ಅಯೋಧ್ಯೆಗೆ ಭೇಟಿ ನೀಡುವ ಮುನ್ನ ರಾಮ ಭಕ್ತರಲ್ಲಿ ಕ್ಷಮೆ ಕೇಳಿ: ಅಖಿಲೇಶ್‌ಗೆ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಸೂಚನೆ!

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಡಿಸೆಂಬರ್ 12 ರಂದು ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂಬ ಘೋಷಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
Yogi Adityanath
ಯೋಗಿ ಆದಿತ್ಯನಾಥ್
Updated on: 

ಅಯೋಧ್ಯೆ: ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರು, ಸಾಧು-ಸಂತರಿಗೆ ಲಾಠಿ ಏಟು ನೀಡಿದವರು ಮತ್ತು ಅಯೋಧ್ಯೆಯನ್ನು ಕಡೆಗಣಿಸಿದವರು, ರಾಮ ಭಕ್ತರು ಹಾಗೂ ಸಾಧು-ಸಂತರಲ್ಲಿ ಕ್ಷಮೆ ಕೇಳಿದ ನಂತರವಷ್ಟೇ ರಾಮ ಮಂದಿರಕ್ಕೆ ಭೇಟಿ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಸೂಚನೆ ನೀಡಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಡಿಸೆಂಬರ್ 12 ರಂದು ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂಬ ಘೋಷಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯನ್ನು ಕಡೆಗಣಿಸಿ ಅವಮಾನಿಸಿದವರು, ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರು ಮತ್ತು ಸಾಧು-ಸಂತರಿಗೆ ಲಾಠಿ ಏಟು ನೀಡಿದವರು ಖಂಡಿತವಾಗಿಯೂ ಅಯೋಧ್ಯೆಗೆ ಬರಲಿ, ಆದರೆ ಕ್ಷಮೆ ಕೇಳಿದ ನಂತರವಷ್ಟೇ ಬರಲಿ. ಅವರು ಒಮ್ಮೆ ರಾಮ ಭಕ್ತರಲ್ಲಿ ಮತ್ತು ಸಾಧು-ಸಂತರಲ್ಲಿ ಕ್ಷಮೆ ಕೇಳಲಿ, ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡಲಿ" ಎಂದಿದ್ದಾರೆ.

ಅಯೋಧ್ಯೆಯಲ್ಲಿ ನಡೆದ 10ನೇ ಆವೃತ್ತಿಯ 'ದೀಪೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿದ ಆದಿತ್ಯನಾಥ್, ಸಮಾಜವಾದಿ ಪಕ್ಷದ ಹೆಸರನ್ನಾಗಲಿ ಅಥವಾ ಅದರ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹೆಸರನ್ನಾಗಲಿ ನೇರವಾಗಿ ಪ್ರಸ್ತಾಪಿಸದಿದ್ದರೂ, ರಾಮ ಜನ್ಮಭೂಮಿ ಚಳುವಳಿಯನ್ನು ನಿರ್ವಹಿಸಿದ ರೀತಿ, 'ಕರ ಸೇವಕ'ರ ಮೇಲೆ ಗುಂಡು ಹಾರಿಸಿದ್ದು ಮತ್ತು ಅಯೋಧ್ಯೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಹಿಂದಿನ ಸರ್ಕಾರಗಳನ್ನು ತೀವ್ರವಾಗಿ ಟೀಕಿಸಿದರು.

ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮವೊಂದರಲ್ಲಿ ಅಖಿಲೇಶ್ ಯಾದವ್ ಭಾಗವಹಿಸಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ ಆದಿತ್ಯನಾಥ್, ಧಾರ್ಮಿಕ ಸಭೆಗಳಲ್ಲಿ ಕೆಲವು ರಾಜಕೀಯ ನಾಯಕರು ನಡೆದುಕೊಳ್ಳುವ ರೀತಿಯನ್ನು ಪ್ರಶ್ನಿಸಿದರು.

"ಒಂದು ಕಾಲದಲ್ಲಿ ಅಯೋಧ್ಯೆಯ ಬೀದಿಗಳನ್ನು ರಕ್ತಸಿಕ್ತವಾಗಿಸಿದ್ದವರು, ಇಂದು ತಮ್ಮದೇ ಆದ ಹಿಂದಿನ ಕೃತ್ಯಗಳನ್ನು ನೆನಪಿಸಿಕೊಳ್ಳಲು ಕೂಡ ಅಸಮರ್ಥರಾಗಿದ್ದಾರೆ. ಕೆಲವರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲಿಸಬೇಕಾದ ಮರ್ಯಾದೆ ಅಥವಾ ಶಿಷ್ಟಾಚಾರದ ಅರಿವು ಕೂಡ ಇಲ್ಲ ಎಂದು ಟೀಕಿಸಿದರು.

ಕೆಲವೊಮ್ಮೆ ಇಂತಹ ಜನರನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ. ಧಾರ್ಮಿಕ ಪ್ರವಚನ ಅಥವಾ ಕಥಾ ಕಾರ್ಯಕ್ರಮಕ್ಕೆ ಹೋದಾಗ, ಅಲ್ಲಿ ಪಾಲಿಸಬೇಕಾದ ಮರ್ಯಾದೆ ಅಥವಾ ಶಿಷ್ಟಾಚಾರವೇನು ಎಂಬುದು ಕೂಡ ಅವರಿಗೆ ತಿಳಿದಿರುವುದಿಲ್ಲ. ಇದು ಕಥಾ ಕಾರ್ಯಕ್ರಮವೋ ಅಥವಾ ಮುಶಾಯರಾ (ಉರ್ದು ಕಾವ್ಯ ಗೋಷ್ಠಿ)ಯೋ ಎಂಬ ಅರಿವು ಕೂಡ ಅವರಿಗಿರಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮದೇ ಆದ ಶಿಷ್ಟಾಚಾರಗಳು ಮತ್ತು ಪವಿತ್ರ ಸಂಪ್ರದಾಯಗಳಿವೆ. ಆದರೆ, ತಮ್ಮ ಅಸಂಸ್ಕೃತ ವರ್ತನೆಯಿಂದಾಗಿ ಅವರು ಭಗವಾನ್ ಶ್ರೀರಾಮನ ಘನತೆಯನ್ನು ಹಾಗೂ ಕಥೆಯ ಪವಿತ್ರತೆಯನ್ನು ಕಡೆಗಣಿಸಿ, ಅದನ್ನು ಮುಶಾಯರಾವನ್ನಾಗಿ ಪರಿವರ್ತಿಸಲು ಅವಿವೇಕದ ಪ್ರಯತ್ನ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Yogi Adityanath
ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂಗಳ ಹೆಸರುಗಳು ನಾಪತ್ತೆಯಾಗಿವೆ: ಯೋಗಿ ಆದಿತ್ಯನಾಥ್

ಭಗವಾನ್ ಶ್ರೀರಾಮನು ಭಾರತದ ರಾಷ್ಟ್ರೀಯ ಪ್ರಜ್ಞೆ, ಸಂಸ್ಕೃತಿ, ಮೌಲ್ಯಗಳು ಮತ್ತು ಆತ್ಮಗೌರವದ ಪ್ರತೀಕವಾಗಿದ್ದು, ಆತನೇ ಈ ರಾಷ್ಟ್ರದ ಜೀವಶಕ್ತಿಯಾಗಿದ್ದಾನೆ ಎಂದು ಆದಿತ್ಯನಾಥ್ ಬಣ್ಣಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X