ನಮ್ಮಪ್ಪ ಈಗಾಗ್ಲೇ ತುಂಬಾ ಖರ್ಚು ಮಾಡಿದ್ದಾರೆ; ಮತ್ತೆ ಪರೀಕ್ಷೆ ಬರೆಯಲು ಭಯ: ಸಂದೇಶ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಮತ್ತೆ ಪರೀಕ್ಷೆ ಬರೆಯಲು ನನಗೆ ಭಯವಾಗುತ್ತದೆ" ಎಂದು 19 ವರ್ಷದ ನೀಟ್ ಪರೀಕ್ಷೆ ಆಕಾಂಕ್ಷಿ ಅನುಕೀರ್ತನಾ ಸಂಬಂಧಿಕರಿಗೆ ವಾಟ್ಸಾಪ್ ಮೆಸೇಜ್ ಕಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Anu keerthana
ಅನು ಕೀರ್ತನಾ
Updated on

ಕೊಯಂಬತ್ತೂರು: ನೀಟ್‌' ಪರೀಕ್ಷೆ ಭಯದಿಂದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಅನುಕೀರ್ತನಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದು, ಮೂರನೇ ಬಾರಿಗೆ ಸಿದ್ಧತೆ ನಡೆಸುತ್ತಿದ್ದಳು. ಇತ್ತೀಚೆಗೆ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಪರಿಣಾಮ ಮರುಪರೀಕ್ಷೆ ನಡೆಸುವ ನಿರ್ಧಾರದಿಂದ ಅನುಕೀರ್ತನಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ಪರೀಕ್ಷೆ ಬರೆಯಲು ನನಗೆ ಭಯವಾಗುತ್ತದೆ" ಎಂದು 19 ವರ್ಷದ ನೀಟ್ ಪರೀಕ್ಷೆ ಆಕಾಂಕ್ಷಿ ಅನುಕೀರ್ತನಾ ಸಂಬಂಧಿಕರಿಗೆ ವಾಟ್ಸಾಪ್ ಮೆಸೇಜ್ ಕಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಕೋವೈಪುದೂರಿನ ಪಾರ್ಕ್‌ ಟೌನ್‌ ನ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸೆಂಥಿಲ್ ಪ್ರಭು ಅವರ ಮಗಳೆಂದು ಗುರುತಿಸಲಾಗಿದೆ. ಪ್ರಭು ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅನುಕೀರ್ತನ ಅವರ ಹಿರಿಯ ಮಗಳಾಗಿದ್ದು, ಖಾಸಗಿ ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ ಆಗಿದ್ದರು

ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೆ, ತಮಿಳುನಾಡಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂಬ ದೀರ್ಘಕಾಲದ ಬೇಡಿಕೆಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Anu keerthana
ನೀಟ್ ಮರುಪರೀಕ್ಷೆ: ಮಿಲಿಟರಿ ದರ್ಜೆಯ ಭದ್ರತೆಯಿಂದ ಒತ್ತಡ ಹೆಚ್ಚಳ, ಹೊಸ ಸಮಸ್ಯೆ ಸೃಷ್ಟಿ; ಕೇಂದ್ರದ ವಿರುದ್ಧ ಅಣ್ಣಾಮಲೈ ಆಕ್ರೋಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com