ಛತ್ತೀಸ್‌ಗಢ: ತಲೆಗೆ 5 ಲಕ್ಷ ರೂ. ಬಹುಮಾನ ಹೊಂದಿದ್ದ ಮಾವೋವಾದಿ ಕಮಾಂಡರ್ ಹತ್ಯೆ

ಮಾವೋವಾದಿ ಕೇಡರ್‌ಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಸುಕ್ಮಾ ಜಿಲ್ಲಾ ಮೀಸಲು ಗಾರ್ಡ್(ಡಿಆರ್‌ಜಿ) ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
Maoist platoon commander carrying Rs 5 lakh bounty gunned down by security forces in Chhattisgarh
ಸಾಂದರ್ಭಿಕ ಚಿತ್ರ
Updated on

ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ದಕ್ಷಿಣ ಬಸ್ತಾರ್‌ನ ಪೋಲಂಪಲ್ಲಿ ಪ್ರದೇಶದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ.

ದೂರದ ಪ್ರದೇಶದಲ್ಲಿ ಮಾವೋವಾದಿ ಕೇಡರ್‌ಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಸುಕ್ಮಾ ಜಿಲ್ಲಾ ಮೀಸಲು ಗಾರ್ಡ್(ಡಿಆರ್‌ಜಿ) ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

“ಒಂದು ದಿನದ ಮೊದಲು ಪ್ರಾರಂಭಿಸಲಾದ ಈ ಕಾರ್ಯಾಚರಣೆಯಲ್ಲಿ, ಭಾನುವಾರ ಬೆಳಗ್ಗೆ ಡಿಆರ್‌ಜಿ ತಂಡ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಸಂಪೂರ್ಣ ಶೋಧ ನಡೆಸಿದ ನಂತರ, ಭದ್ರತಾ ಸಿಬ್ಬಂದಿ ಪುರುಷ ಮಾವೋವಾದಿಯ ಮೃತದೇಹ ಮತ್ತು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.

Maoist platoon commander carrying Rs 5 lakh bounty gunned down by security forces in Chhattisgarh
ಛತ್ತೀಸ್‌ಗಢ: ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳ ಹತ್ಯೆ

ತಟಸ್ಥಗೊಳಿಸಲಾದ ಕಮಾಂಡರ್ ಮುಚಾಕಿ ಕೈಲಾಶ್, ಮಾವೋವಾದಿ ಶ್ರೇಣಿಯ ಪ್ರಮುಖ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ಅವರು ಸಿಪಿಐ(ಮಾವೋವಾದಿ)ನ ಪ್ಲಟೂನ್ ಸಂಖ್ಯೆ 31ರ ಸೆಕ್ಷನ್ ಕಮಾಂಡರ್ ಆಗಿದ್ದರು ಮತ್ತು ಅವರ ತಲೆಗೆ 5 ಲಕ್ಷ ರೂ.ಗಳ ಬಹುಮಾನ ಹೊಂದಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ನಾಗರಿಕರ ಹತ್ಯೆ, ಭದ್ರತಾ ಪಡೆಗಳ ಮೇಲಿನ ನೇರ ದಾಳಿ ಮತ್ತು ಐಇಡಿ ಸ್ಫೋಟಗಳ ಮಾಸ್ಟರ್‌ಮೈಂಡ್‌ ಆಗಿದ್ದ ಕೈಲಾಶ್ ಪೊಲೀಸರಿಗೆ ಬೇಕಾಗಿದ್ದ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com