ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ಮುರಸು’ ಚಂಡಮಾರುತ; ಭಾರೀ ಮಳೆ, ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳಿ; Video

ಹವಾಮಾನ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ಚಂಡಮಾರುತದ ಮೋಡಗಳ (Wall Cloud) ಬಹುಭಾಗ ಈಗಾಗಲೇ ಭೂಪ್ರದೇಶವನ್ನು ಪ್ರವೇಶಿಸಿದೆ.
Waves crash at the shore amid strong winds during Cyclone in Visakhapatnam, Andhra Pradesh
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಕಡಲತೀರಕ್ಕೆ ಅಪ್ಪಳಿಸುತ್ತಿರುವ ಬೃಹತ್ ಅಲೆಗಳು.
Updated on: 

ಒಂಗೋಲ್ ಸಮೀಪ ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಇಂದು ಮಂಗಳವಾರ ಮುಂಜಾನೆ ತೀವ್ರ ಚಂಡಮಾರುತ ‘ಮುರಸು’ ಅಪ್ಪಳಿಸಿದ್ದು, ಭಾರಿ ಮಳೆಯೊಂದಿಗೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಹವಾಮಾನ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ಚಂಡಮಾರುತದ ಮೋಡಗಳ (Wall Cloud) ಬಹುಭಾಗ ಈಗಾಗಲೇ ಭೂಪ್ರದೇಶವನ್ನು ಪ್ರವೇಶಿಸಿದೆ. ಕೇಂದ್ರಭಾಗ (Eye) ಒಂಗೋಲ್ ಸಮೀಪದ ನೆಲ್ಲೂರು ಮತ್ತು ನರಸಾಪುರ ನಡುವಿನ ಕರಾವಳಿ ಪ್ರದೇಶವನ್ನು ಪ್ರವೇಶಿಸುತ್ತಿದೆ. ಚಂಡಮಾರುತದ ಅಪ್ಪಳಿಸುವಿಕೆ ಪ್ರಕ್ರಿಯೆ ಇನ್ನೂ ಎರಡು ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.

ಒಂಗೋಲ್‌ನ ಕೋತಪಟ್ಟಣಂ ಬೀಚ್ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಬಲವಾದ ಗಾಳಿ ಬೀಸುತ್ತಿದ್ದು, ಕರಾವಳಿ ಭಾಗದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ.

ಇಂದು ಮಧ್ಯರಾತ್ರಿ ಸುಮಾರು 1 ಗಂಟೆಗೆ ಚಂಡಮಾರುತ ಅಪ್ಪಳಿಸುವಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕರಾವಳಿ ಪ್ರದೇಶದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 120 ಕಿ.ಮೀ.ವರೆಗೂ ತಲುಪುತ್ತಿದೆ.

ಮುಂದಿನ 12 ಗಂಟೆಗಳ ಕಾಲ ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂದು ಬೆಳಗ್ಗೆಯವರೆಗೆ ಸಮುದ್ರದಲ್ಲಿ ಸಾಮಾನ್ಯ ಉಬ್ಬರವಿಳಿತದ ಮಟ್ಟಕ್ಕಿಂತ 1ರಿಂದ 1.5 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿರುವ ಕರಾವಳಿ ಭಾಗಗಳು ಜಲಾವೃತಗೊಳ್ಳುವ ಆತಂಕವಿದೆ. ಬಾಪಟ್ಲ, ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಡಾಪ್ಲರ್ ಹವಾಮಾನ ರಾಡಾರ್‌ಗಳ ಮೂಲಕ ಚಂಡಮಾರುತದ ಚಲನವಲನ ಮೇಲೆ ನಿಗಾ ಇರಿಸಲಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Waves crash at the shore amid strong winds during Cyclone in Visakhapatnam, Andhra Pradesh
Cyclone Murasu: ಆಂಧ್ರದತ್ತ ‘ಮುರಸು’ ಚಂಡಮಾರುತ; 120 ಕಿ.ಮೀ ವೇಗ; ಭಾರೀ ಮಳೆ ಎಚ್ಚರಿಕೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X