ಮಧ್ಯರಾತ್ರಿ ‘ಸೆಲ್ಫಿ ವಿಡಿಯೋ’ ಎಫೆಕ್ಟ್: ಇನ್​​ಸ್ಟಾಗ್ರಾಂನಲ್ಲಿ ಮೋದಿ ಹೊಸ ದಾಖಲೆ; 105 ಮಿಲಿಯನ್ ದಾಟಿದ ಫಾಲೋವರ್ಸ್!

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಅವರ ಫಾಲೋವರ್ಸ್ ಸಂಖ್ಯೆ ಈಗ 105 ಮಿಲಿಯನ್ ದಾಟಿದೆ.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಯ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ‘ಜೆನ್ ಝಿ’ಗಳನ್ನು ತಲುಪಲು ಮಧ್ಯ ರಾತ್ರಿ ‘ಸೆಲ್ಫಿ ವಿಡಿಯೋ’ ಮಾಡಿ ಇನ್‌ಸ್ಟಾಗ್ರಾಂ ರೀಲ್ಸ್ ಬಿಡುಗಡೆ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ತೀವ್ರ ಸಂಚಲನ ಮೂಡಿಸಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಅವರ ಫಾಲೋವರ್ಸ್ ಸಂಖ್ಯೆ ಈಗ 105 ಮಿಲಿಯನ್ ದಾಟಿದೆ.

ಪ್ರಧಾನಿ ಮೋದಿ ಅವರ ಫಾಲೋವರ್ಸ್ ಸಂಖ್ಯೆ ಕೆಲವೇ ದಿನಗಳಲ್ಲಿ ಸುಮಾರು ಮೂರು ಮಿಲಿಯನ್ ಹೆಚ್ಚಾಗಿದ್ದು, ಜಾಗತಿಕ ಮಟ್ಟದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ರಾಜಕೀಯ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

PM Narendra Modi
NEET ಪ್ರತಿಭಟನೆ ನಡುವೆ 12 ಗಂಟೆಗಳಲ್ಲಿ Modi Instagram ಫಾಲೋವರ್ಸ್ 11 ಲಕ್ಷ ಏರಿಕೆ, 280 ಮಿಲಿಯನ್ Views!

ಕಳೆದ ಗುರುವಾರ ರಾತ್ರಿ 11:52 ಕ್ಕೆ ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ತಡರಾತ್ರಿ ಸೆಲ್ಫಿ ವಿಡಿಯೋದ ಪರಿಣಾಮ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.

ವಿಡಿಯೋದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪ್ರಧಾನಿ ಮೋದಿ ಅವರು ನೇರವಾಗಿ ಉಲ್ಲೇಖಿಸಿದ್ದು, ಫ್ರೆಂಡ್ಸ್ ಎಂದು ಆತ್ಮೀಯವಾಗಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಈ ವೀಡಿಯೊದಲ್ಲಿ, ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕಾನೂನು ತರುವುದು ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದರು. ಈ ವಿಡಿಯೋ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 300 ಮಿಲಿಯನ್‌ಗಿಂತಲೂ(30 ಕೋಟಿ) ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಇನ್‌ಸ್ಟಾಗ್ರಾಂ ಇತಿಹಾಸದಲ್ಲೇ ಭಾರಿ ಸದ್ದು ಮಾಡಿತ್ತು. ಇದರಿಂದಾಗಿ ಲಕ್ಷಾಂತರ ಯುವಕರು ಒಂದೇ ರಾತ್ರಿಯಲ್ಲಿ ಮೋದಿಯವರ ಖಾತೆಯನ್ನು ಫಾಲೋ ಮಾಡಲು ಪ್ರಾರಂಭಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com