ರಾಷ್ಟ್ರೀಯ ಭದ್ರತೆಗೆ ಬೆದರಿಕೆ? ಕಾಕ್ರೋಚ್ ಜನತಾ ಪಕ್ಷದ x ಖಾತೆ ನಿರ್ಬಂಧಕ್ಕೆ ಕಾರಣ! ವರದಿಗಳು

2000 ರ ಸೆಕ್ಷನ್ 69A ಅಡಿಯಲ್ಲಿ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ಸ್ಥಗಿತಗೊಳಿಸಲು X ಗೆ ನಿರ್ದೇಶನ ನೀಡಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Cockroach Janta Party surpasses BJP on Instagram, has over 10 million followers
ಕಾಕ್ರೋಚ್ ಜನತಾ ಪಕ್ಷ
Updated on

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗೆ ವಿರೋಧವಾಗಿ ಕಳೆದ ವಾರ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ತಡೆಹಿಡಿಯಲಾಗಿತ್ತು. ಇದಕ್ಕೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕೇಂದ್ರ ಸರ್ಕಾರ ಆರೋಪಿಸಿದ ನಂತರ ಎಕ್ಸ್ ಖಾತೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿತ್ತು.

ಗುಪ್ತಚರ ಇಲಾಖೆಯಿಂದ ಮಾಹಿತಿಗಳನ್ನು ಪಡೆದ ನಂತರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ಸ್ಥಗಿತಗೊಳಿಸಲು X ಗೆ ನಿರ್ದೇಶನ ನೀಡಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆ ಹಾಕುವ "ಪ್ರಚೋದನಕಾರಿ ವಿಷಯ"ವನ್ನು ಪೋಸ್ಟ್ ಮಾಡಿದ್ದನ್ನು ಗುಪ್ತ ಚರ ಇಲಾಖೆ ಗಮನಿಸಿತ್ತು. ವಿಶೇಷವಾಗಿ ಯುವ ಜನತೆಯಲ್ಲಿ ಅದರ ಜನಪ್ರಿಯತೆ ಹೆಚ್ಚುತ್ತಿರುವ ಕಾರಣ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ನಿರ್ಬಂಧಿಸಲು ಗುಪ್ತಚಾರ ಇಲಾಖೆಯಿಂದ MeitY ಗೆ ಮಾಹಿತಿ ಬಂದಿತ್ತು. ಅಲ್ಲದೇ ಅದು ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆಯನ್ನುಂಟುಮಾಡುತ್ತದೆ ಎಂದು ಉಲ್ಲೇಖಿಸಿ ಅದರ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಖಾತೆಯ ಫಾಲೋವರ್ಸ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ತ್ವರಿತಗತಿಯಲ್ಲಿ ಹೆಚ್ಚಾಗುತಿತ್ತು. ಹ್ಯಾಂಡಲ್ ಸುಮಾರು 90,000 ಫಾಲೋವರ್ಸ್ ಹೊಂದಿದಾಗ ಖಾತೆ ನಿರ್ಬಂಧಿಸಲು ಎಕ್ಸ್ ಗೆ ಮನವಿ ಮಾಡಲಾಯಿತು ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು. ಗುರುವಾರ ಸಂಜೆಯ ಹೊತ್ತಿಗೆ, ಖಾತೆಯು ಜಾಗತಿಕವಾಗಿ 200,000 ಫಾಲೋವರ್ಸ್ ಗಳನ್ನು ದಾಟಿದೆ ಎಂದು ವರದಿಯಾಗಿದೆ. ಭಾರತದೊಳಗೆ ಖಾತೆಯನ್ನು ತಡೆಹಿಡಿಯಲಾಗಿದ್ದರೂ, ಎಕ್ಸ್‌ನ ವಿಷಯ ನಿರ್ಬಂಧ ನೀತಿಗಳಿಗೆ ಅನುಗುಣವಾಗಿ ಇತರ ದೇಶಗಳಲ್ಲಿ ಈ ಖಾತೆಗೆ ಪ್ರವೇಶಿಸಬಹುದಾಗಿದೆ.

ವೇದಿಕೆಯ ಮಾರ್ಗಸೂಚಿಗಳ ಪ್ರಕಾರ, X ಸರ್ಕಾರದ ಅಧಿಕೃತ ಇಲಾಖೆ ಅಥವಾ ಸಂಸ್ಥೆಯಿಂದ ಸರಿಯಾದ ಕಾರಣ ಕೊಟ್ಟ ಖಾತೆ ಸ್ಥಗಿತಕ್ಕೆ ಮನವಿ ಮಾಡಿದ್ದರೆ ಅಂತಹ ಖಾತೆಗಳನ್ನು ತಡೆಹಿಡಿಯಬಹುದು. Instagram ಖಾತೆಯನ್ನು ಭಾರತದಲ್ಲಿ ಇನ್ನೂ ನಿರ್ಬಂಧಿಸಲಾಗಿಲ್ಲ. ಗುರುವಾರ ಸಂಜೆಯ ಹೊತ್ತಿಗೆ, ಇದು 16 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದೆ ಎಂದು ವರದಿಯಾಗಿದೆ. ಆದಾಗ್ಯೂ, Instagram ಹ್ಯಾಂಡಲ್ ಅನ್ನು ನಿರ್ಬಂಧಿಸುವ ಪ್ರಕ್ರಿಯೆಯು ಸಹ ನಡೆಯುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ಹೇಳಿದರು.

Cockroach Janta Party surpasses BJP on Instagram, has over 10 million followers
'Cockroach is Back': ನಿರ್ಬಂಧ ಬೆನ್ನಲ್ಲೇ ಮತ್ತೊಂದು x ಅಕೌಂಟ್ ಆರಂಭ! Insta ಸ್ಥಗಿತಕ್ಕೆ ಪ್ರಯತ್ನ- ದೀಪ್ಕೆ ಆರೋಪ

ನಿರೀಕ್ಷೆಯಂತೆ, ಭಾರತದಲ್ಲಿ ಕಾಕ್ರೋಜ್ ಜನತಾ ಪಕ್ಷದ ಖಾತೆಯನ್ನು ತಡೆಹಿಡಿಯಲಾಗಿದೆ" ಎಂದು ದಿಪ್ಕೆ ಗುರುವಾರ ಮಧ್ಯಾಹ್ನ ಪೋಸ್ಟ್ ಮಾಡಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ Cockroach is back ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿರುವುದಾಗಿ ಹೇಳಿದ್ದರು. 30 ವರ್ಷದ ದಿಪ್ಕೆ ಮೂಲತಃ ಮಹಾರಾಷ್ಟ್ರದವರಾಗಿದ್ದು, ಅವರು ಪ್ರಸ್ತುತ ಬೋಸ್ಟನ್‌ನಲ್ಲಿ ನೆಲೆಸಿದ್ದಾರೆ. ವ್ಯವಸ್ಥೆಯ ಮೇಲೆ ದಾಳಿ ಮಾಡುವ" ವ್ಯಕ್ತಿಗಳ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗಳ ನಂತರ ಈ ವಿಡಂಬನಾತ್ಮಕ ಖಾತೆಯನ್ನು ಪ್ರಾರಂಭಿಸಲಾಗಿದೆ, ಈ ಹೇಳಿಕೆಗಳು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com