6 ವರ್ಷಗಳ ನಂತರ ಎಲ್ಲಾ ಅಗ್ನಿವೀರರು ಖಾಯಂ ಸೈನಿಕರಾಗಬಹುದು, ಆದ್ರೆ...: ಸೇವಾವಧಿ ವಿಸ್ತರಣೆ ಬೆನ್ನಲ್ಲೇ ಮಹತ್ವದ ಘೋಷಣೆ!

ನಾಲ್ಕು ವರ್ಷಗಳ ಅವಧಿ ಮುಗಿದ ನಂತರ ಸೇನೆಯಿಂದ ನಿರ್ಗಮಿಸಬೇಕಿದ್ದ ಅಗ್ನಿವೀರರಿಗೆ, ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಧಿ ವಿಸ್ತರಣೆ ಮಾಡಿದ ಬೆನ್ನಲ್ಲೇ ರಕ್ಷಣಾ ಇಲಾಖೆ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.
All Agniveers to become regular soldiers after 6 years if  they are willing to continue
ಬೆಳಗಾವಿಯ ಮರಾಠಾ ಲಘು ಪದಾತಿ ದಳದ ರೆಜಿಮೆಂಟರಿ ಸೆಂಟರ್‌ನಲ್ಲಿ ಅಗ್ನಿವೀರರು(ಸಂಗ್ರಹ ಚಿತ್ರ)
Updated on: 

ನವದೆಹಲಿ: ಆರು ವರ್ಷಗಳ ಸೇವೆಯ ನಂತರವೂ ಸೇನೆಯಲ್ಲಿ ಮುಂದುವರಿಯಲು ಇಚ್ಛಿಸುವ, ದೈಹಿಕವಾಗಿ ಸದೃಢರಾಗಿರುವ ಮತ್ತು ಶಿಸ್ತುಬದ್ಧವಾಗಿರುವ ಎಲ್ಲಾ ಅಗ್ನಿವೀರರನ್ನು ನಿಯಮಿತ ಸೈನಿಕರನ್ನಾಗಿ ಸೇರಿಸಿಕೊಳ್ಳಲಾಗುವುದು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಅವಧಿ ಮುಗಿದ ನಂತರ ಸೇನೆಯಿಂದ ನಿರ್ಗಮಿಸಬೇಕಿದ್ದ ಅಗ್ನಿವೀರರಿಗೆ, ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಧಿ ವಿಸ್ತರಣೆ ಮಾಡಿದ ಬೆನ್ನಲ್ಲೇ ರಕ್ಷಣಾ ಇಲಾಖೆ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಅಲ್ಲದೆ 'ಅಗ್ನಿಪಥ್' ನೇಮಕಾತಿ ಯೋಜನೆಯನ್ನು ಹಿಂಪಡೆಯಲಾಗಿಲ್ಲ ಎಂಬುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.

ಆರು ವರ್ಷಗಳ ನಂತರ ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಿದಲ್ಲಿ ಅವರನ್ನು ಶಾಶ್ವತವಾಗಿ ನೇಮಿಸಿಕೊಳ್ಳಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಜೂನ್ 2022 ರಲ್ಲಿ ಪ್ರಾರಂಭಿಸಲಾದ 'ಅಗ್ನಿಪಥ್' ಯೋಜನೆಯಡಿ, ಸೈನಿಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು ಮತ್ತು ಅವರಲ್ಲಿ ಕೇವಲ ಶೇಕಡಾ 25 ರಷ್ಟು ಮಂದಿಯನ್ನು ಮಾತ್ರ ನಿಯಮಿತ ಸೇವೆಗೆ ಉಳಿಸಿಕೊಳ್ಳುವ ಅವಕಾಶವಿತ್ತು.

All Agniveers to become regular soldiers after 6 years if  they are willing to continue
ದೀಪಾವಳಿಗೂ ಮುನ್ನ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ವಿಸ್ತರಣೆ! Video

ಸುಮಾರು 18,300 ಅಗ್ನಿವೀರರು ತಮ್ಮ ನಾಲ್ಕು ವರ್ಷಗಳ ಅವಧಿಯನ್ನು ಪೂರೈಸಿ ಸಶಸ್ತ್ರ ಪಡೆಗಳಿಂದ ನಿರ್ಗಮಿಸಲು ಕೆಲವೇ ವಾರಗಳು ಬಾಕಿ ಇರುವಾಗ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಬುಧವಾರ ಈ ಯೋಜನೆಯಲ್ಲಿನ ಬದಲಾವಣೆಗಳನ್ನು ಘೋಷಿಸಿದರು.

ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಧಿ ವಿಸ್ತರಣೆ ಮತ್ತು ನಂತರ ಶಾಶ್ವತ ನೇಮಕಾತಿ ನೀಡುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

"ಈಗ ಎಲ್ಲಾ ಅಗ್ನಿವೀರರನ್ನು ನಿಯಮಿತ ಕೇಡರ್‌ಗೆ (ಸೇವಾವರ್ಗಕ್ಕೆ) ಸೇರಿಸಿಕೊಳ್ಳಲಾಗುವುದು. ಮೊದಲ ನಾಲ್ಕು ವರ್ಷಗಳ ಅವಧಿ ಮುಗಿದ ನಂತರ ಶೇಕಡಾ 25 ರಷ್ಟು ಮಂದಿಯನ್ನು ಸೇರಿಸಿಕೊಳ್ಳಲಾಗುತ್ತದೆ ಮತ್ತು ಉಳಿದ ಶೇಕಡಾ 75 ರಷ್ಟು ಮಂದಿಯನ್ನು(ಯಾವುದೇ ಮಿತಿಯಿಲ್ಲದೆ) ಎರಡನೇ ಅವಧಿಯ ನಂತರ ನಿಯಮಿತ ಸೇವೆಗೆ ಸೇರಿಸಿಕೊಳ್ಳಲಾಗುವುದು" ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X