Kerala Election: ಕೇರಳ ಮಾಜಿ ಸಿಎಂ ಪುತ್ರನಿಗೆ 52,907 ಮತಗಳ ಭಾರಿ ಅಂತರದ ಗೆಲುವು!

ಚಾಂಡಿ ಅವರ ಚುನಾವಣಾ ಪ್ರಚಾರವು ವ್ಯಾಪಕ ಗಮನ ಸೆಳೆದಿತ್ತು. ಏಕೆಂದರೆ ಅವರು ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಿದರು. ಅವರು ಪ್ಲಾಸ್ಟಿಕ್ ಬ್ಯಾನರ್‌ಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳನ್ನು ಬಳಸುವುದನ್ನು ತಪ್ಪಿಸಿದರು.
Chandy Oommen
ಚಾಂಡಿ ಉಮ್ಮನ್
Updated on

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ, ಕಾಂಗ್ರೆಸ್ ಶಾಸಕ ಚಾಂಡಿ ಉಮ್ಮನ್ ಸೋಮವಾರ ತಮ್ಮ ತವರು ಕ್ಷೇತ್ರ ಪುತುಪ್ಪಳ್ಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಚಾಂಡಿ ಅವರು ತಮ್ಮ ಸಮೀಪ ಸ್ಪರ್ಧಿಗಿಂತ 52,907 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 9 ರಂದು ನಡೆದಿತ್ತು.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಚಾಂಡಿ ಅವರು 84,031 ಮತಗಳನ್ನು ಪಡೆದರು. ಸಿಪಿಐ (ಎಂ)ನ ಕೆಎಂ ರಾಧಾಕೃಷ್ಣನ್ ಅವರು 31,124 ಮತಗಳನ್ನು ಪಡೆದರು.

Chandy Oommen
ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಗೆ ಹೀನಾಯ ಸೋಲು; ಬಿಜೆಪಿ ಗೆಲುವಿನ ಅಂತರ ಎಷ್ಟು ಗೊತ್ತಾ?

ಚಾಂಡಿ ಅವರ ಚುನಾವಣಾ ಪ್ರಚಾರವು ವ್ಯಾಪಕ ಗಮನ ಸೆಳೆದಿತ್ತು. ಏಕೆಂದರೆ ಅವರು ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಿದರು. ಅವರು ಪ್ಲಾಸ್ಟಿಕ್ ಬ್ಯಾನರ್‌ಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳನ್ನು ಬಳಸುವುದನ್ನು ತಪ್ಪಿಸಿದರು. ಬದಲಾಗಿ ಸೈಕಲ್ ಬಳಸಿ ಮನೆ-ಮನೆಗೆ ಪ್ರಚಾರ ಮಾಡುವ ಮೂಲಕ ಸುಸ್ಥಿರತೆಯನ್ನು ಉತ್ತೇಜಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com