ಶ್ರೀನಗರ: 36 ವರ್ಷಗಳಲ್ಲಿ ಇದೇ ಮೊದಲು; ಹಿಂದೂಗಳ ಜೊತೆ ಮುಸ್ಲಿಂರು ಸೇರಿ ರಾಮ ನವಮಿ ಪೂಜೆ!

36 ವರ್ಷಗಳ ನಂತರ ಶತಮಾನಗಳಷ್ಟು ಹಳೆಯದಾದ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮುಸ್ಲಿಂರು ಸೇರಿ ರಾಮ ನವಮಿ ಪೂಜೆ ನೆರೆವೇರಿಸಿದ್ದಾರೆ.
Raghunath Mandir
ರಘುನಾಥ ಮಂದಿರ
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಬ್ಬ ಕಡಲ್ ಪ್ರದೇಶದಲ್ಲಿರುವ ರಘುನಾಥ ಮಂದಿರದಲ್ಲಿ ಗುರುವಾರ ಜೀವ ಕಳೆ ಬಂದಿತ್ತು.

36 ವರ್ಷಗಳ ನಂತರ ಶತಮಾನಗಳಷ್ಟು ಹಳೆಯದಾದ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮುಸ್ಲಿಂರು ಸೇರಿ ರಾಮ ನವಮಿ ಪೂಜೆ ನೆರೆವೇರಿಸಿದ್ದಾರೆ. ಜೀರ್ಣೋದ್ಧಾರ ಕಾರ್ಯಗಳು ಇನ್ನೂ ನಡೆಯುತ್ತಿದ್ದರೂ ದೇವಾಲಯದ ಆಡಳಿತ ಸಮಿತಿಯು ರಾಮನವಮಿ ನಿಮಿತ್ತ ಪೂಜೆಯನ್ನು ಆಯೋಜಿಸಿತು.

36 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ರಾಮನವಮಿ ಪೂಜೆಯನ್ನು ನಡೆಸಲಾಗುತ್ತಿದೆ. ನಮ್ಮಲ್ಲಿ ಕೆಲವರು ಜಮ್ಮುವಿನಿಂದ ಬಂದಿದ್ದೇವೆ, ಆದರೆ ದೇಶ ಮತ್ತು ವಿದೇಶಗಳಲ್ಲಿ ಅನೇಕರು ದೇಣಿಗೆ ನೀಡುವ ಮೂಲಕ ಜೀರ್ಣೋದ್ಧಾರ ಕಾರ್ಯಗಳನ್ನು ಬೆಂಬಲಿಸಿದ್ದಾರೆ ಎಂದು ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹೇಳಿದ್ದಾರೆ.

ಇನ್ನೂ ಜೀರ್ಣೋದ್ಧಾರ ಕೆಲಸ ನಡೆಯುತ್ತಿರುವುದರಿಂದ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತ್ ವಲಸಿಗರು ಕಣಿವೆಗೆ ಮರಳುವ ಕುರಿತು ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಕಾಶ್ಮೀರಿ ಮುಸ್ಲಿಂ ಸಮುದಾಯದ ಬೆಂಬಲವಿಲ್ಲದೆ ಅಂತಹ ಮರಳುವಿಕೆ ಸಾಧ್ಯವಿಲ್ಲ. "ನಮಗೆ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಒಂದು ವರ್ಷವೂ ಬೇಕಾಗುವುದಿಲ್ಲ, ಆದರೆ ಕಾಶ್ಮೀರಿ ಮುಸ್ಲಿಮರು ನಮ್ಮ ಮರಳುವಿಕೆಯನ್ನು ಬೆಂಬಲಿಸಬೇಕಾಗಿದೆ ಎಂದು ಹೇಳಿದರು.

ಸ್ಥಳೀಯ ಮುಸಲ್ಮಾನರಾದ ಗುಲಾಂ ಹಸನ್ ಕೂಡ ಪೂಜಾ ಕೈಂಕರ್ಯದಲ್ಲಿ ಹಾಜರಿದ್ದರು. "ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು ಸಹೋದರರು, ನಾವು ದಶಕಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

Raghunath Mandir
ಚೊಚ್ಚಲ Ranji Trophy ಗೆದ್ದ ಜಮ್ಮು ಮತ್ತು ಕಾಶ್ಮೀರ; ₹2 ಕೋಟಿ ನಗದು ಬಹುಮಾನ ಘೋಷಿಸಿದ ಸಿಎಂ ಒಮರ್ ಅಬ್ದುಲ್ಲಾ

ನಗರದ ಶಂಕರಾಚಾರ್ಯ ದೇಗುಲ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಪ್ರಾರ್ಥನೆಗಳು ನಡೆದವು. ಪ್ರವಾಸಿಗರು ಮತ್ತು ಭದ್ರತಾ ಪಡೆಗಳು ಹಿಂದೂಗಳೊಂದಿಗೆ ಸೇರಿಕೊಂಡು ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com