ಮಧ್ಯರಾತ್ರಿ ಅಭಿಷೇಕ್ ಬ್ಯಾನರ್ಜಿ ಮನೆ ಮೇಲೆ ದಾಳಿ: ಆರು ತಿಂಗಳಲ್ಲಿ ಇದು ಏಳನೇ ಕೊಲೆ ಯತ್ನ ಎಂದ ಟಿಎಂಸಿ ಸಂಸದ

ಕೊಲ್ಕತ್ತಾದ ಕಾಲಿಘಾಟ್‌ನಲ್ಲಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಮಧ್ಯರಾತ್ರಿ ನಡೆದ ದಾಳಿಯನ್ನು ಸ್ವತಃ ಬ್ಯಾನರ್ಜಿ ಅವರು ಕಳೆದ ಆರು ತಿಂಗಳಲ್ಲಿ ತಮ್ಮ ಜೀವದ ಮೇಲೆ ನಡೆದ "ಏಳನೇ ಕೊಲೆ ಯತ್ನ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Abhishek Banerjee
ಅಭಿಷೇಕ್ ಬ್ಯಾನರ್ಜಿOnline Desk
Updated on: 

ಕೊಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಳೀಘಾಟ್ ನಿವಾಸದ ಮೇಲೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ದಾಳಿ ನಡೆದಿದ್ದು, ಕಳೆದ ಆರು ತಿಂಗಳಲ್ಲಿ ತಮ್ಮ ಜೀವ ತೆಗೆಯಲು ನಡೆದಿರುವ "ಏಳನೇ ಕೊಲೆ ಯತ್ನ" ಇದಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ಗಂಭೀರವಾಗಿ ಆರೋಪಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನವೆಂಬರ್ 7ರ ಮುಂಜಾನೆ ಸುಮಾರು 2 ಗಂಟೆಗೆ ಕಾಳೀಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸ ಹಾಗೂ ಪಕ್ಷದ ಕಚೇರಿಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಬ್ಯಾನರ್ಜಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ಬೆಂಬಲಿಗರು ಜಮಾಯಿಸಿದ್ದ ವೇಳೆ ಎದುರಾಳಿ ಗುಂಪು ಘೋಷಣೆ ಕೂಗಿದ್ದು, ಮಾತಿನ ಚಕಮಕಿಯ ನಂತರ ಕಲ್ಲು ಮತ್ತು ಇಟ್ಟಿಗೆಗಳಿಂದ ತೂರಾಟ ನಡೆಸಲಾಯಿತು ಎಂದು ಆರೋಪಿಸಲಾಗಿದೆ. ಈ ವೇಳೆ, ಬ್ಯಾನರ್ಜಿ ನಿವಾಸದ ಮುಂದೆ ಜಮಾಯಿಸಿದ ಬಿಜೆಪಿ ಬೆಂಬಲಿಗರು ಚೋರ್, ಚೋರ್ ಎಂದು ಘೋಷಣೆಗಳನ್ನು ಕೂಗುತ್ತಾ, ಹುಟ್ಟುಹಬ್ಬದ ಬ್ಯಾನರ್‌ಗಳು ಹಾಗೂ ಕಟೌಟ್‌ಗಳನ್ನು ಹರಿದು ಹಾಕಿದ್ದಾರೆ. ಜೊತೆಗೆ, ತಮ್ಮ ನಿವಾಸದ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಎರಡು ದಿನಗಳ ಕಾಲ ಕೆಲವರು ಬೈಕ್‌ಗಳಲ್ಲಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡು ಬ್ಯಾನರ್ಜಿ ದೂರಿದ್ದಾರೆ.

Abhishek Banerjee
ಸರ್ಕಾರಿ ಜಮೀನು ಗೋಲ್ಮಾಲ್ ಆರೋಪ: ಪಂಜಾಬ್ ಚುನಾವಣೆಗೆ ಟಿಕೆಟ್ ಸಿಕ್ಕ ಬೆನ್ನಲ್ಲೇ AAP ಶಾಸಕಿ ಅಮನ್‌ದೀಪ್ ಕೌರ್ ಮನೆ ಮೇಲೆ ED ದಾಳಿ

ಏಳನೇ ಕೊಲೆ ಯತ್ನ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡ ಬ್ಯಾನರ್ಜಿ, "ಆಯ್ಕೆಯಾದ ಒಬ್ಬ ಸಂಸದನ ಸ್ಥಿತಿಯೇ ಹೀಗಾದರೆ, ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಜನರ ಪಾಡೇನು? ಕಳೆದ ಆರು ತಿಂಗಳಲ್ಲಿ ನನ್ನ ಜೀವ ತೆಗೆಯಲು ನಡೆದ ಏಳನೇ ಯತ್ನವಿದು" ಎಂದು ಹೇಳಿದ್ದಾರೆ. ಅದರಲ್ಲೂ, ಕೋಲ್ಕತ್ತಾ ಪೊಲೀಸರ ಕಣ್ಮುಂದೆಯೇ ಈ ದಾಳಿ ನಡೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ನ್ಯಾಯಾಂಗ ವ್ಯವಸ್ಥೆಯು ಇಂತಹ ಗೂಂಡಾಗಿರಿಯನ್ನು ಕಣ್ಣುಮುಚ್ಚಿ ನೋಡುತ್ತಿದೆ ಎಂದು ಅವರು ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿರುದ್ಧವೂ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಮುಂದುವರೆದು, ಬಿಜೆಪಿ ನಾಯಕರು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಅವರು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಮತ್ತು ರಾಜಕೀಯ ಲಾಭಕ್ಕಾಗಿ ಇಂತಹ ಕಾಲ್ಪನಿಕ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಮತ್ತಿತರರು ತಿರುಗೇಟು ನೀಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಜನ್ಮದಿನ ಆಚರಿಸುವ ನೆಪದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಗದ್ದಲ ಎಬ್ಬಿಸಿದ್ದು, ಅದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X