

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆ ಕೊರತೆ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ LPG ಉತ್ಪಾದನೆ ದಿನಕ್ಕೆ 54,000 ಟನ್ ಗೆ ಏರಿಕೆಯಾಗಿದೆ ಎಂದು ಹೇಳಿದೆ.
ಈ ಕುರಿತು Confederation of Indian Industry ವಾರ್ಷಿಕ ಬಿಸಿನೆಸ್ ಸಮಿಟ್‌ನಲ್ಲಿ ಮಾತನಾಡಿದ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ಮಂಗಳವಾರ ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆ ಕೊರತೆ ಇಲ್ಲ ಎಂದು ಭರವಸೆ ನೀಡಿದರು.
ಅಲ್ಲದೆ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 35,000-36,000 ಟನ್‌ನಿಂದ 54,000 ಟನ್‌ಗೆ ಹೆಚ್ಚಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಕೈಗೊಂಡ ತುರ್ತು ಕ್ರಮಗಳ ಭಾಗವಾಗಿ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 35,000-36,000 ಟನ್‌ನಿಂದ ಸುಮಾರು 54,000 ಟನ್‌ಗೆ ಹೆಚ್ಚಿಸಲಾಗಿದೆ ಎಂದರು.
ಅಂತೆಯೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮುಖ್ಯಸ್ಥರಾಗಿರುವ ಪುರಿ, ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸಮಸ್ಯೆ ಇಲ್ಲ ಎಂದು ಹೇಳಿ, ಭಾರತದಲ್ಲಿ 69 ದಿನಗಳಿಗೆ ಸಾಕಾಗುವ ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ಸಂಗ್ರಹ ಹಾಗೂ 45 ದಿನಗಳಿಗೆ ಸಾಕಾಗುವ ಎಲ್‌ಪಿಜಿ ಸಂಗ್ರಹವಿದೆ ಎಂದು ಹೇಳಿದರು.
ಎಚ್ಚರಿಕೆಯ ಕರೆಗಂಟೆ
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಮನವಿಯನ್ನು “ಎಚ್ಚರಿಕೆಯ ಕರೆ” ಎಂದು ಪರಿಗಣಿಸಬೇಕು ಎಂದು ಪುರಿ ಹೇಳಿದರು. “ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಬಹುದಾದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಕ್ರಮಗಳ ಬಗ್ಗೆ ಯೋಚಿಸಲು ಪ್ರಧಾನಿ ಮೋದಿ ಅವರ ಮಿತವ್ಯಯದ ಮನವಿ ಎಚ್ಚರಿಕೆಯ ಕರೆ ಆಗಿದೆ,” ಎಂದು ಅವರು ಸಮಾವೇಶದಲ್ಲಿ ಹೇಳಿದರು.
ಪೆಟ್ರೋಲ್ ಮಿತ ಬಳಕೆ, ಚಿನ್ನ ಖರೀದಿ ಮುಂದೂಡಿಕೆಗೆ ಮೋದಿ ಕರೆ
ಪ್ರಧಾನಿ ಮೋದಿ ಅವರು ಭಾನುವಾರ ಇಂಧನವನ್ನು ವಿವೇಕಬದ್ಧವಾಗಿ ಬಳಸುವುದು, ಚಿನ್ನ ಖರೀದಿಯನ್ನು ಮುಂದೂಡುವುದು ಮತ್ತು ವಿದೇಶ ಪ್ರವಾಸವನ್ನು ತಾತ್ಕಾಲಿಕವಾಗಿ ತಪ್ಪಿಸುವಂತೆ ಕರೆ ನೀಡಿದ್ದರು.
ಹೈದರಾಬಾದ್‌ನಲ್ಲಿ BPJ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು, ನಗರಗಳಲ್ಲಿ ಮೆಟ್ರೋ ರೈಲು ಸೇವೆ ಬಳಸುವುದು, ಕಾರ್‌ಪೂಲಿಂಗ್ ಉತ್ತೇಜಿಸುವುದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವುದು, ಪಾರ್ಸೆಲ್ ಸಾಗಣೆಗೆ ರೈಲು ಸೇವೆ ಬಳಸುವುದು ಮತ್ತು ಮನೆಯಿಂದ ಕೆಲಸ ಮಾಡುವುದರ ಮೂಲಕ ವಿದೇಶಿ ವಿನಿಮಯ ಉಳಿಸಬಹುದು ಎಂದು ಸಲಹೆ ನೀಡಿದ್ದರು.
ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆಯೇ ವಿದೇಶಿ ವಿನಿಮಯವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಮೋದಿ, ಒಂದು ವರ್ಷದ ಕಾಲ ಚಿನ್ನ ಖರೀದಿ ಹಾಗೂ ವಿದೇಶ ಪ್ರವಾಸವನ್ನು ಮುಂದೂಡಲು ಜನರಿಗೆ ಮನವಿ ಮಾಡಿದ್ದರು.
Advertisement