ತಮಿಳುನಾಡು ಜನತೆಗೆ CM ವಿಜಯ್ ದೀಪಾವಳಿ ಬಂಪರ್ ಗಿಫ್ಟ್; 100 ರೂ.ಗೆ ವೆಟ್ರಿ ವಿಶೇಷ ತರಕಾರಿ ಕಿಟ್!

ತಮಿಳುನಾಡು ಸರ್ಕಾರ, ದೀಪಾವಳಿಗೂ ಮುನ್ನ ಅತ್ಯಂತ ಕಡಿಮೆ ದರದಲ್ಲಿ (ಸಬ್ಸಿಡಿ ದರದಲ್ಲಿ) ಕೇವಲ 100 ರೂಪಾಯಿಗೆ 10 ಬಗೆಯ ಅಗತ್ಯ ಅಡಿಗೆ ತರಕಾರಿಗಳುಳ್ಳ 2.50 ಕೆಜಿ ಪ್ಯಾಕೆಟ್ ಅನ್ನು ನೀಡುವ ಯೋಜನೆ ಘೋಷಿಸಿದೆ.
Ahead of Deepavali, Tamil Nadu government launches Vetri special vegetable pack
CM ವಿಜಯ್
Updated on: 

ಚೆನ್ನೈ: ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ಗುರುವಾರ ರಾಜ್ಯದ ಜನತೆಗೆ ದೀಪಾವಳಿಗೆ ಬಂಪರ್ ಗಿಫ್ಟ್ ಘೋಷಿಸಿದ್ದು, 'ವೆಟ್ರಿ ಸ್ಪೆಷಲ್ ವೆಜಿಟೇಬಲ್ ಪ್ಯಾಕ್' ಯೋಜನೆ ಆರಂಭಿಸಿದೆ.

ತಮಿಳುನಾಡು ಸರ್ಕಾರ, ದೀಪಾವಳಿಗೂ ಮುನ್ನ ಅತ್ಯಂತ ಕಡಿಮೆ ದರದಲ್ಲಿ (ಸಬ್ಸಿಡಿ ದರದಲ್ಲಿ) ಕೇವಲ 100 ರೂಪಾಯಿಗೆ 10 ಬಗೆಯ ಅಗತ್ಯ ಅಡಿಗೆ ತರಕಾರಿಗಳುಳ್ಳ 2.50 ಕೆಜಿ ಪ್ಯಾಕೆಟ್ ಅನ್ನು ನೀಡುವ ಯೋಜನೆ ಘೋಷಿಸಿದೆ.

ದೀಪಾವಳಿಯ ಸಮಯದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ‘ವೆಟ್ರಿ ವಿಶೇಷ ತರಕಾರಿ ಕಿಟ್’ ಯೋಜನೆಯನ್ನು ಪರಿಚಯಿಸಿದೆ.

Ahead of Deepavali, Tamil Nadu government launches Vetri special vegetable pack
ತಮಿಳುನಾಡು ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಐದು ವರ್ಷ ವಯೋಮಿತಿ ಸಡಿಲಿಕೆ ಘೋಷಿಸಿದ CM ವಿಜಯ್

ಚೆನ್ನೈನ ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ ಸಹಕಾರ ಸಚಿವ ವಿ. ಗಾಂಧಿರಾಜ್ ಅವರು ಈ ಯೋಜನೆಗೆ ಗುರುವಾರ ಚಾಲನೆ ನೀಡಿದ್ದಾರೆ.

‘ವೆಟ್ರಿ ಸ್ಪೆಷಲ್ ವೆಜಿಟೇಬಲ್ ಪ್ಯಾಕ್’ ಯೋಜನೆಯು ಮೂರು ದಿನಗಳ ಕಾಲ ಜಾರಿಯಲ್ಲಿರುತ್ತದೆ. ಇಂದು ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ ಈ ತರಕಾರಿ ಪ್ಯಾಕ್‌ಗಳ ಮೊದಲ ಸೆಟ್‌ಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X