ರಸ್ತೆ ಕಾಮಗಾರಿ ವೇಳೆ ಘೋರ ದುರಂತ: ವಿದ್ಯುತ್ ತಗುಲಿ 8 ಕಾರ್ಮಿಕರು ಸಾವು, ಐವರಿಗೆ ಗಾಯ!

ರಾಜಸ್ಥಾನದ ಜುಂಜುನು ಜಿಲ್ಲೆಯ ಉದಯಪುರವಾಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಾಪೋಲಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮೃತಪಟ್ಟ ಕಾರ್ಮಿಕರು ಸ್ಥಳೀಯ ನಿವಾಸಿಗಳಾಗಿದ್ದಾರೆ.
Eight road construction workers electrocuted in Rajasthan
ರಸ್ತೆ ಕಾಮಗಾರಿ
Updated on: 

ಜೈಪುರ: ರಾಜಸ್ಥಾನದಲ್ಲಿ ರಸ್ತೆ ಕಾಮಗಾರಿ ವೇಳೆ ಘೋರ ದುರಂತ ಸಂಭವಿಸಿದ್ದು, ಜಲ್ಲಿಕಲ್ಲು ಮಿಶ್ರಣದ ಯಂತ್ರಕ್ಕೆ ವಿದ್ಯುತ್ ತಗುಲಿದ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

ರಾಜಸ್ಥಾನದ ಜುಂಜುನು ಜಿಲ್ಲೆಯ ಉದಯಪುರವಾಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಾಪೋಲಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮೃತಪಟ್ಟ ಕಾರ್ಮಿಕರು ಸ್ಥಳೀಯ ನಿವಾಸಿಗಳಾಗಿದ್ದಾರೆ.

ಛಾಪೋಲಿ ಮತ್ತು ಕದಮ್‌ಕುಂಡ್ ಅನ್ನು ಸಂಪರ್ಕಿಸುವ ಕಿರಿದಾದ ರಸ್ತೆಯೊಂದನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿತ್ತು.

Eight road construction workers electrocuted in Rajasthan
ನರಬಲಿಗಾಗಿ ತನ್ನ ಏಕೈಕ ಮಗನನ್ನೇ ಕೊಂದ ತಂದೆ; ಬಳಿಕ ಮೃತದೇಹದ ಪಕ್ಕದಲ್ಲೇ ಮಲಗಿದ ಪಾಪಿ!

ಜಲ್ಲಿಕಲ್ಲು ಮಿಶ್ರಣ ಮಾಡಲು ಬಳಸುತ್ತಿದ್ದ ಯಂತ್ರವು, ಮೇಲ್ಭಾಗದಲ್ಲಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ್ದೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇತರ ಐವರಿಗೆ ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಇಂಧನ ಸಚಿವ ಹೀರಾ ಲಾಲ್ ನಗರ್ ಅವರ ಪ್ರಕಾರ, ಈ ರಸ್ತೆಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿತ್ತು ಮತ್ತು ಕಾಮಗಾರಿಯನ್ನು ಖಾಸಗಿಯಾಗಿ, ಸಣ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X