20 ವರ್ಷಗಳಿಂದ ಆತನನ್ನು ಕೊಲ್ಲಲು ಬಯಸಿದ್ದೆ: ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಿದ ಶೂಟರ್ ಹೇಳಿಕೆ! Video

ಕಳೆದ ಎರಡು ದಶಕಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಯೋಜಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
Farooq Abdullah, Kama Singh
ಫಾರೂಕ್ ಅಬ್ದುಲ್ಲಾ, ಕಮಲ್ ಸಿಂಗ್ ಜಮ್ವಾಲ್
Updated on

ಶ್ರೀನಗರ: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿ ತಾನು 20 ವರ್ಷಗಳಿಂದ ಆ ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈ ದಾಳಿ "ವೈಯಕ್ತಿಕ ದ್ವೇಷದಿಂದ" ಉಂಟಾಗಿದೆ ಎಂದು ಅವನು ಒಪ್ಪಿಕೊಂಡಿದ್ದಾನೆ.

ಜಮ್ಮುವಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, 63 ವರ್ಷದ ಶೂಟರ್ ಕಮಲ್ ಸಿಂಗ್ ಜಮ್ವಾಲ್ ಅಬ್ದುಲ್ಲಾ ಅವರ ಹತ್ತಿರದಿಂದ ಬಂದು ತನ್ನ ಪರವಾನಗಿ ಪಡೆದ ಆಯುಧದಿಂದ ಗುಂಡು ಹಾರಿಸುವುದನ್ನು ವೀಡಿಯೊಗಳಲ್ಲಿ ಕಾಣಬಹುದು. ಆತನು ಹಾರಿಸಿದ ಗುಂಡಿನ ಗುರಿ ತಪ್ಪಿತು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಕಮಾಂಡೋಗಳು ಅವನನ್ನು ಶೀಘ್ರವೇ ಹಿಡಿದರು.

ಕಳೆದ ಎರಡು ದಶಕಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಯೋಜಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಆರೋಪಿಯು ಜಮ್ಮುವಿನ ಹಳೆಯ ಭಾಗದಲ್ಲಿ ಕೆಲವು ಅಂಗಡಿಗಳನ್ನು ಹೊಂದಿದ್ದು, ತನ್ನ ಅಂಗಡಿಗಳಿಂದ ಬಾಡಿಗೆ ಪಡೆದು ಬದುಕು ಸಾಗಿಸುತ್ತಿದ್ದಾನೆ.

ಕುಡಿದ ಮತ್ತಿನಲ್ಲಿದ್ದ ಜಮ್ವಾಲ್ ನನ್ನು ಜನರು ಥಳಿಸಿ ನಂತರ ವಶಕ್ಕೆ ಪಡೆದರು. ನಂತರ ಅವರು ಕುರ್ಚಿಯಲ್ಲಿ ಶಾಂತವಾಗಿ ಕುಳಿತು ಪೊಲೀಸರಿಗೆ ತಮ್ಮ ಹಿನ್ನೆಲೆಯ ಬಗ್ಗೆ ಹೇಳುತ್ತಿರುವುದು ಕಂಡುಬಂದಿದೆ.

ಜಾಮ್ವಾಲ್ ತಾನು 'ಜಾಗ್ರಣ್ ಮಂಚ್'ನ ಅಧ್ಯಕ್ಷರೆಂದು ಹೇಳಿಕೊಂಡಿದ್ದಾರೆ. ಘಟನೆ ನಡೆದಾಗ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಕೂಡ ಸ್ಥಳದಲ್ಲಿದ್ದರು.

ಅಧಿಕಾರಿಗಳ ಪ್ರಕಾರ, ಫಾರೂಕ್ ಅಬ್ದುಲ್ಲಾ ಮತ್ತು ಚೌಧರಿ ಅವರು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಬಿಎಸ್ ಚೌಹಾಣ್ ಅವರ ಮಗಳ ಮದುವೆಗೆ ಬಂದಿದ್ದರು ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದರು.

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮತ್ತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಒಮರ್ ಅಬ್ದುಲ್ಲಾ, ತನ್ನ ತಂದೆಯ ಜೀವವನ್ನು ಉಳಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಲೋಡ್ ಮಾಡಿದ ಪಿಸ್ತೂಲ್ ಹಿಡಿದ ವ್ಯಕ್ತಿ ಪಾಯಿಂಟ್-ಬ್ಲಾಂಕ್ ರೇಂಜ್ ಒಳಗೆ ಹೋಗಿ ಎನ್‌ಸಿ ಮುಖ್ಯಸ್ಥರ ಮೇಲೆ ಗುಂಡು ಹಾರಿಸಲು ಹೇಗೆ ಸಾಧ್ಯವಾಯಿತು ಎಂದು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

Farooq Abdullah, Kama Singh
ಜಮ್ಮು: ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ, ಮದುವೆ ಮನೆಯಲ್ಲೇ ಗುಂಡಿನ ದಾಳಿ; ಡಿಸಿಎಂಗೆ ಗಾಯ; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com