1 ಲಕ್ಷ ಲಂಚ ನೀಡುವಂತೆ ರೈತನಿಗೆ ಬೆದರಿಸಿದ ಪಕ್ಷದ ಜಂಟಿ ಕಾರ್ಯದರ್ಶಿಯನ್ನು 6 ಗಂಟೆಯಲ್ಲೇ ಪಕ್ಷದಿಂದ ವಜಾಗೊಳಿಸಿದ TVK!

ಬುಲವೇಂದ್ರನ್ ವಿರುದ್ಧ TVK ಪಕ್ಷದ ನಾಯಕತ್ವಕ್ಕೂ ದೂರು ನೀಡಲಾಗಿತ್ತು. ಇದರ ಆಧಾರದ ಮೇಲೆ, ಪಕ್ಷದ ನಿಯಮ ಮೀರಿ ವರ್ತಿಸಿದ, ಪಕ್ಷದ ಖ್ಯಾತಿಗೆ ಕಳಂಕ ತಂದ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಖ್ಯಾತಿಗೆ ಹಾನಿ ಮಾಡಿದ...
Vijay, Pulavendran
ವಿಜಯ್, ಪುಲವೇಂದ್ರನ್
Updated on

ಚೆನ್ನೈ: 1 ಲಕ್ಷ ರೂಪಾಯಿ ಹಣಕ್ಕಾಗಿ ರೈತನಿಗೆ ಬೆದರಿಕೆ ಹಾಕಿದ್ದ TVK ಜಿಲ್ಲಾ ಜಂಟಿ ಕಾರ್ಯದರ್ಶಿಯನ್ನು ಪಕ್ಷದಿಂದ ತೆಗೆದುಹಾಕಲಾಗಿದೆ.

ಕಡಲೂರು ಜಿಲ್ಲೆಯ ಕಟ್ಟುಮನ್ನಾರ್ಕೋವಿಲ್ ಬಳಿಯ ಕರುಣಾಕರನಲ್ಲೂರಿನ ಪುಲವೇಂದ್ರನ್, ಕಟ್ಟುಮನ್ನಾರ್ಕೋವಿಲ್ ಬಳಿಯ ಕಂದಮಂಗಲಂ ನರೈಕ್ಕಲ್ ಕರೆಯಲ್ಲಿ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಮಣ್ಣು ತೆಗೆಸುತ್ತಿದ್ದ ರೈತನಿಂದ ಪಕ್ಷಕ್ಕೆಂದು 1 ಲಕ್ಷ ರೂಪಾಯಿ ಹಣ ನೀಡುವಂತೆ ಒತ್ತಾಯಿಸಿದ್ದು ಹಣ ನೀಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆಯನ್ನು ಸಹ ಹಾಕಿದ್ದರು.

ಇದರಿಂದಾಗಿ, ಕಂದಮಂಗಲಂನ ಜನರು ಪುಲವೇಂದ್ರನ್ ಅವರ ಕಾರನ್ನು ತಡೆದು ಮುತ್ತಿಗೆ ಹಾಕಿ ಕಾರಿನ ಗಾಜನ್ನು ಸಹ ಒಡೆದರು. ಪೊಲೀಸರು ಸ್ಥಳಕ್ಕೆ ತಲುಪಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.

Vijay, Pulavendran
ದಲಿತರ ಮೇಲಿನ ದೌರ್ಜನ್ಯದಲ್ಲಿ ಕಾಂಗ್ರೆಸ್ ಕರ್ನಾಟಕಕ್ಕೆ ಕುಖ್ಯಾತಿ ತಂದಿದೆ, ಮೊದಲು ಈ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಿ: ಪ್ರಿಯಾಂಕ್ ಖರ್ಗೆಗೆ BJP ಟಾಂಗ್

ಬುಲವೇಂದ್ರನ್ ವಿರುದ್ಧ TVK ಪಕ್ಷದ ನಾಯಕತ್ವಕ್ಕೂ ದೂರು ನೀಡಲಾಗಿತ್ತು. ಇದರ ಆಧಾರದ ಮೇಲೆ, ಪಕ್ಷದ ನಿಯಮ ಮೀರಿ ವರ್ತಿಸಿದ, ಪಕ್ಷದ ಖ್ಯಾತಿಗೆ ಕಳಂಕ ತಂದ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಖ್ಯಾತಿಗೆ ಹಾನಿ ಮಾಡಿದ ಜಿಲ್ಲಾ ಜಂಟಿ ಕಾರ್ಯದರ್ಶಿ ಪುಲವೇಂದ್ರನ್ ನನ್ನು ಶಿಸ್ತು ಕ್ರಿಯಾ ಸಮಿತಿಯ ಅನುಮೋದನೆಯೊಂದಿಗೆ ಪಕ್ಷದ ಮೂಲ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು TVK ಜಿಲ್ಲಾ ಕಾರ್ಯದರ್ಶಿ ಸೀನುವಾಸನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com