"ಎಲ್ಲರಂತಲ್ಲ ನನ್ನ ಫರ್ಮಾನ್....": ಕುಂಭಮೇಳ ಮೊನಾಲಿಸಗೆ ಕೇರಳದಲ್ಲಿ ಅಂತರ್ಧರ್ಮೀಯ ವಿವಾಹ; ರಕ್ಷಣೆ ಕೋರಿ ಪೊಲೀಸರ ಮೊರೆ!

ಉತ್ತರ ಪ್ರದೇಶ ಮೂಲದ ಮೊನಾಲಿಸಾನ ಫೋಟೋ, ವಿಡಿಯೋಗಳು ವೈರಲ್‌ ಆಗಿದ್ದವು. ಆ ಬಳಿಕ ಮೊನಾಲಿಸಾಗೆ ಸಿನಿಮಾ ನಟನೆಯಲ್ಲಿ ಅವಕಾಶ ಸಿಕ್ಕಿದ್ದವು.
Kumbh Mela girl' Monalisa Bhosle ties the knot with boyfriend
ಕುಂಭಮೇಳ ಮೊನಾಲಿಸಗೆ ಕೇರಳದಲ್ಲಿ ಅಂತರ್ಧರ್ಮೀಯ ವಿವಾಹonline desk
Updated on

ತಿರುವನಂತಪುರಂ: ಕುಂಭಮೇಳದ ಸಮಯದಲ್ಲಿ ಎಲ್ಲರ ಗಮನ ಸೆಳೆದು ವೈರಲ್‌ ಆಗಿದ್ದ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಯುವತಿ ಮೊನಾಲಿಸ ಕೇರಳದಲ್ಲಿ ಅಂತರ್ಧರ್ಮೀಯ ಮದುವೆಯಾಗಿದ್ದಾರೆ.

ಪ್ರಿಯಕರ ಫರ್ಮಾನ್ ಖಾನ್‌ ಅವರನ್ನು ಆಕೆ ವರಿಸಿದ್ದು, ಕುಟುಂಬದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಈಕೆ ವಯಸ್ಕಳಾಗಿರುವುದರಿಂದ, ಆಕೆ ಇಚ್ಛಿಸಿದವನೊಂದಿಗೆ ಮದುವೆಯಾಗುವ ಕಾನುನು ಬದ್ಧ ಹಕ್ಕು ಆಕೆಗೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Kumbh Mela girl' Monalisa Bhosle ties the knot with boyfriend
ಮುಸ್ಲಿಮರ ನರಮೇಧಕ್ಕೆ ಅಸ್ಸಾಂ ಮುಖ್ಯಮಂತ್ರಿ ಪ್ರಚೋದನೆ: ಪೊಲೀಸ್ ಕ್ರಮಕ್ಕೆ ಗೌರವ್ ಗೊಗೊಯ್ ಒತ್ತಾಯ

ಉತ್ತರ ಪ್ರದೇಶ ಮೂಲದ ಮೊನಾಲಿಸಾನ ಫೋಟೋ, ವಿಡಿಯೋಗಳು ವೈರಲ್‌ ಆಗಿದ್ದವು. ಆ ಬಳಿಕ ಮೊನಾಲಿಸಾಗೆ ಸಿನಿಮಾ ನಟನೆಯಲ್ಲಿ ಅವಕಾಶ ಸಿಕ್ಕಿದ್ದವು.

ಮಹಾರಾಷ್ಟ್ರದ ನಟ ಮತ್ತು ರೂಪದರ್ಶಿಯಾಗಿದ್ದ ಫರ್ಮಾನ್ ಖಾನ್ ಎಂಬ ಯುವಕನನ್ನು ಈಕೆ ಪ್ರೀತಿ ಮಾಡುತ್ತಿದ್ದರು. ತಮ್ಮ ಕುಟುಂಬದಿಂದ ತೀವ್ರ ವಿರೋಧ ಎದುರಾದ ಹಿನ್ನೆಲೆಯಲ್ಲಿ. ಇತ್ತೀಚೆಗೆ ಕೇರಳಕ್ಕೆ ಆಗಮಿಸಿ ಆಶ್ರಯ ಕೋರಿ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

ಬುಧವಾರ ತಿರುವನಂತಪುರದ ಅರುಮನೂರ್ ದೇವಸ್ಥಾನದಲ್ಲಿ ಮೊನಾಲಿಸಾ ಹಾಗೂ ಫರ್ಮಾನ್‌ ಖಾನ್‌ ವಿವಾಹವಾಗಿದ್ದಾರೆ. ಪೊಲೀಸರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com