ದೇಶದಲ್ಲಿ ಮತ್ತೆ ಗ್ಯಾಸ್ ಕೊರತೆ?: LPG ಸಿಲಿಂಡರ್ ಪೂರೈಕೆದಾರರಿಗೆ ಕೇಂದ್ರದಿಂದ ಮಹತ್ವದ ಸೂಚನೆ

ಭಾರತವು ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಿದೆ ಎಂದು ಸುಜಾತಾ ಶರ್ಮಾ ಅವರು ತಿಳಿಸಿದ್ದಾರೆ.
Centre asks state-run fuel retailers to build 30-day LPG reserves amid West Asia supply concerns
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಆಯಕಟ್ಟಿನ ಸಮುದ್ರ ಮಾರ್ಗವಾಗಿರುವ 'ಸ್ಟ್ರೇಟ್ ಆಫ್ ಹಾರ್ಮುಜ್' ಬಂದ್ ಆಗಿದ್ದು, ಗ್ಯಾಸ್ ಪೂರೈಕೆಯಲ್ಲಿನ ಅಡೆತಡೆಗಳ ಬಗ್ಗೆ ತೀವ್ರ ಕಳವಳಗಳ ನಡುವೆ, ಕನಿಷ್ಠ 30 ದಿನಗಳ ಬೇಡಿಕೆಗೆ ಸಾಕಾಗುವಷ್ಟು ದ್ರವೀಕೃತ ಪೆಟ್ರೋಲಿಯಂ ಅನಿಲ(LPG) ಸಂಗ್ರಹ ಸಾಮರ್ಥ್ಯ ಹೊಂದುವಂತೆ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಇಂಧನ ರಿಟೇಲ್ ವ್ಯಾಪಾರಿಗಳಿಗೆ ಸೂಚಿಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ - ತಮ್ಮ ನಿಯಮಿತ ವಾಣಿಜ್ಯ ದಾಸ್ತಾನುಗಳನ್ನು ಮೀರಿ ಹೆಚ್ಚುವರಿ ಸಂಗ್ರಹ ಸಾಮರ್ಥ್ಯವನ್ನು ಸೃಷ್ಟಿಸುವ ಯೋಜನೆಗಳನ್ನು ಸಿದ್ಧಪಡಿಸಲು ನಿರ್ದೇಶನ ನೀಡಲಾಗಿದೆ.

"ನಾವು ಕಾರ್ಯತಂತ್ರದ ನಿಕ್ಷೇಪಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ತೈಲ ಮಾರುಕಟ್ಟೆ ಕಂಪನಿಗಳು ತಮ್ಮೊಂದಿಗೆ ಕನಿಷ್ಠ 30 ದಿನಗಳಿಗೆ ಆಗುವಷ್ಟು LPG ಸಂಗ್ರಹ ಹೊಂದಲು ಯೋಜನೆಯನ್ನು ರೂಪಿಸುವಂತೆ ಸೂಚಿಸಲಾಗಿದೆ ಮತ್ತು ಅವರು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ" ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Centre asks state-run fuel retailers to build 30-day LPG reserves amid West Asia supply concerns
ಹಾರ್ಮುಜ್ ದಾಟಿದ LPG ಹೊತ್ತ ಭಾರತದ ಎರಡು ಹಡಗು; ದಾಳಿಯಿಂದ ಮುಳುಗಿದ ಮತ್ತೊಂದು ಟ್ಯಾಂಕರ್‌!

ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಭಾರತ ಸೇರಿದಂತೆ ಜಾಗತಿಕ ಇಂಧನ ಪೂರೈಕೆಗೆ ತೀವ್ರ ಅಡ್ಡಿಪಡಿಸಿದೆ. ಗಲ್ಫ್ ಪ್ರದೇಶದ ದೇಶಗಳಿಂದ ಬರುವ ಭಾರತದ ಶೇ. 40 ರಷ್ಟು ಕಚ್ಚಾ ಆಮದು, ಶೇ. 65 ರಷ್ಟು ನೈಸರ್ಗಿಕ ಅನಿಲ ಮತ್ತು ಶೇ. 90 ರಷ್ಟು LPG ಸರಬರಾಜುಗೆ ಮೂರು ತಿಂಗಳ ಸುದೀರ್ಘ ಸಂಘರ್ಷದಿಂದಾಗಿ ತೀವ್ರ ಅಡ್ಡಿಯಾಗಿದೆ ಎಂದಿದ್ದಾರೆ.

ಭಾರತವು ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಿದೆ ಎಂದು ಸುಜಾತಾ ಶರ್ಮಾ ಅವರು ತಿಳಿಸಿದ್ದಾರೆ.

ಅದಾಗ್ಯೂ, ದೇಶದಲ್ಲಿ ಯಾವುದೇ ಇಂಧನ ಕೊರತೆ ಇಲ್ಲ, ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲದ ಸಾಕಷ್ಟು ದಾಸ್ತಾನು ಇದೆ ಎಂದು ಸರ್ಕಾರ ಹೇಳಿದ್ದು, ಸಂಸ್ಕರಣಾಗಾರಗಳು ಅತ್ಯುತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಎಲ್‌ಪಿಜಿ ಉತ್ಪಾದನೆಯು ದಿನಕ್ಕೆ ಸುಮಾರು 52,000 ಟನ್‌ಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com