ಖರ್ಗೆಯವರಿಗೆ CM ಆಗುವ ಆಸೆ; ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು: D K ಶಿವಕುಮಾರ್ ಪರ ಘೋಷಣೆಗೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಕ್ಕೆ ಬಿಜೆಪಿ ನಾಯಕ ಟೀಕೆ-Video

ಮುಖ್ಯಮಂತ್ರಿ ಆಗುವ ಅವರ ಸ್ವಂತ ಮಹತ್ವಾಕಾಂಕ್ಷೆಯನ್ನು ಗಮನಿಸಿದರೆ, ಅವರು ಕೋಪಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಟೀಕಿಸಿದ್ದಾರೆ.
Gaurav Vallab and Mallikarjun Kharge (File photo)
ಗೌರವ್ ವಲ್ಲಭ್, ಮಲ್ಲಿಕಾರ್ಜುನ ಖರ್ಗೆ(ಸಂಗ್ರಹ ಚಿತ್ರ)
Updated on

ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಲು ಬಯಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಉಂಟಾಗಿದೆ. ತಮ್ಮದೇ ಪಕ್ಷದ ಮುಖ್ಯಮಂತ್ರಿಗೆ ಕಾರ್ಯಕರ್ತರು ಜಯಘೋಷ ಮಾಡಿದ ಕಾರಣಕ್ಕೆ ಪಕ್ಷದ ಅಧ್ಯಕ್ಷರೇ ಕಾರ್ಯಕರ್ತರ ಮೇಲೆ ಕೋಪಗೊಂಡಿರುವುದು ಇದೇ ಮೊದಲ ಬಾರಿ ಎಂದು ಬಿಜೆಪಿಯ ವಕ್ತಾರ ಗೌರವ್ ವಲ್ಲಭ್ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಆಗುವ ಅವರ ಸ್ವಂತ ಮಹತ್ವಾಕಾಂಕ್ಷೆಯನ್ನು ಗಮನಿಸಿದರೆ, ಅವರು ಕೋಪಗೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ಕಾಂಗ್ರೆಸ್ ಅಧ್ಯಕ್ಷರು ತಮ್ಮದೇ ಪಕ್ಷದ ಮುಖ್ಯಮಂತ್ರಿಯ ಪರವಾಗಿ ಘೋಷಣೆಗಳನ್ನು ಕೂಗುವುದನ್ನು ಸಹಿಸಿಕೊಳ್ಳಲಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.

ಈಗ ಕಾಂಗ್ರೆಸ್ ಪಕ್ಷವು 'ಕಾಂಗ್ರೆಸ್ ರಾಹುಲ್', 'ಕಾಂಗ್ರೆಸ್ ಪ್ರಿಯಾಂಕಾ' ಮತ್ತು 'ಕಾಂಗ್ರೆಸ್ ಮಮ್ಮಿ' ಎಂಬ ಮೂರು ಭಾಗಗಳಾಗಿ ವಿಭಜನೆಯಾಗಿದೆ. 'ಕಾಂಗ್ರೆಸ್ ಖರ್ಗೆ' ಎನ್ನುವುದು ಈ ಮೂರು ಘಟಕಗಳ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ನಡೆಸುವ ಪರವಾನಗಿ ಪಡೆಯುವ ಕನಸು ಕಾಣುತ್ತಿದೆ ಎಂದರು.

Gaurav Vallab and Mallikarjun Kharge (File photo)
'ಉಳಿದವರು ಏನು ಕಸ ಗುಡಿಸೋದಕ್ಕೆ ಬಂದಿದ್ದಾರಾ.., Useless fellows': ಡಿಕೆ..ಡಿಕೆ ಎಂದು ಕೂಗಿದ ಕಾರ್ಯಕರ್ತರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗರಂ; Video

ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮನಸ್ಸಿನ ಮಾತನ್ನು ಹೊರಹಾಕಿದರು. ತಮ್ಮದೇ ಪಕ್ಷದ ಮುಖ್ಯಮಂತ್ರಿಯ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು. ಇದಕ್ಕಿಂತ ದೊಡ್ಡ ರಾಜಕೀಯ ವಿರೋಧಾಭಾಸ ಇನ್ನೇನಿರಬಹುದು ಎಂದು ವ್ಯಂಗ್ಯವಾಡಿದರು.

ಶಶಿ ತರೂರ್ ಅವರನ್ನು ಪಕ್ಷದಿಂದ ಹೊರಹಾಕುವ ಅಧಿಕಾರ ಪವನ್ ಖೇರಾ ಅವರಿಗೆ ಇದೆಯೇ? ಕಾಂಗ್ರೆಸ್ ಪಕ್ಷವನ್ನು ಗಾಂಧಿ ಕುಟುಂಬ ನಡೆಸುತ್ತದೆ. ಈ ವಿಷಯದಲ್ಲಿ ಗಾಂಧಿ ಕುಟುಂಬ ಮೌನ ವಹಿಸಿರುವುದರಿಂದ, ತರೂರ್ ಅವರ ಅಭಿಪ್ರಾಯಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

ವಿದೇಶಾಂಗ ನೀತಿಯ ಬಗ್ಗೆ ಶಶಿ ತರೂರ್ ಅವರಿಗೆ ಇರುವ ಜ್ಞಾನದ 1 ಶೇಕಡಾ ಆದರೂ ಇವರಲ್ಲಿ ಯಾರಿಗಾದರೂ ಇದೆಯೇ? 'ಪಿಎ ಸಮುದಾಯ'ದ ಈ ಜನರು ಯಾವುದೇ ಹೇಳಿಕೆ ನೀಡುವ ಮೊದಲು ಪ್ರತಿದಿನ ಶಶಿ ತರೂರ್ ಅವರಿಂದ ಈ ವಿಷಯದಲ್ಲಿ ಪಾಠ ಕಲಿಯಬೇಕು. ಇಲ್ಲದಿದ್ದರೆ ಅವರು ಕೇವಲ ಹಾಸ್ಯಾಸ್ಪದ ವ್ಯಕ್ತಿಗಳಾಗಿಬಿಡುತ್ತಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com