಿಹಾರಕ್ಕೆ ತಾತ್ವಿಕ ಒಪ್ಪಿಗೆ: CJP; Video

ಪ್ರತಿಭಟನಾನಿರತ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ವಕ್ತಾರರು ಇಂದು ಕೇಂದ್ರ ಸಚಿವರಾದ ಜೆ.ಪಿ ನಡ್ಡಾ(JP Nadda) ಮತ್ತು ಜಿತೇಂದ್ರ ಸಿಂಗ್ (Jitendra Singh) ಅವರು ದೆಹಲಿಯ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಭೇಟಿಯಾಗಿ ತಮ್ಮ ಮೂರು ಬೇಡಿಕೆಗಳನ್ನು ಮುಂದಿಟ್ಟರು.
Jitendra Singh, JP Nadda, Sourav Das
ಜಿತೇಂದ್ರ ಸಿಂಗ್, ಜೆ.ಪಿ ನಡ್ಡಾ, ಸೌರವ್ ದಾಸ್
Updated on

ನವದೆಹಲಿ: ಪ್ರತಿಭಟನಾನಿರತ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ವಕ್ತಾರರು ಇಂದು ಕೇಂದ್ರ ಸಚಿವರಾದ ಜೆ.ಪಿ ನಡ್ಡಾ(JP Nadda) ಮತ್ತು ಜಿತೇಂದ್ರ ಸಿಂಗ್ (Jitendra Singh) ಅವರು ದೆಹಲಿಯ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಭೇಟಿಯಾಗಿ ತಮ್ಮ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದು ಈ ಪೈಕಿ ಎರಡು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆ ಕುರಿತಂತೆ ನಾಳೆ ಅಂತಿಮ ನಿರ್ಧಾರ ತಿಳಿಸುವುದಾಗಿ ಸಚಿವರು ತಿಳಿಸಿದ್ದಾರೆ ಎಂದು CJP ವಕ್ತಾರರು ತಿಳಿಸಿದ್ದಾರೆ.

ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಕೇಂದ್ರ ಸಚಿವರ ಜೊತೆ ಇಂದು ಎರಡನೇ ಸುತ್ತಿನ ಸಭೆ ನಡೆಸಿದರು. ಈ ವೇಳೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರ ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಕೇಂದ್ರವು ಶೀಘ್ರದಲ್ಲೇ ಅವರನ್ನು ವಜಾಗೊಳಿಸುತ್ತದೆ ಎಂದು ಅವರು ಆಶಿಸಿದ್ದಾರೆ.

ನಮ್ಮ ಮೂರು ಬೇಡಿಕೆಗಳ ಪೈಕಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಾಕಲಾಗಿರುವ ಕೇಸ್‌ಗಳನ್ನು ಹಿಂದಕ್ಕೆ ಪಡೆಯುವುದು ಮತ್ತು ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ನೀಟ್‌ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ಕೊಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದು ಈ ಎರಡು ಬೇಡಿಕೆ ಈಡೇರಿಸುವ ಕುರಿತಂತೆ ಸರ್ಕಾರ ತಾತ್ವಿಕವಾಗಿ ಅನುಮೋದನೆ ನೀಡಿದೆ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಹೇಳಿದರು.

Jitendra Singh, JP Nadda, Sourav Das
ನಿಮ್ಮ ಪ್ರೀತಿಯ ಗೆಳೆಯ ಮೋದಿಗೆ ರಾಜೀನಾಮೆ ನೀಡುವಂತೆ ಹೇಳಿ: ಇನ್‌ಸ್ಟಾಗ್ರಾಂ ಮೂಲಕ ಇಟಲಿ ಪ್ರಧಾನಿ ಮೆಲೋನಿಗೆ ಮನವಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com