Tamil Nadu: ಫ್ಯಾಷನ್ ಟ್ರೆಂಡ್ ಆಗ್ತಿದೆ ವಿಜಯ್ CM ಸ್ಟೈಲ್, 'ಕಾಂಬೊ ಪ್ಯಾಕೇಜ್‌' ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಕಾಂಬೊ ಪ್ಯಾಕೇಜ್ ಗೆ ಈಗಾಗಲೇ ಭಾರಿ ಬೇಡಿಕೆ ಬರುತ್ತಿದೆ ಎಂದು ತಿರುನಲ್ವೇಲಿ ಶಾಖೆಯ ಅಂಗಡಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
CM vijay style
ವಿಜಯ್ ಸಿಎಂ ಸ್ಟೈಲ್
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಸ್ಟೈಲ್ ಕೇವಲ ರಾಜಕಾರಣಿಗಳು, ಫ್ಯಾನ್ಸ್ ಕ್ಲಬ್ ಗಳಿಗೆ ಸ್ಫೂರ್ತಿ ಆಗಿಲ್ಲ. ಈಗ ಪೂರ್ಣ ಪ್ರಮಾಣದ ಫ್ಯಾಶನ್ ಟ್ರೆಂಡ್ ಕೂಡಾ ಆಗ್ತಿದೆ.

ತಮಿಳುನಾಡಿನ ಜನಪ್ರಿಯ ಬಟ್ಟೆ ಮಳಿಗೆಗಳಾದ ಚೆನ್ನೈ ಸಿಲ್ಕ್ಸ್, ವಿಜಯ್ ಮುಖ್ಯಮಂತ್ರಿಯಾದ ನಂತರ ಧರಿಸಿದ್ದ ಕಪ್ಪು ಸೂಟ್-ಬಿಳಿ-ಶರ್ಟ್ ಲುಕ್ ಅನ್ನು ಹೋಲುವ 'ಕಾಂಬೊ ಪ್ಯಾಕೇಜ್' ಅನ್ನು ಪ್ರಚಾರ ಮಾಡಲು ಪ್ರಾರಂಭಿಸಿದೆ. ವಿಜಯ್ ಸಿಎಂ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದರೆ, ಕೆಲವು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಕಾಂಬೊ ಪ್ಯಾಕೇಜ್ ಗೆ ಈಗಾಗಲೇ ಭಾರಿ ಬೇಡಿಕೆ ಬರುತ್ತಿದೆ ಎಂದು ತಿರುನಲ್ವೇಲಿ ಶಾಖೆಯ ಅಂಗಡಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಎರಡೂ ಆಯ್ಕೆಗಳನ್ನು ನೀಡುತ್ತೇವೆ. ಒಂದು ಕಾಂಬೊದಲ್ಲಿ ಕಪ್ಪು ಬ್ಲೇಜರ್, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ ಇರುತ್ತದೆ. ಟೈಲರ್ ಹತ್ತಿರ ಬಟ್ಟೆ ಹೊಲೆಸುಕೊಳ್ಳುವವರು ಪ್ಯಾಂಟ್ ಪೀಸ್ ಮತ್ತು ಶರ್ಟ್ ಅನ್ನು ಪ್ರತ್ಯೇಕವಾಗಿ ಖರೀದಿಸಬಹುದು ಎಂದು ತಿಳಿಸಿದರು.

ಗ್ರಾಹಕರು ಈ ಬಟ್ಟೆಗಳನ್ನು ಮಾತ್ರ ವಿಚಾರಿಸುತ್ತಿಲ್ಲ. ಶೋ ಸೇರಿದಂತೆ ವಿಜಯ್ ಸಿಎಂ ಅವತಾರದ ಎಲ್ಲಾ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಶೂ ಬೆಲೆ 1,500 ರೂ.ಗಳಿಂದ ಆರಂಭವಾಗುತ್ತದೆ. ಬೆಲ್ಟ್ ಬೆಲೆ 800 ರೂ. ಆಗಿದೆ. ಕಾಂಬೊ ಪ್ಯಾಕೇಜ್ ಬೆಲೆ 3,999 ರೂ. ಆಗಿದೆ.

ವಿಜಯ್ ವರ್ಚಸ್ಸು ತಮಿಳುನಾಡಿನ ಪ್ರಸಿದ್ಧ ಸಂಸ್ಕೃತಿ ಮೇಲೂ ಪ್ರಭಾವ ಬೀರಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಮಕ್ಕಳು ಹಾಗೂ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವ ಜನತೆ ವಿಜಯ್ ಅವರ ಬಲವಾದ ಪ್ರಚಾರಕರಾಗಿದ್ದರು. ಇದರಿಂದಾಗಿ ಇಡೀ ಕುಟುಂಬ ಟಿವಿಕೆಯತ್ತ ಮತ ಚಲಾಯಿಸಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com