ರಾಹುಲ್ ಗಾಂಧಿ ಮೊಘಲ್ ಚಕ್ರವರ್ತಿಯ ಮಗನಂತೆ ಮಾತಾಡುತ್ತಿದ್ದಾರೆ: ಬಿಜೆಪಿ ವ್ಯಂಗ್ಯ

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ನಾಯಕರು 'ಮೊಘಲ್ ಚಕ್ರವರ್ತಿಯ ಮಗನಂತೆ' ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದೆ.
BJP leader sambit patra
ಬಿಜೆಪಿ ವಕ್ತಾರ ಸಂಬಿತ್ ಪಾತ್ರonline desk
Updated on: 

ಭಾರತೀಯ ಜನತಾ ಪಕ್ಷವು ಭಾನುವಾರದಂದು 'ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್' (INDIA) ರ್ಯಾಲಿಯನ್ನು 'ಅಸ್ತವ್ಯಸ್ತ ಮತ್ತು ಅವ್ಯವಸ್ಥಿತ ಪ್ರದರ್ಶನ' ಎಂದು ಬಣ್ಣಿಸಿದೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ನಾಯಕರು 'ಮೊಘಲ್ ಚಕ್ರವರ್ತಿಯ ಮಗನಂತೆ' ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದೆ.

2024ರ ಚುನಾವಣೆಯನ್ನು 'ಅಕ್ರಮ' ಎಂದು ಕರೆದ ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, "ಈ ಹಿಂದೂಸ್ಥಾನ್ ನಿಮ್ಮ 'ಅಬ್ಬುಜಾನ್' (ತಂದೆ) ಅವರದ್ದಲ್ಲ. ಇದು ಹಿಂದೂಸ್ಥಾನಿಗಳಿಗೆ ಸೇರಿದ್ದು," ಎಂದು ಹೇಳಿದರು.

ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ವಿರೋಧ ಪಕ್ಷಗಳ ಒಕ್ಕೂಟವಾದ 'INDIA' ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ 'ವೋಟ್ ಬಚಾವೋ, ದೇಶ್ ಬಚಾವೋ' (ಮತ ಉಳಿಸಿ, ದೇಶ ಉಳಿಸಿ) ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ವೇಳೆ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

"ನರೇಂದ್ರ ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ನಾನು ಹೇಳುತ್ತೇನೆ, ನರೇಂದ್ರ ಮೋದಿ ಎಲ್ಲಿಗೂ ಹೋಗಲು ಸಾಧ್ಯವಿಲ್ಲ; ಅವರು ಹೋಗಲು ಬಯಸಿದರೂ, ನಾವು ಅವರನ್ನು ಬಿಡುವುದಿಲ್ಲ," ಎಂದು ಗಾಂಧಿ ಹೇಳಿದರು. ಅಲ್ಲದೆ, ಇವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಕಾನೂನಿನಿಂದ ತಪ್ಪಿಸಿಕೊಳ್ಳುವ ಬಗ್ಗೆ ಯೋಚಿಸಬಾರದು ಎಂದು ಎಚ್ಚರಿಸಿದರು.

ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಬಿತ್ ಪಾತ್ರ, "ಅರಾಜಕತೆಯನ್ನು ಸೃಷ್ಟಿಸಲು ಕಾಂಗ್ರೆಸ್ ನಾಯಕರು ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಅವರು ಹೀಗೆ ಮಾಡುತ್ತಿರುವವರೆಗೂ ಪ್ರಧಾನಿ ಮೋದಿ ಎಲ್ಲಿಗೂ ಹೋಗುವುದಿಲ್ಲ," ಎಂದು ಹೇಳಿದರು.

BJP leader sambit patra
2024 ರ ಚುನಾವಣೆ ಅಕ್ರಮ; ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ; ನಾನು ಹೇಳಿದ್ದೆಲ್ಲಾ ನಿಜವಾಗುತ್ತದೆ: ರಾಹುಲ್ ಗಾಂಧಿ

ರಾಮ್‌ಲೀಲಾ ಮೈದಾನದಲ್ಲಿ 'INDIA' ಒಕ್ಕೂಟ ನಡೆಸಿದ ಶಕ್ತಿ ಪ್ರದರ್ಶನವನ್ನು ಲಘುವಾಗಿ ಪರಿಗಣಿಸಿದ ಪಾತ್ರ, "ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ರ್ಯಾಲಿಯಲ್ಲಿ 10 ಲಕ್ಷ ಜನರು ಭಾಗವಹಿಸುತ್ತಾರೆ ಎಂದು ಹೇಳಿಕೊಂಡಿದ್ದರು, ಆದರೆ ಬಂದಿರುವುದು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ," ಎಂದು ವ್ಯಂಗ್ಯವಾಡಿದರು.

ರಾಮ್‌ಲೀಲಾ ಮೈದಾನದಲ್ಲಿ ಕಂಡುಬಂದ ಜನಸಮೂಹವು 'ಟ್ರಿಕ್ ಫೋಟೋಗ್ರಫಿ' (ತಂತ್ರ ಬಳಸಿ ತೆಗೆದ ಚಿತ್ರಗಳು) ಎಂದು ಪ್ರತಿಪಾದಿಸಿದ ಬಿಜೆಪಿ ಸಂಸದರು, ಇಂತಹ ತಂತ್ರಗಳಿಂದ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದರು.

"ರಾಹುಲ್ ಗಾಂಧಿ ಇದನ್ನು 'ಶಿವನ ಮೆರವಣಿಗೆ' (ಶಿವ್ ಕಿ ಬಾರಾತ್) ಎಂದು ಕರೆದಿದ್ದಾರೆ. ಆದರೆ ಇದು ಶಿವನ ಮೆರವಣಿಗೆಯಾಗಿರಲಿಲ್ಲ; ಇದೊಂದು ಅಸ್ತವ್ಯಸ್ತ ಮತ್ತು ಅವ್ಯವಸ್ಥಿತ ಪ್ರದರ್ಶನವಾಗಿತ್ತು," ಎಂದು ಅವರು ಹೇಳಿದರು.

2024ರ ಲೋಕಸಭೆ ಚುನಾವಣೆಯನ್ನು ರಾಹುಲ್ ಗಾಂಧಿ 'ಅಕ್ರಮ' ಎಂದು ಘೋಷಿಸಿದ್ದಾರೆ ಎಂದು ಉಲ್ಲೇಖಿಸಿದ ಪಾತ್ರ, "ಒಂದು ವೇಳೆ ಅದು ಅಕ್ರಮವಾಗಿದ್ದರೆ, ಮೋದಿ ಪ್ರಧಾನಿಯಾಗಲು ಅಥವಾ ಅಮಿತ್ ಶಾ ಗೃಹ ಸಚಿವರಾಗಲು ಸಾಧ್ಯವಾಗುತ್ತಿರಲಿಲ್ಲ," ಎಂದು ತಿರುಗೇಟು ನೀಡಿದರು. "ಮೊಘಲ್ ಚಕ್ರವರ್ತಿಯ ಮಕ್ಕಳು ಹೀಗೆಯೇ ಮಾತನಾಡುತ್ತಾರೆ. ಈ ಹಿಂದೂಸ್ಥಾನ್ ನಿಮ್ಮ ಅಬ್ಬುಜಾನ್‌ಗೆ (ತಂದೆಗೆ) ಸೇರಿದ್ದಲ್ಲ. ಇದು ಹಿಂದೂಸ್ಥಾನಿಗಳಿಗೆ ಸೇರಿದ್ದು," ಎಂದು ಬಿಜೆಪಿ ನಾಯಕ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X