ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರ ಕೇಳಿದ ಕೇಂದ್ರ ಸರ್ಕಾರ

‘ಬ್ಲೂ ಬುಕ್’ ಎಂಬುದು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಹಾಗೂ ಅವರ ಕುಟುಂಬದ ಭದ್ರತೆ ಮತ್ತು ಶಿಷ್ಟಾಚಾರ ಕುರಿತು ನಿಯಮಗಳನ್ನು ಹೊಂದಿರುವ ಗೌಪ್ಯ ದಾಖಲೆ.
Draupadi Murmu and Mamata Banerjee
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Updated on

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಶ್ಚಿಮ ಬಂಗಾಳ ಭೇಟಿಯ ವೇಳೆ ಶಿಷ್ಟಾಚಾರ ಉಲ್ಲಂಘನೆಗಳಾಗಿವೆ ಎಂಬ ವಿವಾದದ ನಡುವಿನಲ್ಲಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದಿಂದ ಇಂದು ಸಂಜೆ 5 ಗಂಟೆಯೊಳಗೆ ಸ್ಪಷ್ಟೀಕರಣ ನೀಡುವಂತೆ ಕೇಳಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ರಾಷ್ಟ್ರಪತಿಯ ಭೇಟಿಯ ವೇಳೆ ಪ್ರೋಟೋಕಾಲ್, ಕಾರ್ಯಕ್ರಮದ ಸ್ಥಳ ಮತ್ತು ಮಾರ್ಗ ವ್ಯವಸ್ಥೆಗಳಿಗೆ ಸಂಬಂಧಿಸಿದ ‘ಬ್ಲೂ ಬುಕ್’ ನಿಯಮಗಳ ಉಲ್ಲಂಘನೆ ಬಗ್ಗೆ ವಿವರ ನೀಡುವಂತೆ ಕೇಳಲಾಗಿದೆ.

‘ಬ್ಲೂ ಬುಕ್’ ಎಂಬುದು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಹಾಗೂ ಅವರ ಕುಟುಂಬದ ಭದ್ರತೆ ಮತ್ತು ಪ್ರೋಟೋಕಾಲ್ ಕುರಿತು ನಿಯಮಗಳನ್ನು ಹೊಂದಿರುವ ಗೌಪ್ಯ ದಾಖಲೆ.

ಪಶ್ಚಿಮ ಬಂಗಾಳ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದ್ದಕ್ಕೆ ರಾಷ್ಟ್ರಪತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಉತ್ತರ ಬಂಗಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿಗಳಿಗೆ ಸ್ವಾಗತ ಕೋರಲು ಮುಖ್ಯಮಂತ್ರಿಯಾಗಲಿ ಅಥವಾ ಅವರ ಸಂಪುಟದ ಯಾವುದೇ ಸಚಿವರಾಗಲಿ ಬಂದಿರಲಿಲ್ಲ.

ಇದನ್ನು ಪ್ರಶ್ನಿಸಿದ ರಾಷ್ಟ್ರಪತಿಗಳು, ಮಮತಾ ಬ್ಯಾನರ್ಜಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಥವಾ ಅವರ ಸಚಿವರು ಬರಲಿಲ್ಲವೇ? ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ, ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

Draupadi Murmu and Mamata Banerjee
TMC ಎಲ್ಲಾ ಮಿತಿಗಳನ್ನು ಮೀರಿದೆ, ರಾಷ್ಟ್ರಪತಿಗಳಿಗೆ ಅವಮಾನ ನಾಚಿಕೆಗೇಡಿನ ಸಂಗತಿ: ದೀದಿ ವಿರುದ್ಧ ಮೋದಿ ಕೆಂಡ

ಮೂಲಗಳ ಪ್ರಕಾರ, ರಾಷ್ಟ್ರಪತಿ ರಾಜ್ಯಕ್ಕೆ ಆಗಮಿಸಿದಾಗ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಸ್ವಾಗತಿಸಲು ಹಾಜರಾಗದಿರುವುದು ಬ್ಲೂ ಬುಕ್ ನಿಯಮಗಳ ಗಂಭೀರ ಉಲ್ಲಂಘನೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದಲ್ಲದೆ, ರಾಷ್ಟ್ರಪತಿಯನ್ನು ಸ್ವಾಗತಿಸಲು ಕೇವಲ ಗೌತಮ್ ದೆಬು ಮಾತ್ರ ಹಾಜರಾಗಿದ್ದನ್ನು ಪ್ರೋಟೋಕಾಲ್ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ರಾಷ್ಟ್ರಪತಿಗಾಗಿ ಸಿದ್ಧಪಡಿಸಿದ್ದ ಶೌಚಾಲಯದಲ್ಲಿ ನೀರು ಇಲ್ಲದಿದ್ದುದಕ್ಕೂ ರಾಜ್ಯ ಸರ್ಕಾರದಿಂದ ವಿವರಣೆ ಕೇಳಲಾಗಿದೆ. ಜೊತೆಗೆ ರಾಷ್ಟ್ರಪತಿ ಪ್ರಯಾಣಿಸಿದ ಮಾರ್ಗದಲ್ಲಿ ಕಸ ತುಂಬಿದ್ದುದಕ್ಕೆ ಕಾರಣವೇನು ಎಂಬುದನ್ನೂ ತಿಳಿಸಲು ಸೂಚಿಸಲಾಗಿದೆ.

ದಾರ್ಜಿಲಿಂಗ್ ಜಿಲ್ಲಾಧಿಕಾರಿ, ಸಿಲಿಗುರಿ ಪೊಲೀಸ್ ಆಯುಕ್ತ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ವಿವರ ನೀಡುವಂತೆ ಪತ್ರದಲ್ಲಿ ಕೇಳಲಾಗಿದೆ.

Draupadi Murmu and Mamata Banerjee
'ನನ್ನ ಮೇಲೆ ಏಕೆ ಕೋಪವಿದೆಯೋ ಗೊತ್ತಿಲ್ಲ': ಮಮತಾ ವಿರುದ್ಧ ರಾಷ್ಟ್ರಪತಿ ಮುರ್ಮು ಗರಂ ಆಗಿದ್ದೇಕೆ?

ಈ ಕಾರ್ಯಕ್ರಮ ಮೂಲತಃ ಸಿಲಿಗುರಿಯ ಬಿಧಾನನಗರದಲ್ಲಿ ನಡೆಯಬೇಕಿತ್ತು. ಆದರೆ ಭದ್ರತೆ ಮತ್ತು ಇತರ ಕಾರಣಗಳಿಂದ ಅದನ್ನು ಗೊಶೈಪುರ್ ಗೆ ಸ್ಥಳಾಂತರಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಾಗ ಜನರ ಸಂಖ್ಯೆ ಕಡಿಮೆ ಇದ್ದುದರಿಂದ ರಾಷ್ಟ್ರಪತಿ ಆಶ್ಚರ್ಯ ವ್ಯಕ್ತಪಡಿಸಿದರು.

ಈ ನಡುವೆ, ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಅವರು ಈ ಘಟನೆ “ದುರದೃಷ್ಟಕರ” ಎಂದು ಹೇಳಿ, ಉನ್ನತ ಸಂವಿಧಾನಾತ್ಮಕ ಹುದ್ದೆಗೆ ಯಾವಾಗಲೂ ಗೌರವ ದೊರಕಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿಯ ಭೇಟಿಯ ವೇಳೆ ಪಶ್ಚಿಮ ಬಂಗಾಳ ಸರ್ಕಾರ ತೋರಿದ ವರ್ತನೆ ಲಜ್ಜಾಸ್ಪದ ಮತ್ತು ಅಪೂರ್ವ ಎಂದು ಟೀಕಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com