'ನನ್ನ ಮೇಲೆ ಏಕೆ ಕೋಪವಿದೆಯೋ ಗೊತ್ತಿಲ್ಲ': ಮಮತಾ ವಿರುದ್ಧ ರಾಷ್ಟ್ರಪತಿ ಮುರ್ಮು ಗರಂ ಆಗಿದ್ದೇಕೆ?

ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. "ಇಲ್ಲಿ ಅಂತರರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ನಾನು ಭಾವಿಸುವುದಿಲ್ಲ.
'I don't know what is Mamata's grievance against me': President Murmu upset over venue of Santhal conference
ರಾಷ್ಟ್ರಪತಿ ದ್ರೌಪದಿ ಮುರ್ಮು
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಒಂಬತ್ತನೇ ಅಂತರರಾಷ್ಟ್ರೀಯ ಆದಿವಾಸಿ(ಸಂತಾಲ್) ಸಮಾವೇಶಕ್ಕೆ ಸ್ಥಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. "ಇಲ್ಲಿ ಅಂತರರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ" ಎಂದು ರಾಷ್ಟ್ರಪತಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯನ್ನು ಉಲ್ಲೇಖಿಸಿ, "ನಾನು ಕೂಡ ಬಂಗಾಳದ ಮಹಿಳೆ. ಮಮತಾ ದೀದಿ ನೀವೂ ನನ್ನ ಸಹೋದರಿ ಇದ್ದಂತೆ, ನಾನು ಕೂಡ ಬಂಗಾಳದ ಮಗಳು, ಇಲ್ಲಿಗೆ ಬರಲು ನನಗೇಕೆ ಅವಕಾಶ ನೀಡುತ್ತಿಲ್ಲ?" ಎಂದು ಪ್ರಶ್ನಿಸುವ ಮೂಲಕ ಮಮತಾ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.

'I don't know what is Mamata's grievance against me': President Murmu upset over venue of Santhal conference
ಬಂಗಾಳದ ನೂತನ ರಾಜ್ಯಪಾಲ ಆರ್.ಎನ್ ರವಿ 'ಬಿಜೆಪಿ ಕೇಡರ್', ಆದ್ರೆ ಇದು 'ಕಠಿಣ ಅಖಾಡ': ಮಮತಾ

ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುರ್ಮು ಭಾಷಣ ಮಾಡುವಾಗ ಹಾಜರಿದ್ದ ಸ್ಥಳೀಯ ಬಿಜೆಪಿ ಸಂಸದ ರಾಜು ಬಿಸ್ತಾ, ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಯಾವುದೇ ಪ್ರತಿನಿಧಿ ಹಾಜರಿರಲಿಲ್ಲ. ಆದರೆ ಆಯೋಜಕರು ಕಾರ್ಯಕ್ರಮದ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಸ್ಥಳೀಯ ತೃಣಮೂಲ ನಾಯಕರು ದೂರಿದ್ದಾರೆ.

ಮುರ್ಮು ಅವರು ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿಗಾಗಿ ಶುಕ್ರವಾರ ಬೆಳಗ್ಗೆ ಡಾರ್ಜಿಲಿಂಗ್‌ಗೆ ತೆರಳಬೇಕಿತ್ತು. ಆದಾಗ್ಯೂ, ಬುಧವಾರ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರ ಹಠಾತ್ ರಾಜೀನಾಮೆ ನಂತರ ಅವರ ಭೇಟಿಯನ್ನು ಶನಿವಾರಕ್ಕೆ ಮುಂದೂಡಲಾಯಿತು. ರಾಷ್ಟ್ರಪತಿಗಳು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಬಂಗಾಳದ ಹೊಸ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com