ಮಧ್ಯಪ್ರಾಚ್ಯ ಸಂಘರ್ಷ ಅಂತ್ಯ: ಅಮೆರಿಕ-ಇರಾನ್ ಒಪ್ಪಂದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ; ಹಾರ್ಮುಜ್ ಜಲಸಂಧಿ ಪುನರಾರಂಭಕ್ಕೆ ಸಂತಸ

ಮಧ್ಯಪ್ರಾಚ್ಯ ಸಂಘರ್ಷ ಅಂತ್ಯಗೊಳಿಸುವ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ಮೂಡಿರುವ ಪರಸ್ಪರ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ.
PM Modi
ಪ್ರಧಾನಿ ಮೋದಿ
Updated on

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ಮುಂದುವರಿದಿದ್ದ ಉದ್ವಿಗ್ನತೆ ಅಂತ್ಯಗೊಳಿಸಲು ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸ್ವಾಗತಿಸಿದ್ದಾರೆ.

ಈ ಒಪ್ಪಂದದಿಂದ ಜಾಗತಿಕ ಆರ್ಥಿಕತೆಗೆ ಉಂಟಾಗಿದ್ದ ಅಡಚಣೆಗಳು ನಿವಾರಣೆಯಾಗುವ ಜೊತೆಗೆ, ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಯುರೋಪ್ ಪ್ರವಾಸದ ಅಂಗವಾಗಿ ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾಹೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಮಧ್ಯಪ್ರಾಚ್ಯ ಸಂಘರ್ಷ ಅಂತ್ಯಗೊಳಿಸುವ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ಮೂಡಿರುವ ಪರಸ್ಪರ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಈ ಸಂಘರ್ಷದಿಂದ ವಿಶ್ವದಾದ್ಯಂತ ಆರ್ಥಿಕ ವ್ಯತ್ಯಯ ಉಂಟಾಗಿದ್ದು, ಹಲವು ದೇಶಗಳಲ್ಲಿ ಜೀವಹಾನಿಯೂ ಸಂಭವಿಸಿದೆ.

ಈ ಒಪ್ಪಂದದ ಅನುಷ್ಠಾನದಿಂದ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಯಾಗಲಿ. ಜೊತೆಗೆ ಸಾಗರ ಮಾರ್ಗದ ಸಂಚಾರ ಹಾಗೂ ವ್ಯಾಪಾರದ ಸ್ವಾತಂತ್ರ್ಯ ಪುನಃ ಖಚಿತವಾಗಲಿ ಎಂಬುದು ಭಾರತದ ಆಶಯವಾಗಿದೆ” ಎಂದು ತಿಳಿಸಿದ್ದಾರೆ.

PM Modi
ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ, “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ ಎಂದು ಘೋಷಿಸಿದ್ದರು.

ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಶುಕ್ರವಾರದಿಂದ ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದರು. ಅಲ್ಲದೆ, ಇರಾನ್ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧವನ್ನು ಅಂತ್ಯಗೊಳಿಸುವಂತೆ ಸೂಚಿಸಿರುವುದಾಗಿಯೂ ಹೇಳಿದ್ದರು. “ಜಗತ್ತಿನ ಹಡಗುಗಳೇ, ಮತ್ತೆ ಸಂಚಾರ ಆರಂಭಿಸಿ. ತೈಲ ಹರಿಯಲಿ!” ಎಂದು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದರು.

ಇದೇ ವೇಳೆ, ಶೆಹಬಾಜ್ ಷರೀಫ್ ಕೂಡ ಒಪ್ಪಂದವಾಗಿರುವುದನ್ನು ದೃಢಪಡಿಸಿದ್ದು, ಎಲ್ಲ ವಲಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಲೆಬನಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಸ್ಥಗಿತಗೊಳಿಸುವ ಅಂಶ ಈ ಒಪ್ಪಂದದಲ್ಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com