IAF ಹೊಸ ದಾಖಲೆ: ಲಡಾಕ್ ನಲ್ಲಿ 13,629 ಅಡಿ ಎತ್ತರದಿಂದ IL-76MD ವಿಮಾನ ಲ್ಯಾಂಡಿಂಗ್; Video

ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಈ ವಾಯುನೆಲೆಯು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಸುಮಾರು 25 ಕಿ.ಮೀ. ದೂರದಲ್ಲಿದೆ.
Indian Air Force IL-76MD
ಭಾರತೀಯ ವಾಯುಪಡೆಯ ಐಎಲ್-76ಎಂಡಿ ಸಾರಿಗೆ ವಿಮಾನ
Updated on: 

ನವದೆಹಲಿ: ರಷ್ಯಾ ಮೂಲದ ಭಾರತೀಯ ವಾಯುಪಡೆಯ ಸಾರಿಗೆ ವಿಮಾನ ಲಡಾಖ್‌ನ ನಿಯೋಮಾ ವಾಯುನೆಲೆಯಲ್ಲಿ ಇಂದು ಶನಿವಾರ ಯಶಸ್ವಿಯಾಗಿ ಇಳಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಜಗತ್ತಿನಲ್ಲೇ, ಅತಿ ಎತ್ತರದ ಪ್ರದೇಶದಲ್ಲಿ ಇಳಿದ ಸಾಧನೆ ಈ ವಿಮಾನದ್ದಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಈ ವಾಯುನೆಲೆಯು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಸುಮಾರು 25 ಕಿ.ಮೀ. ದೂರದಲ್ಲಿದೆ.

ಭಾರತೀಯ ವಾಯುಪಡೆಯ ಐಎಲ್-76ಎಂಡಿ ವಿಮಾನವು ನಿಯೋಮಾದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದೆ. ಜಗತ್ತಿನಲ್ಲೇ ಈ ವಿಮಾನವು ಅತಿ ಎತ್ತರದ ಪ್ರದೇಶದಲ್ಲಿ ಇಳಿದ ಸಾಧನೆ ಇದಾಗಿದೆ ಎಂದು ಭಾರತೀಯ ವಾಯುಪಡೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.

ವಿಮಾನದ ದೀರ್ಘಕಾಲೀನ ಕಾರ್ಯಕ್ಷಮತೆ, ಅದರ ಸಿಬ್ಬಂದಿಯ ಅಸಾಧಾರಣ ಕೌಶಲ, ನಿಖರತೆ ಮತ್ತು ವೃತ್ತಿಪರತೆಯನ್ನು ಈ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದೆ.

ಈ ಸಾಧನೆಯು ಭಾರತದ ಕಾರ್ಯತಂತ್ರದ ವಾಯುಸಾಗಣೆ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಮೈಲಿಗಲ್ಲಾಗಿದೆ ಎಂದು ವಾಯುಪಡೆ ಬಣ್ಣಿಸಿದೆ.

Indian Air Force IL-76MD
IAF ನ ದಾಳಿ ವ್ಯಾಪ್ತಿಗೆ ನಿಲುಕದ ಯಾವುದೇ ಗುರಿಯಿಲ್ಲ ಎಂಬುದನ್ನು Operation Sindoor ಸಾಬೀತುಪಡಿಸಿದೆ: ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X