LS Debate: ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು, ತತ್ತರಿಸಿ ಹೋಗಿದೆ- ಅಖಿಲೇಶ್ ಯಾದವ್

"ಜಬ್ ಸರ್ಕಾರ್ ದಾರ್ ಜಾತಿ ಹೈ, ಘಬ್ರಾ ಜಾತಿ ಹೈ, ಟು ಸ್ವೀಕರ್ ಕರ್ ಲೇತಿ ಹೈ... ಸರ್ಕಾರ್ ಝುಕಿ ಔರ್ ಸ್ವೀಕರ್ ಕಿಯಾ (ಸರ್ಕಾರ ಗಲಿಬಿಲಿಗೊಂಡಾಗ, ಅದು ಸ್ವೀಕರಿಸುತ್ತದೆ... ಸರ್ಕಾರವು ಬಾಗಿ ಬೇಡಿಕೆಗಳನ್ನು ಸ್ವೀಕರಿಸುತ್ತದೆ)" ಎಂದು ಅವರು ಹೇಳಿದರು.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Updated on

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ವಿದ್ಯಾರ್ಥಿಗಳ ಹೋರಾಟವನ್ನು ಪೋಷಕರು ಬೆಂಬಲಿಸಿದ್ದರಿಂದ ಬೇಡಿಕೆಗಳನ್ನು ಸರ್ಕಾರ ಬಲವಂತದಿಂದ ಈಡೇರಿಸಿತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.

ಅಲ್ಲದೇ ಸಮಸ್ಯೆಯನ್ನು ಕೇಂದ್ರ ಸರ್ಕಾರ ನಿಭಾಯಿಸುವ ರೀತಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ರ ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಯಾದವ್, ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು ಎಂದು ಹೇಳುವ ಮೂಲಕ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಉಲ್ಲೇಖಿಸಿದರು.

"ಜಬ್ ಸರ್ಕಾರ್ ದಾರ್ ಜಾತಿ ಹೈ, ಘಬ್ರಾ ಜಾತಿ ಹೈ, ಟು ಸ್ವೀಕರ್ ಕರ್ ಲೇತಿ ಹೈ... ಸರ್ಕಾರ್ ಝುಕಿ ಔರ್ ಸ್ವೀಕರ್ ಕಿಯಾ (ಸರ್ಕಾರವು ಗಲಿಬಿಲಿಗೊಂಡಾಗ, ಅದು ಸ್ವೀಕರಿಸುತ್ತದೆ... ಸರ್ಕಾರವು ಬಾಗಿ ಬೇಡಿಕೆಗಳನ್ನು ಸ್ವೀಕರಿಸುತ್ತದೆ)" ಎಂದು ಅವರು ಹೇಳಿದರು.

ಪೋಷಕರಿಂದ ವ್ಯಾಪಕ ಬೆಂಬಲವನ್ನು ಪಡೆದ ಮೊದಲ ವಿದ್ಯಾರ್ಥಿ ಚಳವಳಿ: ನಾನು ದೂರದಿಂದ ಪ್ರತಿಭಟನೆಯನ್ನು ನೋಡುತ್ತಿದ್ದೆ. ಗೆಲುವಿನ ನಂತರ ಹೊರಬಿದ್ದ ಘೋಷಣೆಗಳು ಸರ್ಕಾರದ ವಿರುದ್ಧವಾಗಿದ್ದವು. ಈ ಸರ್ಕಾರ ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಹೇಳಿಕೊಳ್ಳುವಲ್ಲಿ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು. ಪೋಷಕರಿಂದ ವ್ಯಾಪಕ ಬೆಂಬಲವನ್ನು ಪಡೆದ ಮೊದಲ ವಿದ್ಯಾರ್ಥಿ ಚಳವಳಿ ಎಂದು ಯಾದವ್ ಈ ಹೋರಾಟವನ್ನು ಬಣ್ಣಿಸಿದರು.

ಪೊಲೀಸ್ ದೌರ್ಜನ್ಯವನ್ನು ತುರ್ತುಪರಿಸ್ಥಿಗೆ ಹೋಲಿಕೆ: ಪ್ರತಿಭಟನೆಗಳಿಗೆ ಪೊಲೀಸರ ಪ್ರತಿಕ್ರಿಯೆಯನ್ನು ಸಮಾಜವಾದಿ ಪಕ್ಷದ ನಾಯಕ ಟೀಕಿಸಿದರು, ವಿದ್ಯಾರ್ಥಿಗಳ ವಿರುದ್ಧ ವಿದ್ಯುತ್ ಲಾಠಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿದರು ಮತ್ತು ಈ ದಮನ ಕಾರ್ಯಾಚರಣೆಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದರು.

ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಆಲಿಸಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವ ಪರಿಸ್ಥಿತಿ ಅಥವಾ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರುವ ಪರಿಸ್ಥಿತಿ ಯಾವುದು ಉತ್ತಮ?" ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಯಾದವ್, "ನಾನು ತುರ್ತು ಪರಿಸ್ಥಿತಿಯನ್ನು ನೇರವಾಗಿ ನೋಡಿಲ್ಲ, ಆದರೆ ರಾಷ್ಟ್ರ ರಾಜಧಾನಿಯಲ್ಲಿ ಆಗ ಏನಾಯಿತು ಎಂಬುದರ ಪ್ರತಿಧ್ವನಿಗಳನ್ನು ನಾವು ನೋಡಿದ್ದೇವೆ. ವಿಷಯವು ಕಾನೂನಲ್ಲ; ನಿಮ್ಮ ಉದ್ದೇಶಗಳು ಪ್ರಾಮಾಣಿಕವಾಗಿಲ್ಲ. ನಿಮ್ಮ ಉದ್ದೇಶಗಳು ಪ್ರಾಮಾಣಿಕವಾದ ಕ್ಷಣ, ಪರೀಕ್ಷಾ ಪ್ರಕ್ರಿಯೆಯೂ ಶುದ್ಧವಾಗುತ್ತದೆ ಎಂದರು.

ಪರೀಕ್ಷಾ ಅಕ್ರಮಗಳ ಬಗ್ಗೆ ಬಿಜೆಪಿಯನ್ನು ಟೀಕಿಸಿದ ಅಖಿಲೇಶ್ ಯಾದವ್, "ರಾಮ ಮಂದಿರ ದೇಣಿಗೆ ಕಳ್ಳತನವನ್ನು ತಡೆಯಲು ಸಾಧ್ಯವಾಗದ ಜನರು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಹೇಗೆ ತಡೆಯಬಹುದು; ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅಡಿಯಲ್ಲಿ 20 ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಬಿಜೆಪಿ ಸರ್ಕಾರ ಭರವಸೆಗಳನ್ನು ಕೇವಲ 'ಜುಮ್ಲಾ'ಗಳು ಎಂದರು. ನೇಮಕಾತಿಯಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಸರ್ಕಾರ "ಕಿತ್ತುಕೊಂಡಿದೆ. ಉತ್ತರ ಪ್ರದೇಶದಲ್ಲಿ ಪರೀಕ್ಷಾ ದುಷ್ಕೃತ್ಯಗಳಿಗೆ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.

ಪ್ರಧಾನ್ ತೆಗೆದು ಪ್ರಧಾನಿಯನ್ನು ರಕ್ಷಿಸಿದ್ದೀರಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಹೊರಗುತ್ತಿಗೆಯನ್ನೂ ಅವರು ಟೀಕಿಸಿದರು, "ಇಡೀ ಸರ್ಕಾರವನ್ನು ಇದೇ ರೀತಿಯಲ್ಲಿ ಹೊರಗುತ್ತಿಗೆ ನೀಡಬಹುದು" ಎಂದು ವಿರೋಧ ಪಕ್ಷಗಳು ಭಯಪಡುತ್ತಿವೆ ಎಂದು ಹೇಳಿದರು.ಪ್ರಧಾನ್ ಅವರ ರಾಜೀನಾಮೆಯ ವಿಷಯದಲ್ಲಿ ಬಿಜೆಪಿಯನ್ನು ಟೀಕಿಸಿದ ಯಾದವ್, "ಸಚಿವರು (ಪ್ರಧಾನ್) ಸಂಸತ್ತಿಗೆ ಆಗಮಿಸಿದಾಗ, ಅವರನ್ನು ಸದನದ ಹೊರಗೆ ಸ್ವಾಗತಿಸಲಾಯಿತು. ಸದಸ್ಯರು ಎಷ್ಟು ದೊಡ್ಡ ನಿರಾಳತೆ ಅನುಭವಿಸಿರಬಹುದು ಮತ್ತು ಯಾವ ದೊಡ್ಡ ಸಂಕಷ್ಟದಿಂದ ಪಾರಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ. ಒಬ್ಬ 'ಪ್ರಧಾನ್' ಅವರನ್ನು ತೆಗೆದುಹಾಕುವ ಮೂಲಕ, ನೀವು ವಾಸ್ತವವಾಗಿ 'ಪ್ರಧಾನ ಮಂತ್ರಿ'ಯವರನ್ನು ರಕ್ಷಿಸಿದ್ದೀರಿ," ಎಂದು ಹೇಳಿದರು.

ಅಖಿಲೇಶ್ ಯಾದವ್
Watch | ಪ್ರಶ್ನೆಪತ್ರಿಕೆ ಸೋರಿಕೆ ನಿಗ್ರಹ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

ಲಕ್ಷಾಂತರ ಯುವಕರು ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದರು ಎಂಬುದನ್ನು ಪುನರುಚ್ಚರಿಸಿದ ಅವರು, ಮಾಜಿ ಸಚಿವರನ್ನು ಹುದ್ದೆಯಿಂದ ತೆಗೆದುಹಾಕುವ ಕ್ರಮವು ಪ್ರಧಾನ ಮಂತ್ರಿಯವರನ್ನು ದೊಡ್ಡ ರಾಜಕೀಯ ಬಿಕ್ಕಟ್ಟಿನಿಂದ ರಕ್ಷಿಸಲು ಸಹಾಯ ಮಾಡಿತೇ ಎಂದು ಪ್ರಶ್ನಿಸಿದರು.

ಒಂದು ವಾರದ ಕಾಲದ ಬಿಕ್ಕಟ್ಟಿನ ನಂತರ, ಲೋಕಸಭೆಯು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ತಿದ್ದುಪಡಿ ಮಸೂದೆಯ ಕುರಿತು ಚರ್ಚೆಯನ್ನು ಕೈಗೆತ್ತಿಕೊಂಡಿತು. ಸೋಮವಾರ ಸರ್ಕಾರದ ವತಿಯಿಂದ ಮಂಡಿಸಲಾದ ಈ ಮಸೂದೆಯು, ಪ್ರಶ್ನೆಪತ್ರಿಕೆ ಸೋರಿಕೆ ಅಪರಾಧಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಲಕ್ಷ ರೂಪಾಯಿಗಳ ದಂಡದಂತಹ ಕಠಿಣ ಶಿಕ್ಷೆಗಳನ್ನು ವಿಧಿಸಲು ಪ್ರಸ್ತಾಪಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com