ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಜೊತೆಗೆ 'Nice' ಸೆಲ್ಫಿ: ಪ್ರಧಾನಿ ಮೋದಿ ಹೇಳಿದ್ದೇನು?

ಕರಾವಳಿ ನಗರವಾದ ನೈಸ್‌ನಲ್ಲಿ ಉಭಯ ನಾಯಕರು ಭೇಟಿಯಾದಾಗ ಈ ಸೆಲ್ಫಿ ತೆಗೆದುಕೊಂಡಿದ್ದು, ಇದು ಉಭಯ ದೇಶಗಳ ನಡುವಣ ಬಾಂಧವ್ಯವನ್ನು ತೋರಿಸುತ್ತದೆ.
PM Modi Shares A 'Nice' Selfie
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ
Updated on

ನೈಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಕರಾವಳಿ ನಗರವಾದ ನೈಸ್‌ನಲ್ಲಿ ಉಭಯ ನಾಯಕರು ಭೇಟಿಯಾದಾಗ ಈ ಸೆಲ್ಫಿ ತೆಗೆದುಕೊಂಡಿದ್ದು, ಇದು ಉಭಯ ದೇಶಗಳ ನಡುವಣ ಬಾಂಧವ್ಯವನ್ನು ತೋರಿಸುತ್ತದೆ.

ಸೆಲ್ಫಿ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನೈಸ್‌ನಲ್ಲಿ ನಿಮ್ಮನ್ನು ಭೇಟಿಯಾದದ್ದು ಅತೀವ ಸಂತಸವಾಯಿತು. ಫಲಪ್ರದ ಮಾತುಕತೆಯಾಗಿದ್ದು, ಭಾರತ-ಫ್ರಾನ್ಸ್ ಪಾಲುದಾರಿಕೆ ಉತ್ತುಂಗಮಟ್ಟ ಕ್ಕೇರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು, ಮ್ಯಾಕ್ರನ್ ಅದೇ ಸೆಲ್ಫಿಯನ್ನು "ನೈಸ್" ಎಂಬ ಪದದೊಂದಿಗೆ ಪೋಸ್ಟ್ ಮಾಡಿದ್ದರು.

ಭಾನುವಾರ ಭಾರತ ಮತ್ತು ಫ್ರಾನ್ಸ್ ತಮ್ಮ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ಈಗ ಇರುವ $16 ಬಿಲಿಯನ್‌ನಿಂದ ದ್ವಿಗುಣಗೊಳಿಸುವ ಐದು ವರ್ಷಗಳ ಗುರಿಯನ್ನು ಹೊಂದಿದ್ದು, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ನಡುವಿನ ಮಾತುಕತೆಯ ನಂತರ ನಿರ್ಣಾಯಕ ವಲಯಗಳಲ್ಲಿ ಸಂಬಂಧಗಳನ್ನು ವಿಸ್ತರಿಸಲು ಚರ್ಚಿಸಲಾಗಿದೆ.

PM Modi Shares A 'Nice' Selfie
Watch | ಪ್ರಧಾನಿ ಮೋದಿ ಪಂಚ ರಾಷ್ಟ್ರ ಪ್ರವಾಸ; UAE ಜೊತೆ LPG ಒಪ್ಪಂದ; ಏನಾದ್ರು ಪರಿಣಾಮ ಬೀರುತ್ತಾ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com