2025ರ UPSC ಪರೀಕ್ಷೆ ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ಟಾಪರ್; 958 ಅಭ್ಯರ್ಥಿಗಳು ಪಾಸ್

ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ರ‍್ಯಾಂಕ್ ಗಳಿಸಿದ್ದಾರೆ.
Anuj Agnihotri tops UPSC civil services exam 2025; 958 candidates qualified
ಅನುಜ್ ಅಗ್ನಿಹೋತ್ರಿ
Updated on

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಶುಕ್ರವಾರ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಅನುಜ್ ಅಗ್ನಿಹೋತ್ರಿ ಅವರು ಅಗ್ರಸ್ಥಾನ ಪಡೆದಿದ್ದಾರೆ.

ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ರ‍್ಯಾಂಕ್ ಗಳಿಸಿದ್ದಾರೆ.

ಈ ವರ್ಷ ಒಟ್ಟು 958 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ನಾಗರಿಕ ಸೇವೆಗೆ ಅರ್ಹತೆ ಪಡೆದಿದ್ದಾರೆ. ಅವರ ಹೆಸರನ್ನು ವಿವಿಧ ಕೇಂದ್ರ ನಾಗರಿಕ ಸೇವೆಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ನಾಗರಿಕ ಸೇವೆಗೆ ಯುಪಿಎಸ್‌ಸಿ ನಡೆಸುವ ಈ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ. ಈ ಮೂರು ಹಂತಗಳಲ್ಲಿ ಪಾಸ್ ಆದವರನ್ನು ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಸೇರಿದಂತೆ ಇತರ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

Anuj Agnihotri tops UPSC civil services exam 2025; 958 candidates qualified
2025-26ನೇ ಸಾಲಿಗೆ 450 ಹೆಚ್ಚುವರಿ ಪಿಜಿ ವೈದ್ಯಕೀಯ ಸೀಟುಗಳಿಗೆ ಎನ್‌ಎಂಸಿ ಅನುಮೋದನೆ

ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗಳಾದ upsc.gov.in ಅಥವಾ upsconline.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ಯಾರೂ ಈ ಅನುಜ್ ಅಗ್ನಿಹೋತ್ರಿ?

ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದಿರುವ ಅನುಜ್ ಅಗ್ನಿಹೋತ್ರಿ ಅವರು ರಾಜಸ್ಥಾನದ ಜೋಧ್‌ಪುರ ಮೂಲದವರಾಗಿದ್ದು, 2023ರಲ್ಲಿ ಜೋಧ್‌ಪುರದ ಪ್ರತಿಷ್ಠಿತ ಏಮ್ಸ್ (AIIMS Jodhpur) ನಲ್ಲಿ ಎಂಬಿಬಿಎಸ್ (MBBS) ಪದವಿ ಪಡೆದಿದ್ದಾರೆ.

ಪ್ರಸ್ತುತ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆಯಲ್ಲಿ(DANICS) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯದ ಜೊತೆಯಲ್ಲೇ ಕಠಿಣ ಪರಿಶ್ರಮ ಹಾಕಿ ಓದಿರುವ ಅವರು ಈಗ ಅತ್ಯುನ್ನತ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com