ದೀಪಾವಳಿಗೂ ಓಲೈಕೆ ರಾಜಕಾರಣ ಬೇಕೆ?: 'ಸಂತೋಷದ ಈದ್‌' ಎಂದ ಖರ್ಗೆ; ಹಿಂದೂ ವಿರೋಧಿ, ಮತಬ್ಯಾಂಕ್ ರಾಜಕೀಯ- ಮುಗಿಬಿದ್ದ ಬಿಜೆಪಿಗರು

ದೀಪಾವಳಿಯು ದೇಶದ ಅತಿ ದೊಡ್ಡ ಖುಷಿಯ ಈದ್‌ ಆಗಿದ್ದು, ಇದನ್ನು ಸುದೀರ್ಘ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಗರು ಸನಾತನ ವಿರೋಧಿ ಹೇಳಿಕೆ ಎಂದು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
Mallikarjun Kharge
ಮಲ್ಲಿಕಾರ್ಜುನ ಖರ್ಗೆ
Updated on: 

ನವದೆಹಲಿ: ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಶುಭಾಶಯ ತಿಳಿಸಿದ್ದು ಇದೀಗ ವಿವಾದಕ್ಕೀಡಾಗಿದ್ದು, ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ದೀಪಾವಳಿಯನ್ನು ‘ಸಂತೋಷದ ಈದ್‌’ ಎಂದು ಖರ್ಗೆ ಬಣ್ಣಿಸಿದ್ದು ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಬಗ್ಗೆ ಖರ್ಗೆ ಹೇಳಿದ್ದು, ದೀಪಾವಳಿಯು ದೇಶದ ಅತಿ ದೊಡ್ಡ ಖುಷಿಯ ಈದ್‌ ಆಗಿದ್ದು, ಇದನ್ನು ಸುದೀರ್ಘ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಗರು ಸನಾತನ ವಿರೋಧಿ ಹೇಳಿಕೆ ಎಂದು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ, ‘ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ದೀಪಾವಳಿಯನ್ನು ಖುಷಿಯ ಈದ್‌ ಎಂದು ಹೇಳುತ್ತಾರೆ. ಹಿಂದೂಗಳ ಹಬ್ಬವಾದ ದೀಪಾವಳಿಯಲ್ಲೂ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌, ಓಲೈಕೆ ರಾಜಕಾರಣವನ್ನು ನಡೆಸುವುದನ್ನು ಬಿಡುತ್ತಿಲ್ಲ. ಇದಕ್ಕೂ ಮೊದಲು ಸೋನಿಯಾ ಗಾಂಧಿ ಬಾಬ್ರಿ ಮಸೀದಿ ಧ್ವಂಸವಾದಾಗ ಕಣ್ಣೀರಿಟ್ಟಿದ್ದಾಗಿ ಹೇಳಿದ್ದರು. ಕಾಂಗ್ರೆಸ್‌ ಪಕ್ಷವು ಸನಾತನ ವಿರೋಧಿಯಾಗಿದೆ’ ಎಂದಿದ್ದಾರೆ.

ಭಂಡಾರಿ ಅವರು ಈ ಹೇಳಿಕೆಯನ್ನು ಕಾಂಗ್ರೆಸ್‌ನ 'ಓಲೈಕೆ ರಾಜಕೀಯ'ದ ಇತಿಹಾಸದೊಂದಿಗೆ ಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಟ್ಲಾ ಹೌಸ್ ಎನ್‌ಕೌಂಟರ್ ಮತ್ತು ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡದಿರುವ ಬಗ್ಗೆಯೂ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.

Mallikarjun Kharge
'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ಹೇಳಿಕೆ; ಭುಗಿಲೆದ್ದ ಆಕ್ರೋಶ, Video

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿದಾಗ ಕಾಂಗ್ರೆಸ್ ಪಕ್ಷವು ಮೌನ ವಹಿಸಿತ್ತು ಎಂದೂ ಭಂಡಾರಿ ಆರೋಪಿಸಿದ್ದಾರೆ.

ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಅವರು ಖರ್ಗೆ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ. 'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಶವನ್, ಕಾಂಗ್ರೆಸ್ ಪದೇ ಪದೇ ಹಿಂದೂ ಧಾರ್ಮಿಕ ಸಂಪ್ರದಾಯಗಳು ಮತ್ತು ಕಾರ್ಯಕ್ರಮಗಳನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಮಹಾ ಕುಂಭ ಮೇಳದ ಕುರಿತು ಖರ್ಗೆ ಹಿಂದೆ ನೀಡಿದ್ದ ಟೀಕೆ ಮತ್ತು ಛತ್ ಪೂಜೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ರಾಹುಲ್ ಗಾಂಧಿ ಅವರು ಛತ್ ಪೂಜೆಯನ್ನು "ನಾಟಕ" ಎಂದು ಬಣ್ಣಿಸಿದ್ದರು ಎಂದು ಕೇಶವನ್ ಹೇಳಿದ್ದಾರೆ.

ಜವಾಹರಲಾಲ್ ನೆಹರು ಅವರ ಕಾಲದಲ್ಲಿ ಸೋಮನಾಥ ದೇವಾಲಯದ ಪುನರ್ನಿರ್ಮಾಣವನ್ನು ಕಾಂಗ್ರೆಸ್ ವಿರೋಧಿಸಿದ್ದನ್ನೂ ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭವನ್ನು ರಾಹುಲ್ ಗಾಂಧಿ ಅವರು "ನಾಚ್-ಗಾನಾ" (ಹಾಡು-ಕುಣಿತ) ಕಾರ್ಯಕ್ರಮ ಎಂದು ಟೀಕಿಸಿದ್ದನ್ನೂ ಕೇಶವನ್ ಪ್ರಸ್ತಾಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X