

ಸರ್ಕಾರ, ಗೃಹ ಇಲಾಖೆ ಯಾವ ಸಂಘ-ಸಂಸ್ಥೆಗಳ ಗುಲಾಮನಲ್ಲ, ಆರ್ ಎಸ್ ಎಸ್ ನವರು ತಮ್ಮ ದಾಖಲಾತಿಯನ್ನು, ಪಾರದರ್ಶಕ ವ್ಯವಹಾರಗಳನ್ನು ತೋರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಆರ್ ಎಸ್ ಎಸ್ ನವರು ನನ್ನ ಪತ್ರಕ್ಕೆ ಇದುವರೆಗೆ ಉತ್ತರ ನೀಡಿಲ್ಲ, ಅವರಿಂದ ಪ್ರತಿಕ್ರಿಯೆ ಹೇಗೆ ಪಡೆಯಬೇಕೆಂದು ನನಗೆ ಗೊತ್ತು, ಅದನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಭಾರತದ ಅತ್ಯಂತ ಪ್ರಗತಿಪರ ರಾಜ್ಯದ ಗೃಹ ಸಚಿವ ನಾನು, ಬುದ್ಧಿ ಉಪಯೋಗಿಸಿ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನನಗೆ ಗೊತ್ತಿದೆ ಎಂದರು.ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.
ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳ ಪರವಾಗಿ ಹೇಳಿಕೆ ನೀಡಿದ್ದು ಏಕೆ ಎಂದು ಸಚಿವ ಪ್ರಲ್ಹಾದ್ ಜೋಶಿಯನ್ನೇ ಕೇಳಿ, ಮೋಹನ್ ಭಾಗವತ್ ಅವರು ಬಳಸಿದ ಭಾಷೆ ಅಸಹನೀಯ, ಅವರನ್ನು ಜೈಲಿಗೆ ಕಳುಹಿಸಬೇಕು ಎಂದರು.
ಆರ್ ಎಸ್ ಎಸ್ ನ ತತ್ವ, ಆದರ್ಶಗಳು ಅಷ್ಟು ಉತ್ತಮವಾಗಿದ್ದರೆ ಬಿಜೆಪಿ ನಾಯಕರ ಮಕ್ಕಳು ಅದರ ಶಾಖಾದಲ್ಲಿ ಇಲ್ಲ ಏಕೆ, ಸ್ವಯಂಸೇವಕರು ಆಗಿಲ್ಲವೇಕೆ, ಅವರೇಕೆ ಗೋಮೂತ್ರ ಕುಡಿಯುವುದಿಲ್ಲ, ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೋಹನ್ ಭಾಗವತ್ ಅವರಿಗೆ ಯೋಚನೆಯಿದ್ದರೆ, ದೇಶದ ಆರ್ಥಿಕತೆ ಬಗ್ಗೆ, ದೇಶ ಹೇಗೆ ನಡೆಯಬೇಕೆಂದು ಹೇಳುವವರು ಅವರು ಬಿಲ್ಕಿಸ್ ಬಾನು ಕೇಸಿನ ಬಗ್ಗೆ ಮಾತನಾಡುವಾಗ ಬಳಸಿದ ಭಾಷೆ ಒಪ್ಪಸು ಸಾಧ್ಯವಿಲ್ಲ, ಬಹಿರಂಗವಾಗಿ ಅವರು ಕ್ಷಮೆ ಕೇಳಬೇಕು ಎಂದರು.
ದೆಹಲಿಯ ಜಂತರ್ ಮಂತರ್ ನಲ್ಲಿ ಅಷ್ಟೊಂದು ಘಟನೆಗಳು ನಡೆದರೂ ದೇಶದ ಗೃಹ ಮಂತ್ರಿಯಾಗಿ ಅಮಿತ್ ಶಾ ಅವರು ಹೇಳಿಕೆ ನೀಡಿಲ್ಲ, ವಿರೋಧ ಪಕ್ಷದವರಲ್ಲಿ ನೀವು ಪ್ರಶ್ನೆ ಕೇಳುತ್ತೀರಿ, ಯಾಕೆ ನೀವು ಆಡಳಿತ ಪಕ್ಷದವರನ್ನು, ಬಿಜೆಪಿಯವರನ್ನು ಕೇಳುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದರು.