ಪ್ರಧಾನ್ ರಾಜೀನಾಮೆ ನಂತರ ಜಂತರ್ ಮಂತರ್ ನಲ್ಲಿ ಕಲ್ಲು ತೂರಾಟ

ಪ್ರತಿಭಟನಾಕಾರರ ಒಂದು ಭಾಗವು ಹಿಂಸಾತ್ಮಕವಾಗಿ ತಿರುಗಿ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಘರ್ಷಣೆ ಭುಗಿಲೆದ್ದಿತು.
Abhijeet Dipke
ಅಭಿಜಿತ್ ದೀಪ್ಕೆonline desk
Updated on

ನವದೆಹಲಿ: ಶನಿವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಘೋಷಣೆಯಾದ ಸ್ವಲ್ಪ ಸಮಯದ ನಂತರ ಜಂತರ್ ಮಂತರ್‌ನಲ್ಲಿ ಕಲ್ಲು ತೂರಾಟ ನಡೆಯಿತು, ಇದರಿಂದಾಗಿ ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ, ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನಾಕಾರರ ಒಂದು ಭಾಗವು ಹಿಂಸಾತ್ಮಕವಾಗಿ ತಿರುಗಿ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಘರ್ಷಣೆ ಭುಗಿಲೆದ್ದಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಪ್ರದೇಶದಲ್ಲಿ ಸಾಕಷ್ಟು ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Abhijeet Dipke
ದೇಶದ ಪ್ರತಿಯೊಬ್ಬ ಆಡಳಿತಗಾರನಿಗೂ ಎಚ್ಚರಿಕೆಯ ಪಾಠ; ಕಾಂಗ್ರೆಸ್ ಬಲವಾಗಿ ಬೆಂಬಲಿಸಿತು- ಪ್ರಿಯಾಂಕಾ ಗಾಂಧಿ

ಇನ್ನು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೇಶಾದ್ಯಂತ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ, ಕಾಕ್ರೋಚ್ ಜನತಾ ಪಕ್ಷ ಶನಿವಾರ ತಮ್ಮ ಮೂರು ಬೇಡಿಕೆಗಳನ್ನು ಲಿಖಿತವಾಗಿ ಸ್ವೀಕರಿಸುವಂತೆ ಒತ್ತಾಯಿಸಿ, ಸಂಜೆ ಮೇಣದಬತ್ತಿ ಮೆರವಣಿಗೆಗೆ ಕರೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com