

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ಭಬಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳುವುದಾಗಿ ಬುಧವಾರ ಘೋಷಿಸಿದ್ದು, ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಭಬಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಹಾಗೂ ತಮ್ಮ ಸ್ವಕ್ಷೇತ್ರ ನಂದಿಗ್ರಾಮದಲ್ಲಿ ಟಿಎಂಸಿ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.
ಎರಡೂ ಕಡೆ ಗೆಲುವು ಸಾಧಿಸಿರುವ ಸುವೇಂದು ಅಧಿಕಾರಿ ಅವರು ಈಗ ಒಂದು ಕಡೆ ರಾಜೀನಾಮೆ ನೀಡಿದ್ದು, ಭವಾನಿಪುರವನ್ನು ಉಳಿಸಿಕೊಂಡಿದ್ದಾರೆ.
ಸುವೇಂದು ಅಧಿಕಾರಿ ಅವರು ಇಂದು ವಿಧಾನಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ವಿಧಾನಸಭೆಯ ಮೆಟ್ಟಿಲುಗಳಿಗೆ ದೀರ್ಘ ದಂಡ ನಮಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ನಂದಿಗ್ರಾಮ ಮತ್ತು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ಭವಾನಿಪುರ ಕ್ಷೇತ್ರಗಳಲ್ಲೂ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ನಾಯಕ ಸುಬೇಂದು ಅಧಿಕಾರಿ, “ಪ್ರಜಾಪ್ರಭುತ್ವದ ದೇವಾಲಯ”ವೆಂದೇ ಕರೆಯಲ್ಪಡುವ ವಿಧಾನಸಭೆಗೆ ಗೌರವ ಸೂಚಿಸಿದ ಕ್ರಮಕ್ಕೆ ಪ್ರಶಂಸೆ ಪಡೆದರು.
Advertisement