ಬಿಜೆಪಿಗೆ ಮತ್ತೆ ಮಹಾ ತಲೆನೋವು: ಮರಾಠಾ ಮೀಸಲಾತಿಗಾಗಿ ಜರಂಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಇತರ ಹಿಂದುಳಿದ ವರ್ಗಗಳಿಗೆ ಸಚಿವಾಲಯ ರಚಿಸುವಂತೆ ಮರಾಠಾ ಸಮುದಾಯಕ್ಕೂ ಒಂದು ಸಚಿವಾಲಯವನ್ನು ರಚಿಸುವಂತೆ ಅವರು ಕೋರಿದ್ದಾರೆ.
Jarange
ಜರಂಗೆ online desk
Updated on: 

ಮರಾಠಾ ಮೀಸಲಾತಿ ಕಾರ್ಯಕರ್ತ ಮನೋಜ್ ಜರಂಗೆ ಶನಿವಾರ ಜಲ್ನಾ ಜಿಲ್ಲೆಯಲ್ಲಿ ತಮ್ಮ 9ನೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕೋಟಾ ವಿಷಯದ ಕುರಿತು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದ್ದಾರೆ.

ಅಂತರ್ವಾಲಿ ಸಾರತಿ ಗ್ರಾಮದಲ್ಲಿ ಪ್ರತಿಭಟನೆ ಆರಂಭವಾಗುತ್ತಿದ್ದಂತೆ, ಮರಾಠಾ ಮೀಸಲಾತಿ ಸಂಪುಟ ಉಪ ಸಮಿತಿಯ ಅಧ್ಯಕ್ಷ ಮತ್ತು ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಮಾತುಕತೆ ನಡೆಸಲು ಮತ್ತು ಜರಂಗೆ ಅವರನ್ನು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಸ್ಥಳಕ್ಕೆ ಧಾವಿಸಿದ್ದಾರೆ.

ಮುಂಬೈನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಅಂತರವಾಲಿ ಸಾರತಿ ಗ್ರಾಮದಲ್ಲಿ, ತೀವ್ರವಾದ ಬಿಸಿಲಿನ ಹೊರತಾಗಿಯೂ ಯಾವುದೇ ಛಾವಣಿ ಅಥವಾ ರಕ್ಷಣಾತ್ಮಕ ಆಶ್ರಯವಿಲ್ಲದೆ ಸ್ಥಳದಲ್ಲಿ ಜರಂಗೆ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಮರಾಠಾ ಸಮುದಾಯವನ್ನು "ಅಗ್ನಿ ಪರೀಕ್ಷೆ" ಗೆ ಒಳಪಡಿಸಬಾರದು ಎಂದು ಅವರು ಸರ್ಕಾರಕ್ಕೆ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ ಮತ್ತು ಬೇಡಿಕೆಗಳ ಮೇಲೆ ನಿರ್ದಿಷ್ಟ ಕ್ರಮ ಕೈಗೊಳ್ಳುವವರೆಗೆ ಆಂದೋಲನವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

Jarange
'ಮರಾಠ ರಾಜಕೀಯ ದುಷ್ಟಶಕ್ತಿಯ ಅಡಿಯಲ್ಲಿ ಬಿದ್ದಂತೆ ಭಾಸವಾಗುತ್ತಿದೆ': ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಅಜಿತ್ ಪವಾರ್ ಬಣ್ಣನೆ

ಒಬಿಸಿ ಕೋಟಾ ಪಡೆಯಲು ಮರಾಠಾ ಸಮುದಾಯದ ಸದಸ್ಯರಿಗೆ ಕುನ್ಬಿ ಜಾತಿ ಪ್ರಮಾಣಪತ್ರಗಳನ್ನು ನೀಡುವುದು, ಹೈದರಾಬಾದ್ ಮತ್ತು ಸತಾರಾ ಗೆಜೆಟ್ ದಾಖಲೆಗಳ ಅನುಷ್ಠಾನ ಮತ್ತು ಮೀಸಲಾತಿ ಆಂದೋಲನದಲ್ಲಿ ಭಾಗವಹಿಸಿದ ಮರಾಠಾ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಜರಂಗೆ ಒತ್ತಾಯಿಸಿದ್ದಾರೆ.

ಇತರ ಹಿಂದುಳಿದ ವರ್ಗಗಳಿಗೆ ಸಚಿವಾಲಯ ರಚಿಸುವಂತೆ ಮರಾಠಾ ಸಮುದಾಯಕ್ಕೂ ಒಂದು ಸಚಿವಾಲಯವನ್ನು ರಚಿಸುವಂತೆ ಅವರು ಕೋರಿದ್ದಾರೆ.

ಪ್ರತಿಭಟನೆ ಆರಂಭವಾಗುತ್ತಿದ್ದಂತೆ, ವಿಖೆ ಪಾಟೀಲ್ ಸ್ಥಳಕ್ಕೆ ಧಾವಿಸಿ ಜರಂಗೆಗೆ ಶೆಡ್ ಅಡಿಯಲ್ಲಿ ಕುಳಿತುಕೊಳ್ಳಲು ವಿನಂತಿಸಿದರು, ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com