Sanjay Gandhi ಕಾರಣದಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಗುರಿಗಳಲ್ಲಿ ಉತ್ತರ ಭಾರತದ ಮುಖ್ಯಮಂತ್ರಿಗಳು ಅತಿರೇಕ ತೋರಿದರು: ಕರಣ್ ಸಿಂಗ್

1973ರಿಂದ 1977ರವರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಯೋಜನೆ ಸಚಿವರಾಗಿದ್ದ ಕರಣ್ ಸಿಂಗ್, ಆ ಸಮಯದಲ್ಲಿ ಸರ್ಕಾರದ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬಹಳ ಯುಕ್ತಿಯುಕ್ತ ಗುರಿಗಳನ್ನು ನಾನು ನಿಗದಿ ಮಾಡಿದ್ದೆ, ಆದರೆ ಸಂಜಯ್ ಗಾಂಧಿ ಬಲವಂತದ ಶಸ್ತ್ರಚಿಕತ್ಸೆ ಹೆಚ್ಚಿಸಿದರು ಎಂದು ಹೇಳಿದರು.
Karan Singh
ಕರಣ್ ಸಿಂಗ್
Updated on

ನವದೆಹಲಿ: 1975–77ರ ಅವಧಿಯಲ್ಲಿ ನಡೆದ ಬಲವಂತದ ಕುಟುಂಬ ನಿಯಂತ್ರಣ (forced sterilisation) ಅಭಿಯಾನವು, ಉತ್ತರ ಭಾರತದ ಮುಖ್ಯಮಂತ್ರಿಗಳು ಸಂಜಯ್ ಗಾಂಧಿ ಅವರನ್ನು ಅತಿರೇಕದ ವರ್ತನೆಯ ಪರಿಣಾಮವಾಗಿತ್ತು ಎಂದು ಹಿರಿಯ ರಾಜಕಾರಣಿ ಕರಣ್ ಸಿಂಗ್ ಆರೋಪಿಸಿದ್ದಾರೆ.

1973ರಿಂದ 1977ರವರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಯೋಜನೆ ಸಚಿವರಾಗಿದ್ದ ಕರಣ್ ಸಿಂಗ್, ಆ ಸಮಯದಲ್ಲಿ ಸರ್ಕಾರದ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬಹಳ ಯುಕ್ತಿಯುಕ್ತ ಗುರಿಗಳನ್ನು ನಾನು ನಿಗದಿ ಮಾಡಿದ್ದೆ, ಆದರೆ ಸಂಜಯ್ ಗಾಂಧಿ ಬಲವಂತದ ಶಸ್ತ್ರಚಿಕತ್ಸೆ ಹೆಚ್ಚಿಸಿದರು ಎಂದು ಹೇಳಿದರು.

ಈ ವಿಚಾರವನ್ನು ಅವರು ತಮ್ಮ ಅಧಿಕೃತ ಜೀವನಚರಿತ್ರೆ A Statesman and A Seeker ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ. ಈ ಪುಸ್ತಕವನ್ನು ಹರ್ಬನ್ಸ್ ಸಿಂಗ್ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ಶಶಿ ತರೂರ್ ಮತ್ತು ಇತಿಹಾಸಕಾರ ಮಾಳ್ವಿಕಾ ಸಿಂಗ್ ಸಹ ಭಾಗವಹಿಸಿದ್ದರು.

Karan Singh
'So Long Valley' ಪ್ರೀಮಿಯರ್ ಶೋ: ನಿರ್ಮಾಪಕ ಕರಣ್ ಸಿಂಗ್ ಗೆ ಚಪ್ಪಲಿಯಿಂದ ಹೊಡೆದ ಮಾಡೆಲ್! ಕಾರಣವೇನು?

ಆ ದಿನಗಳಲ್ಲಿ Vasectomies – ಪುರುಷರಲ್ಲಿ ನಡೆಸುವ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ (Vasectomies) ಮತ್ತು ಮಹಿಳೆಯರಲ್ಲಿ ನಡೆಸುವ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ(Tubectomies) ಶಸ್ತ್ರಚಿಕಿತ್ಸೆಗಳಿಗಾಗಿ ಕೆಲವು ಗುರಿಗಳನ್ನು ನಿಗದಿ ಮಾಡಲಾಗುತ್ತಿತ್ತು. ಇದು ರಾಜಕುಮಾರ್ ಅಮೃತ್ ಕೌರ್ ಅವರ ಕಾಲದಿಂದಲೇ ಆರಂಭವಾಗಿತ್ತು. ನಾನು ಸಚಿವನಾದಾಗ ಸಾಧ್ಯವಾಗುವಂತಹ ಗುರಿಗಳನ್ನು ಮಾತ್ರ ನಿಗದಿ ಮಾಡಿದ್ದೆ.

ಆದರೆ ದುರದೃಷ್ಟವಶಾತ್ ಸಂಜಯ್ ಗಾಂಧಿ ಅತಿರೇಕದಿಂದ ವರ್ತಿಸಿದರು. ಉತ್ತರ ಭಾರತದ ಮುಖ್ಯಮಂತ್ರಿಗಳು ಅದಕ್ಕೆ ಪ್ರೋತ್ಸಾಹ ನೀಡಿದರು. ಅದರಿಂದಲೇ ಬಲವಂತದ ಟ್ಯೂಬೆಕ್ಟಮಿ ಪ್ರಕರಣಗಳು ನಡೆದವು ಎಂದು ಹೇಳಿದ್ದಾರೆ.

ಬಲವಂತದ ಸ್ಟೆರಿಲೈಸೇಶನ್ ಬಗ್ಗೆ ವರದಿಗಳು ಬಂದ ನಂತರ ತಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾಗಿ ಅವರು ಹೇಳಿದರು.

“ನಾನು ಮುಖ್ಯಮಂತ್ರಿಗಳಿಗೆ ‘ಬಲವಂತದ ಕ್ರಮಗಳು ನಡೆಯುತ್ತಿವೆ ಎಂಬ ವರದಿಗಳು ನನಗೆ ಬರುತ್ತಿವೆ. ದಯವಿಟ್ಟು ಅದು ನಡೆಯದಂತೆ ನೋಡಿಕೊಳ್ಳಿ’ ಎಂದು ಪತ್ರ ಬರೆದಿದ್ದೆ. ಆ ಪತ್ರಗಳು ದಾಖಲೆಗಳಲ್ಲಿ ಇವೆ,” ಎಂದು ಅವರು ಹೇಳಿದರು.

ಶಾ ಕಮಿಷನ್ ಈ ಪತ್ರಗಳನ್ನು ಪರಿಶೀಲಿಸಿದ ಕಾರಣವೇ ತಮಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ನಾನು ಭಾವಿಸಿಕೊಂಡೆ. ಯಾವುದಕ್ಕೂ ಬಲವಂತ ಮಾಡಬಾರದು ಎಂದು ನಾನು ಸ್ಪಷ್ಟವಾಗಿ ಬರೆದಿದ್ದೆ. ಅದು ನಮ್ಮ ನೀತಿಗೆ ವಿರುದ್ಧ ಎಂದರು.

ತಮ್ಮ ಸಚಿವ ಅವಧಿಯಲ್ಲಿ ಸಂಜಯ್ ಗಾಂಧಿಯವರೊಂದಿಗೆ ಒಂದೇ ವೇದಿಕೆಯನ್ನು ಹಂಚಿಕೊಂಡಿಲ್ಲ ಎಂದು ಕರಣ್ ಸಿಂಗ್ ಹೇಳಿದರು. ಭಾರತದಲ್ಲಿ ತುರ್ತು ಪರಿಸ್ಥಿತಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎದುರಾದ ಭಾರೀ ಸೋಲಿನ ಬಗ್ಗೆ ಮಾತನಾಡಿದ ಅವರು, ಆ ಚುನಾವಣೆಯಲ್ಲಿ ಗೆದ್ದ ಕೆಲವೇ ಕಾಂಗ್ರೆಸ್ ಸಂಸದರಲ್ಲಿ ತಾನೂ ಒಬ್ಬನೆಂದು ಹೇಳಿದರು.

ಎಮರ್ಜೆನ್ಸಿಯ ನಂತರ ಇಂದಿರಾ ಗಾಂಧಿಯವರ ವಿರುದ್ಧ ಭಾರೀ ವಿರೋಧದ ವಾತಾವರಣವಿತ್ತು. ಉತ್ತರ ಭಾರತದಿಂದ ಕಾಂಗ್ರೆಸ್‌ನ ಕೇವಲ ಮೂರು ಸಂಸದರು ಮಾತ್ರ ಗೆದ್ದಿದ್ದರು. ಆ ಸಮಯದಲ್ಲಿ ನಾನು ಗೆದ್ದದ್ದು ನನ್ನ ದೊಡ್ಡ ಚುನಾವಣಾ ಯಶಸ್ಸು ಎಂದು ನಾನು ಭಾವಿಸುತ್ತೇನೆ, “ೃಯಾಕೆಂದರೆ ‘ಅತಿರೇಕಗಳು’ (zyadatees) ಯಾರಿಂದ ನಡೆದವು ಎಂಬುದನ್ನು ಜನರು ಅರಿತಿದ್ದರು ಎಂದು ನಾನು ಭಾವಿಸುತ್ತೇನೆ ಎಂದು ಕರಣ್ ಸಿಂಗ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com