ಅಯೋಧ್ಯೆಯ ಶ್ರೀರಾಮನಿಗೆ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಅರ್ಪಿಸಿದ ಭಕ್ತ; ಈ "ಸೂರ್ಯನ ಮೊಟ್ಟೆ" ಬೆಲೆ ಎಷ್ಟು ಗೊತ್ತಾ?

ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಸೋಮವಾರ ದೇವರಿಗೆ ಈ ಮಾವಿನ ಹಣ್ಣನ್ನು ನೈವೇದ್ಯಯಾಗಿ ಅರ್ಪಿಸಲಾಯಿತು.
World's costliest Miyazaki mango offered to Lord Ram in Ayodhya
ಅತ್ಯಂತ ದುಬಾರಿ ಮಾವಿನ ಹಣ್ಣು
Updated on

ಅಯೋಧ್ಯೆ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು, "ಸೂರ್ಯನ ಮೊಟ್ಟೆ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಪಾನಿನ ಮಿಯಾಝಾಕಿ ವಿಧದ ಹಣ್ಣನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ಮೊದಲ ಬಾರಿಗೆ ಶ್ರೀರಾಮನಿಗೆ ಅರ್ಪಿಸಲಾಯಿತು.

ಅಯೋಧ್ಯೆಯಲ್ಲಿ ಸ್ಥಳೀಯ ರೈತನೊಬ್ಬ ಬೆಳೆಯುವ ಅಪರೂಪದ ಮಾವಿನ ಹಣ್ಣನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.5 ಲಕ್ಷದಿಂದ 3 ಲಕ್ಷ ರೂ.ಗಳವರೆಗೆ ಮಾರಾಟವಾಗುತ್ತದೆ. ಒಂದು ಹಣ್ಣಿಗೆ ಸುಮಾರು 1 ಲಕ್ಷ ರೂ. ಬೆಲೆ ಇದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಮಾವಿನ ವಿಧಗಳಲ್ಲಿ ಒಂದಾಗಿದೆ.

ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಸೋಮವಾರ ದೇವರಿಗೆ ಈ ಮಾವಿನ ಹಣ್ಣನ್ನು ನೈವೇದ್ಯಯಾಗಿ ಅರ್ಪಿಸಲಾಯಿತು. ತುಳಸಿ(ಪವಿತ್ರ ತುಳಸಿ) ಎಲೆಯೊಂದಿಗೆ ಹಣ್ಣನ್ನು ಅರ್ಪಿಸಲಾಯಿತು.

ಅಯೋಧ್ಯೆಯ ಹವಾಮಾನ ಪರಿಸ್ಥಿತಿಗಳಿಗೆ ಅದರ ಸೂಕ್ತತೆಯನ್ನು ನಿರ್ಣಯಿಸಲು ಸುಮಾರು ಎರಡು ವರ್ಷಗಳ ಹಿಂದೆ ಈ ಮರವನ್ನು ನೆಟ್ಟ ರೈತ ಓಂಪ್ರಕಾಶ್ ಸಿಂಗ್ ಅವರು ಮಿಯಾಝಾಕಿ ಮಾವನ್ನು ಬೆಳೆಸಿದ್ದಾರೆ.

World's costliest Miyazaki mango offered to Lord Ram in Ayodhya
'ರಾಮ ಮಂದಿರ ದೇಣಿಗೆ ನಿಧಿಯಿಂದ ಕೋಟ್ಯಂತರ ರೂ ಮಾಯ': ಅಖಿಲೇಶ್ ಯಾದವ್ ಆರೋಪ; ಟ್ರಸ್ಟ್ ಹೇಳಿದ್ದೇನು?

ಸಿಂಗ್ ಪ್ರಕಾರ, ಈ ಮರವು ಸ್ಥಳೀಯ ಪರಿಸರಕ್ಕೆ ಯಶಸ್ವಿಯಾಗಿ ಹೊಂದಿಕೊಂಡಿದ್ದು, ಈ ಋತುವಿನಲ್ಲಿ ಸುಮಾರು ಒಂದು ಡಜನ್ ಹಣ್ಣುಗಳನ್ನು ಬಿಟ್ಟಿದೆ.

ANI ಜೊತೆ ಮಾತನಾಡಿದ ಸಿಂಗ್, ಮಿಯಾಝಾಕಿ ಮಾವು ಅದರ ಅಸಾಧಾರಣ ಸಿಹಿ, ಹೆಚ್ಚಿನ ನಾರಿನ ಅಂಶ ಮತ್ತು ಪೌಷ್ಟಿಕಾಂಶದ ಮೌಲ್ಯಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದ್ದಾರೆ.

"ಇದು ಜಪಾನ್‌ನಿಂದ ಬಂದಿರುವ ಮಿಯಾಝಾಕಿ ಎಂದು ಕರೆಯಲ್ಪಡುವ ಅತ್ಯಂತ ಪ್ರಸಿದ್ಧ ಮಾವಿನ ಹಣ್ಣು. ಇದು ವಿಶ್ವದ ಅತ್ಯಂತ ದುಬಾರಿ ಮಾವು. ಇದು ಇತರ ಪ್ರಭೇದಗಳಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಫೈಬರ್‌ನಿಂದ ಸಮೃದ್ಧವಾಗಿದೆ ಮತ್ತು ಜೀವಸತ್ವಗಳಿಂದ ತುಂಬಿರುತ್ತದೆ" ಎಂದು ಸಿಂಗ್ ಹೇಳಿದರು.

World's costliest Miyazaki mango offered to Lord Ram in Ayodhya
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಾವಿನಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com