ಹೋಮ್ ಟೂರ್ ಮಾಡಿ ಮನೆಯ ಸಂಪತ್ತು ತೋರಿಸಿದ ಯೂಟ್ಯೂಬರ್: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ Robbers!

ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಚಿನ್ನಾಭರಣಗಳನ್ನು ಪ್ರದರ್ಶಿಸುತ್ತಿದ್ದ ಖ್ಯಾತ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ನಡುರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
YouTuber Rachna Gurjar
ಯೂಟ್ಯೂಬರ್ ರಚನಾ ಗುರ್ಜರ್
Updated on

ಶಿವಪುರಿ : ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈಯಕ್ತಿಕ ಸಂಪತ್ತು, ಐಷಾರಾಮಿ ಜೀವನಶೈಲಿ ಮತ್ತು ಆಭರಣಗಳನ್ನು ಅತಿಯಾಗಿ ಪ್ರದರ್ಶಿಸುವುದು ಎಷ್ಟು ದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ಭೀಕರ ಕಳ್ಳತನದ ಘಟನೆಯೇ ಸಾಕ್ಷಿಯಾಗಿದೆ.

ಮಹಿಳೆಯೊಬ್ಬರು ತಮ್ಮ ಮನೆಯಲ್ಲಿರುವ ಚಿನ್ನಾಭರಣ ಮತ್ತಿತ್ತರ ವಸ್ತುಗಳನ್ನು ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರದರ್ಶಿಸಿ ಅಪಾಯ ತಂದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಚಿನ್ನಾಭರಣಗಳನ್ನು ಪ್ರದರ್ಶಿಸುತ್ತಿದ್ದ ಖ್ಯಾತ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ನಡುರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಮಾಲು ದೋಚಿ ಪರಾರಿಯಾಗಿದ್ದಾರೆ.

ರಚನಾ ಗುರ್ಜರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಖ್ಯಾತಿ ಹೊಂದಿದ್ದು, ತಮ್ಮ ವಿಡಿಯೋಗಳಲ್ಲಿ ಕುತ್ತಿಗೆ ತುಂಬಾ ಚಿನ್ನದ ಹಾರ, ಕೈತುಂಬಾ ಬಳೆಗಳನ್ನು ಧರಿಸಿ ರೀಲ್ಸ್ ಮಾಡುತ್ತಿದ್ದರು. ಟೇಬಲ್ ಮೇಲೆ ಕಂತೆ ಕಂತೆ ನಗದು ಹಾಗೂ ಒಡವೆಗಳನ್ನು ಇಟ್ಟು ಪ್ರದರ್ಶಿಸುತ್ತಿದ್ದರು.

YouTuber Rachna Gurjar
ಬೆಂಗಳೂರು: ಕಲ್ಯಾಣ ಮಂಟಪದಲ್ಲಿ NRI ವೈದ್ಯೆಗೆ ಸೇರಿದ 1 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳ್ಳತನ!

ಶುಕ್ರವಾರ ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಕೆಂಪು ಬಣ್ಣದ ಮುಖವಾಡ ಧರಿಸಿ ಬಂದ ನಾಲ್ಕು ಜನ ಕಳ್ಳರು ಅತ್ಯಂತ ವ್ಯವಸ್ಥಿತವಾಗಿ ಸ್ಕೆಚ್ ಹಾಕಿ ಈ ಕಳ್ಳತನ ಮಾಡಿದ್ದಾರೆ. ಮೊದಲಿಗೆ ಮನೆಯ ಸುತ್ತಲೂ ಇದ್ದ ಸುಮಾರು 8 ಅಡಿ ಎತ್ತರದ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ.

ರಚನಾ ಗುರ್ಜರ್ ಹಾಗೂ ಅವರ ಪತಿ ಉದಲ್ ಸಿಂಗ್ ಗುರ್ಜರ್ ಮನೆಯ ಮೇಲಿನ ಮಹಡಿಯಲ್ಲಿ ಮಲಗಿದ್ದಾಗ, ಕಳ್ಳರು ಹೊರಗಿನಿಂದ ಅವರ ರೂಮಿನ ಚಿಲಕ ಹಾಕಿದ್ದಾರೆ. ಬಳಿಕ ಕೆಳಗಿನ ಕೋಣೆಯಲ್ಲಿದ್ದ ಅಲ್ಮಾರಿ ಕೀ ಮುರಿದು 1.91 ಲಕ್ಷ ರೂ. ನಗದು, ಚಿನ್ನದ ಮಂಗಳಸೂತ್ರ, 4 ಚಿನ್ನದ ಉಂಗುರಗಳು, ಬೆಳ್ಳಿಯ ಕರಡೂಣಿ ಸೇರಿದಂತೆ ಒಟ್ಟು 8 ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.

ರಾತ್ರಿ 2:30ರ ಸುಮಾರಿಗೆ ಪತಿ ಉದಲ್ ಸಿಂಗ್ ನೀರು ಕುಡಿಯಲು ಎದ್ದಾಗ ರೂಮಿನ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಗೊತ್ತಾಗಿದೆ. ತಕ್ಷಣ ಮೊಬೈಲ್‌ನಲ್ಲಿ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಕಳ್ಳರು ತಮ್ಮ ಗುರುತು ಸಿಗದಂತೆ ಮಾಡಲು ಸಿಸಿಟಿವಿ ಕ್ಯಾಮೆರಾಗಳನ್ನು ಕೋಲಿನ ಸಹಾಯದಿಂದ ಮೇಲ್ಮುಖವಾಗಿ ತಿರುಗಿಸಿ ವಿಕೃತಿ ಮೆರೆದಿದ್ದಾರೆ. ನಂತರ ಪಕ್ಕದ ಮನೆಯಲ್ಲಿದ್ದ ಸಂಬಂಧಿಕರಿಗೆ ಫೋನ್ ಮಾಡಿ ಬಾಗಿಲು ತೆರೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com