ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಿಸಲು ನಾವು ಬಿಡುವುದಿಲ್ಲ: ತಮಿಳುನಾಡು ಸಚಿವ ಎನ್. ಆನಂದ್-Video

ನಮ್ಮ ಟಿವಿಕೆ ಸರ್ಕಾರವು ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕ ಜೊತೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
Tamil Nadu minister N Anand
ತಮಿಳು ನಾಡು ಸಚಿವ ಎನ್. ಆನಂದ್
Updated on

ನಮ್ಮ ಟಿವಿಕೆ ಸರ್ಕಾರವು ಕಾವೇರಿ ನೀರಿನ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಮೆಕೇದಾಟು ವಿಷಯ ಪ್ರಸ್ತಾಪವಾದ ತಕ್ಷಣವೇ ಮುಖ್ಯಮಂತ್ರಿ ಅವರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಅದರ ಮರುದಿನವೇ, ಮೇ 26ರಂದು, ಪತ್ರದ ಮೂಲಕವೂ ಹಾಗೂ ಪ್ರಧಾನಮಂತ್ರಿಯವರೊಂದಿಗೆ ನಡೆದ ವೈಯಕ್ತಿಕ ಭೇಟಿಯಲ್ಲಿಯೂ ಮೆಕೇದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿ ಅವರು ಬಲವಾಗಿ ಒತ್ತಾಯಿಸಿದ್ದಾರೆ ಎಂದು ತಮಿಳು ನಾಡು ಸಚಿವ ಎನ್. ಆನಂದ್ ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (National Green Tribunal) ಪ್ರಧಾನ ಪೀಠದ ಮುಂದೆ ಅರ್ಜಿಯನ್ನೂ ಸಲ್ಲಿಸಲಾಗಿದೆ ಎಂದರು.

ಮೇಕೆದಾಟು ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಪ್ರಧಾನಮಂತ್ರಿಯನ್ನು ನೇರವಾಗಿ ಭೇಟಿ ಮಾಡಿ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಹೊಸ ನ್ಯಾಯಮಂಡಳಿ (Tribunal) ಅಗತ್ಯವಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಮೇಕೆದಾಟು ಅಣೆಕಟ್ಟಿಗೆ ವಿರೋಧವಾಗಿ ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಪ್ರಧಾನಮಂತ್ರಿಗೆ ಕಳುಹಿಸಲಾಗಿದೆ ಎಂದರು.

ಹೊಸ ನ್ಯಾಯಮಂಡಳಿ ರಚನೆಯಾದರೂ ತಮಿಳುನಾಡಿಗೆ ಯಾವುದೇ ಹಾನಿಯಾಗುವುದಿಲ್ಲ. ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ಇರುವ ಅಪಾಯ ಇನ್ನೂ ದೂರವಾಗಿಲ್ಲ. ಕಾವೇರಿ ಪ್ರಾಧಿಕಾರವು ಕರ್ನಾಟಕದ ಸವಿಸ್ತಾರ ಯೋಜನಾ ವರದಿಯನ್ನು (DPR) ತಿರಸ್ಕರಿಸಿದೆ ಎಂದು ಹೇಳುವುದು ತಪ್ಪು. ಕಾವೇರಿ ಪ್ರಾಧಿಕಾರವು ಕರ್ನಾಟಕದ ವರದಿಯನ್ನು ತಿರಸ್ಕರಿಸದೆ, ಅದನ್ನು ಹಾಗೆಯೇ ಜಲಸಂಪನ್ಮೂಲ ಇಲಾಖೆಯ ಪ್ರಾಧಿಕಾರಕ್ಕೆ ಕಳುಹಿಸಿದೆ ಎಂದು ಹೇಳಿದರು.

Tamil Nadu minister N Anand
Watch | ಮೇಕೆದಾಟು ತಡೆಯಲು ಅಗತ್ಯ ಕ್ರಮ- ತಮಿಳುನಾಡು; ಮಾಡಿಯೇ ಸಿದ್ಧ, ನೀರು ಬಿಡಲು ಬದ್ಧ- ಡಿಕೆಶಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com