ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
Tejasvi Surya, DK Shivakumar
ತೇಜಸ್ವಿ ಸೂರ್ಯ, ಡಿಕೆ ಶಿವಕುಮಾರ್
Updated on

ನವದೆಹಲಿ: ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಗೆ ಬಂದು ಪ್ರತಿಭಟನೆಯ ನಾಟಕವಾಡುವ ನಿಮಗೆ ಕರ್ನಾಟಕದಲ್ಲಿ KPSCಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ? 80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ ಸಿಎಂ ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

Tejasvi Surya, DK Shivakumar
ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ಕೇವಲ KPSC ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ? ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com