ನಮಗೆ 'ಬಿಜೆಪಿ ಮುಕ್ತ ರಾಮ' ಬೇಕು: ರಾಮ ಮಂದಿರ ದೇಣಿಗೆ ವಿವಾದದ ಬಗ್ಗೆ ಉದ್ಧವ್ ಠಾಕ್ರೆ ವಾಗ್ದಾಳಿ!

ಪಕ್ಷವು ಹಿಂದೂಗಳ ಭಾವನೆಗಳೊಂದಿಗೆ ಆಟವಾಡುವ ಮೂಲಕ ಅವರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮುಕ್ತ ರಾಮ' ನಿಗಾಗಿ ಪ್ರತಿಭಟನೆ ಮುನ್ನಡೆಸುವುದಾಗಿಯೂ ಅವರು ಪ್ರತಿಜ್ಞೆ ಮಾಡಿದ್ದಾರೆ.
 Uddhav Thackeray
ಉದ್ಧವ್ ಠಾಕ್ರೆ
Updated on

ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಹಿಂದೂತ್ವದ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಶಿವಸೇನಾ ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಪಕ್ಷವು ಹಿಂದೂಗಳ ಭಾವನೆಗಳೊಂದಿಗೆ ಆಟವಾಡುವ ಮೂಲಕ ಅವರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮುಕ್ತ ರಾಮ' ನಿಗಾಗಿ ಪ್ರತಿಭಟನೆ ಮುನ್ನಡೆಸುವುದಾಗಿಯೂ ಅವರು ಪ್ರತಿಜ್ಞೆ ಮಾಡಿದ್ದಾರೆ.

ಶಿವಸೇನೆಗೆ ಸೇರ್ಪಡೆಗೊಂಡಿರುವ ಭಿನ್ನಮತೀಯ ಸೇನಾ-ಯುಬಿಟಿ ಸಂಸದ ಸಂಜಯ್ ದೇಶಮುಖ್ ಪ್ರತಿನಿಧಿಸುವ ಯವತ್ಮಾಲ್-ವಾಶಿನ್ ಕ್ಷೇತ್ರದಲ್ಲಿ ನಡೆದ Rally ಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜಕೀಯ ಪಕ್ಷಗಳನ್ನು ಬಿಜೆಪಿ ಒಡೆಯುತ್ತಿದೆ ಎಂದು ಆರೋಪಿಸಿದರು.

ನಿಜವಾದ ಹಿಂದುತ್ವವು ಮಾನವೀಯತೆಯನ್ನು ಕಲಿಸುತ್ತದೆ. ದೇವಾಲಯಗಳನ್ನು ಲೂಟಿ ಮಾಡುವ ನಿಮ್ಮ (ಬಿಜೆಪಿಯ) ಹಿಂದುತ್ವವನ್ನು ನಾವು ತಿರಸ್ಕರಿಸುತ್ತೇವೆ. ನಮಗೆ 'ಬಿಜೆಪಿ ಮುಕ್ತ ರಾಮ' ಬೇಕು ಮತ್ತು ಶಿವಸೇನೆ-ಯುಬಿಟಿ ಅಂತಹ ಪ್ರತಿಭಟನೆಗಳನ್ನು ನಡೆಸುತ್ತದೆ" ಎಂದು ಅವರು ಹೇಳಿದರು.

 Uddhav Thackeray
One Flight, Handshake: ಒಂದೇ ವಿಮಾನದಲ್ಲಿ ಫಡ್ನವೀಸ್, ಉದ್ಧವ್ ಠಾಕ್ರೆ! ಮುಂದೆ ಏನಾಯಿತು? ಈ Video ವೀಕ್ಷಿಸಿ...

79.85 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಅಧಿಕಾರಿಗಳು ವರದಿ ಮಾಡಿದ್ದರೂ ದೇಣಿಗೆ ದುರುಪಯೋಗದ ಆರೋಪದ ಮೇಲೆ ಬಂಧಿಸಲಾದ ಎಲ್ಲಾ ಎಂಟು ಜನರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com