ಪ್ರಧಾನಿ ನರೇಂದ್ರ ಮೋದಿ 100% ಟ್ರಂಪ್ ನಿಯಂತ್ರಣದಲ್ಲಿದ್ದಾರೆ: ರಾಹುಲ್ ಗಾಂಧಿ ಆರೋಪ-Video

ಗುಜರಾತ್ ನ ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣವನ್ನು ಪ್ರಶ್ನಿಸಿ, ವಿಶೇಷವಾಗಿ ಸ್ಪಷ್ಟವಾಗಿ ಒಂದು ಕೊರತೆ ಕಾಣುತ್ತಿದೆ ಎಂದು ಉಲ್ಲೇಖಿಸಿದರು.
Rahul Gandhi
ರಾಹುಲ್ ಗಾಂಧಿ
Updated on

ಪಶ್ಚಿಮ ಏಷ್ಯಾ ಸಂಕಷ್ಟದ ಕುರಿತು ಭಾರತದ ಸರ್ಕಾರದ ನಿಲುವಿನ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಎಂದಿನ ಶೈಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ನ ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣವನ್ನು ಪ್ರಶ್ನಿಸಿ, ವಿಶೇಷವಾಗಿ ಸ್ಪಷ್ಟವಾಗಿ ಒಂದು ಕೊರತೆ ಕಾಣುತ್ತಿದೆ ಎಂದು ಉಲ್ಲೇಖಿಸಿದರು. ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಅಮೆರಿಕವನ್ನು ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಸ್ಪಷ್ಟವಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದರು. ಮೋದಿಯವರ ಮೌನವು ನಮ್ಮ ದೇಶಕ್ಕೆ ಒಂದು ಗಂಭೀರ ಸಮಸ್ಯೆಯ ಸೂಚನೆ ಎಂದರು.

ಪ್ರಧಾನಮಂತ್ರಿಗಳು ಲೋಕಸಭೆಯಲ್ಲಿ 25 ನಿಮಿಷಗಳ ಭಾಷಣ ಮಾಡಿದ್ದಾರೆ ಎಂದು ಕೇಳಿದ್ದೇನೆ. ಆದರೆ ಅವರು ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ, ಏಕೆಂದರೆ ಅವರು ಅಮೆರಿಕಕ್ಕೆ ಶರಣಾಗಿದ್ದಾರೆ. ನರೇಂದ್ರ ಮೋದಿ 25 ನಿಮಿಷ ಮಾತನಾಡಿದರು, ಆದರೆ ಅಮೆರಿಕ ವಿರುದ್ಧ ಒಂದು ಪದವೂ ಮಾತನಾಡಲಿಲ್ಲ. ನರೇಂದ್ರ ಮೋದಿ ಸಂಪೂರ್ಣವಾಗಿ ಟ್ರಂಪ್ ನಿಯಂತ್ರಣದಲ್ಲಿದ್ದಾರೆ ಎಂದು ಟೀಕಿಸಿದರು.

ಭಾರತದ ರೈತರಿಗೆ ಸಮಸ್ಯೆ

ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಆರ್ಥಿಕ ನಿರ್ಧಾರಗಳನ್ನೂ ಟೀಕಿಸಿದರು. ಅಮೆರಿಕದೊಂದಿಗೆ ಸರ್ಕಾರ ಮಾಡಿಕೊಂಡಿರುವ ತಾತ್ಕಾಲಿಕ ವ್ಯಾಪಾರ ಒಪ್ಪಂದಗಳು ಭಾರತೀಯ ರೈತರಿಗೆ ಗಂಭೀರ ಪರಿಣಾಮ ಉಂಟುಮಾಡಬಹುದು. ಎರಡೂ ದೇಶಗಳ ಕೃಷಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಅಮೆರಿಕದ ಉತ್ಪನ್ನಗಳಿಗೆ ಹೆಚ್ಚಿನ ಪ್ರವೇಶ ನೀಡುವುದರಿಂದ ದೇಶೀಯ ರೈತರಿಗೆ ಅಪಾಯ ಉಂಟಾಗಬಹುದು ಎಂದು ಎಚ್ಚರಿಸಿದರು.

ಭಾರತದಲ್ಲಿ ಸಣ್ಣ ಜಮೀನುಗಳಲ್ಲಿ ಜನರು ಕೈಯಿಂದ ಕೆಲಸ ಮಾಡುತ್ತಾರೆ, ಆದರೆ ಅಮೆರಿಕದಲ್ಲಿ ದೊಡ್ಡ ಯಂತ್ರೋಪಕರಣಗಳೊಂದಿಗೆ ಕೃಷಿ ಕೆಲಸ ನಡೆಯುತ್ತದೆ. ಅಮೆರಿಕದ ವಸ್ತುಗಳು ಭಾರತಕ್ಕೆ ಬಂದರೆ ನಮ್ಮ ರೈತರು ನಾಶವಾಗುತ್ತಾರೆ ಎಂದು ಹೇಳಿದರು.

ವ್ಯಾಪಾರ ಮತ್ತು ರಾಜತಾಂತ್ರಿಕತೆಯನ್ನು ಮೀರಿ, ರಾಹುಲ್ ಗಾಂಧಿ ಅವರು ಆದಿವಾಸಿ ಸಮುದಾಯಗಳ ಗುರುತು ಮತ್ತು ಹಕ್ಕುಗಳ ವಿಚಾರವನ್ನೂ ಪ್ರಸ್ತಾಪಿಸಿದರು. ವನವಾಸಿಗಳು ಎಂಬ ಪದದ ಬಳಕೆಯನ್ನು ಟೀಕಿಸಿ, ಅದು ಆದಿವಾಸಿ ಗುರುತಿನ ಅರ್ಥವನ್ನು ಬದಲಾಯಿಸುತ್ತದೆ ಎಂದು ಹೇಳಿದರು.

ಆದಿವಾಸಿ ಎಂದರೆ ಭಾರತದ ಮೂಲ ನಿವಾಸಿಗಳು — ಈ ಭೂಮಿ, ನೀರು, ಅರಣ್ಯಗಳ (‘ಜಲ-ಜಂಗಲ್-ಜಮೀನ್’) ಯತಾರ್ಥ ಮಾಲೀಕರು. ಆದರೆ ಆರ್‌ಎಸ್‌ಎಸ್-ಬಿಜೆಪಿ ‘ವನವಾಸಿ’ ಎಂಬ ಹೊಸ ಪದವನ್ನು ಪರಿಚಯಿಸಿದೆ, ಇದು ನೀವು ಕೇವಲ ಅರಣ್ಯಗಳಲ್ಲಿ ವಾಸಿಸುವವರು ಎಂಬ ಅರ್ಥ ನೀಡುತ್ತದೆ, ಆದರೆ ಈ ಸಂಪನ್ಮೂಲಗಳ ಮಾಲೀಕರು ಅಲ್ಲ ಎಂದರ್ಥ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.

Rahul Gandhi
ಪಶ್ಚಿಮ ಏಷ್ಯಾ ಸಂಘರ್ಷ: ನಾವು ಎಲ್ಲದಕ್ಕೂ ಸಿದ್ಧ.., ಭಾರತಕ್ಕೆ 'ಹೊಸದಾದ' ಸವಾಲುಗಳು ಸೃಷ್ಟಿ- ಪ್ರಧಾನಿ ಮೋದಿ; Video

ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಬಿಜೆಪಿ ಕೇವಲ ಪ್ರಾತಿನಿಧಿಕ ಗೌರವ ನೀಡುತ್ತಿದ್ದು, ಅವರು ಹೋರಾಡಿದ ಮೂಲ ತತ್ವಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಬಿರ್ಸಾ ಮುಂಡಾ ಪ್ರತಿಮೆಯ ಮುಂದೆ ನಮಸ್ಕಾರ ಮಾಡುತ್ತಾರೆ, ಆದರೆ ಅವರ ಹೋರಾಟದ ವಿಚಾರಗಳನ್ನೇ ದಾಳಿ ಮಾಡುತ್ತಾರೆ ಎಂದು ಹೇಳಿದರು.

ಇನ್ನು, ಭೂಮಿ, ನೀರು ಮತ್ತು ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ನೀತಿಗಳು ಆದಿವಾಸಿ ಸಮುದಾಯಗಳಿಗೂ ಮತ್ತು ಸಂವಿಧಾನ ಮೌಲ್ಯಗಳಿಗೂ ನೇರ ಸವಾಲು ಎಂದೂ ಅವರು ಆರೋಪಿಸಿದರು. ಬಿಜೆಪಿ ಆದಿವಾಸಿಗಳಿಂದ ಭೂಮಿ, ನೀರು ಮತ್ತು ಅರಣ್ಯಗಳನ್ನು ಕಸಿದುಕೊಳ್ಳುವಾಗ, ಅದು ಕೇವಲ ಬಿರ್ಸಾ ಮುಂಡಾ ವಿರುದ್ಧದ ದಾಳಿ ಮಾತ್ರವಲ್ಲ, ಸಂವಿಧಾನದ ಮೇಲಿನ ದಾಳಿಯೂ ಆಗಿದೆ ಎಂದು ಹೇಳಿದರು.

Rahul Gandhi
ಸಂಸತ್ತಿನಲ್ಲಿ ಪಶ್ಚಿಮ ಏಷ್ಯಾ ಕುರಿತು ಚರ್ಚೆ: ಪ್ರಧಾನಿ ಹೊಸದೇನೂ ಹೇಳಿಲ್ಲ- ಪ್ರಿಯಾಂಕಾ ಗಾಂಧಿ

ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ-ಇರಾನ್ ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಯುದ್ಧದಿಂದ ಉಂಟಾಗಿರುವ ಆರ್ಥಿಕ, ಭದ್ರತಾ ಮತ್ತು ಮಾನವೀಯ ಸವಾಲುಗಳನ್ನು ಭಾರತ ಎದುರಿಸುತ್ತಿದೆ, ಜೊತೆಗೆ ನಾಗರಿಕರು ಮತ್ತು ಪ್ರಮುಖ ಸರಬರಾಜುಗಳು ಸುರಕ್ಷಿತವಾಗಿರುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ವ್ಯತ್ಯಯಗಳ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ಹೇಳಿಕೆ ನೀಡುವ ವೇಳೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ವಾಣಿಜ್ಯ ಹಡಗುಗಳ ಮೇಲೆ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳ ಸರಬರಾಜು ನಿರಂತರವಾಗಿರುವಂತೆ ಸರ್ಕಾರ ಮಾರ್ಗಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com