'ಆಜಾದಿ, ಆಜಾದಿ!': ಕೊಚ್ಚಿಯಲ್ಲಿ ನಟ ಪ್ರಕಾಶ್ ರಾಜ್ ಅಬ್ಬರದ ಘೋಷಣೆ, Video ವೈರಲ್

"ಆಜಾದಿ, ಆಜಾದಿ!" ಎಂದು ಘೋಷಣೆ ಕೂಗಿದ ಪ್ರಕಾಶ್ ರಾಜ್, ದೇಶದ ವೈವಿಧ್ಯತೆಯ ಬಗ್ಗೆ ಹಾಗೂ ಸಾರ್ವಜನಿಕ ಕಾಳಜಿಗಳನ್ನು ನಿರಂತರವಾಗಿ ಧ್ವನಿಸಬೇಕಾದ ಅಗತ್ಯದ ಬಗ್ಗೆ ಮಾತನಾಡಿದರು.
Prakash Raj
ನಟ ಪ್ರಕಾಶ್ ರಾಜ್
Updated on: 

ಕೊಚ್ಚಿ: ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ ( SIR) ಪ್ರಕ್ರಿಯೆಯ ವಿರುದ್ಧ ಕೇರಳದ ಕೊಚ್ಚಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಭಾಗವಹಿಸಿದ್ದರು.

'ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸಿದ್ದ ಈ ಪ್ರತಿಭಟನಾ Rally ಮರೈನ್ ಡ್ರೈವ್‌ನಿಂದ ಆರಂಭವಾಗಿ ರಾಜೇಂದ್ರ ಮೈದಾನದ ಕಡೆಗೆ ಸಾಗಿತು. ಇದರಲ್ಲಿ ಸುಮಾರು 500 ಮಂದಿ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಪಾಲ್ಗೊಂಡಿದ್ದರು.

CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

"ಆಜಾದಿ, ಆಜಾದಿ!" ಎಂದು ಘೋಷಣೆ ಕೂಗಿದ ಪ್ರಕಾಶ್ ರಾಜ್, ದೇಶದ ವೈವಿಧ್ಯತೆಯ ಬಗ್ಗೆ ಹಾಗೂ ಸಾರ್ವಜನಿಕ ಕಾಳಜಿಗಳನ್ನು ನಿರಂತರವಾಗಿ ಧ್ವನಿಸಬೇಕಾದ ಅಗತ್ಯದ ಬಗ್ಗೆ ಮಾತನಾಡಿದರು.

ಎಸ್ ಐಆರ್ ವಿಚಾರ ಮುಗಿದಿದೆ ಎಂದು ನಾವು ಹೇಳುವವರೆಗೂ ಪ್ರತಿಭಟನಾ ಚಳುವಳಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು. ಪ್ರಕಾಶ್ ರಾಜ್ ಇತರ ಪ್ರತಿಭಟನಾಕಾರರೊಂದಿಗೆ ಸೇರಿ "ಸ್ವಾತಂತ್ರ್ಯ, ಸ್ವಾತಂತ್ರ್ಯ" ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಶೇಷ ತೀವ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಯನ್ನು ಪರಿಶೀಲಿಸಲು ಮತ್ತು ನವೀಕರಿಸಲು ಚುನಾವಣಾ ಆಯೋಗ ಕೈಗೊಂಡಿರುವ ಪ್ರಕ್ರಿಯೆಯಾಗಿದ್ದು, ಕೊಚ್ಚಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್ ಐಆರ್ ಪ್ರಕ್ರಿಯೆಗೆ ಭಾರಿ ವಿರೋಧ ವ್ಯಕ್ತವಾಯಿತು.

Prakash Raj
ವಿದ್ಯಾರ್ಥಿಗಳ ಅಮಾನತು ಕುರಿತು ನಟ ಪ್ರಕಾಶ್ ರಾಜ್ ಆಕ್ರೋಶ: ಕೇರಳಂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ!

ಅಲ್ಲದೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕರೆ ನೀಡಲಾಯಿತು. ಪ್ರಕಾಶ್ ರಾಜ್ ಭಾಗವಹಿಸುವಿಕೆ ಮತ್ತಷ್ಟು ಗಮನ ಸೆಳೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X