

ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿರುವ ಕಾರ್ಖಾನೆಯಲ್ಲಿ ತಡರಾತ್ರಿ ವಿಷಕಾರಿ ಅನಿಲ ಸೋರಿಕೆ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ. ಅನಿಲ ಸೋರಿಕೆಯಿಂದಾಗಿ ಪ್ರಜ್ಞಾಹೀನರಾಗಿದ್ದ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ತಂದೆ, ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಗಾಸ್‌ಪುರ ನಿವಾಸಿಗಳಾದ ಮಾನ್ ಸಿಂಗ್ ಮತ್ತು ಅವರ ಮಗ ಅಮಿತ್ ಎಂದು ಗುರುತಿಸಲಾಗಿದೆ, ಆದರೆ ಇನ್ನೊಬ್ಬ ಮೃತ ವ್ಯಕ್ತಿಯ ಗುರುತು ಇನ್ನೂ ತಿಳಿದಿಲ್ಲ.
ಲುಧಿಯಾನದ ಗಾಸ್‌ಪುರದ ಗಗನ್ ನಗರ ಪ್ರದೇಶದಲ್ಲಿ ಉಪಕರಣ ತಯಾರಿಸುವ ಕಾರ್ಖಾನೆ ಇದೆ. ಭಾನುವಾರ ರಾತ್ರಿ ಕಾರ್ಮಿಕರು ಕಾರ್ಖಾನೆಗೆ ಆಗಮಿಸಿದರು. ತಡರಾತ್ರಿ ವಿಷಕಾರಿ ಅನಿಲ ಸೋರಿಕೆಯಾಗಿ ಕಾರ್ಮಿಕರನ್ನು ಹೊರ ತರಲಾಗಿತ್ತು. ಮೃತರ ಮಗಳು ರೇಣು, ತನ್ನ ತಂದೆಯನ್ನು ತಡರಾತ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
ಅನಿಲ ಸೋರಿಕೆ ಸಂಭವಿಸಿದಾಗ, ಕಾರ್ಖಾನೆ ಮಾಲೀಕರು ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿದರು. ಆದರೆ ಯಾವುದೇ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿರಲಿಲ್ಲ. ತಂದೆ ಬೆಳಗ್ಗೆ ಮನೆಗೆ ಬಾರದ ಕಾರಣ ಕಾರ್ಖಾನೆ ಬಳಿ ಹೋದಾಗ ಕೆಲವು ಕಾರ್ಮಿಕರು ಅನಿಲ ಸೋರಿಕೆಯಿಂದ ಮೂರ್ಛೆ ಹೋಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ವಿಚಾರ ತಿಳಿಯಿತು. ಆಸ್ಪತ್ರೆಗೆ ಬಂದಾಗ ನನ್ನ ತಂದೆ ಮಾನ್ ಸಿಂಗ್ ಮತ್ತು ಅಮಿತ್ ಮೃತಪಟ್ಟಿದ್ದಾರೆ ಎಂದು ತಿಳಿಯಿತು ಎಂದರು.
Advertisement