ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯ; ಹಬ್ಬದ ವೇಳೆ ಮನೆಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಸಾವು!

ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡ ಬೆಂಕಿ ಮನೆಯಾದ್ಯಂತ ವೇಗವಾಗಿ ಹರಡಿಕೊಂಡಿದ್ದರಿಂದ, ಮನೆಯಲ್ಲಿದ್ದವರು ಒಳಗೆ ಸಿಲುಕಿಕೊಂಡಿದ್ದಾರೆ.
Six of family killed as fire engulfs home after Diwali celebrations in Maharashtra
ಸಾಂದರ್ಭಿಕ ಚಿತ್ರ
Updated on: 

ದಾರಾಶಿವ: ಮಹಾರಾಷ್ಟ್ರದ ದಾರಾಶಿವ ಜಿಲ್ಲೆಯ ಯೆಡ್ಶಿಯಲ್ಲಿ ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ಹಬ್ಬದ ವೇಳೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ಸಜೀವ ದಹನವಾಗಿದ್ದಾರೆ. ಒಬ್ಬ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡ ಬೆಂಕಿ ಮನೆಯಾದ್ಯಂತ ವೇಗವಾಗಿ ಹರಡಿಕೊಂಡಿದ್ದರಿಂದ, ಮನೆಯಲ್ಲಿದ್ದವರು ಒಳಗೆ ಸಿಲುಕಿಕೊಂಡಿದ್ದಾರೆ. ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುಟುಂಬವು ದಿನಸಿ ಅಂಗಡಿಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿತ್ತು. ಬೆಂಕಿ ತೀವ್ರಗೊಂಡಾಗ, ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ರಾತ್ರಿಯಿಡೀ ಶ್ರಮಿಸಿದ್ದಾರೆ.

Six of family killed as fire engulfs home after Diwali celebrations in Maharashtra
ದೀಪಾವಳಿ ರಾತ್ರಿಯೇ ಕಣ್ಣೀರಿನ ಕಡಲು: ಮಧ್ಯಪ್ರದೇಶದ ಎರಡು ಪ್ರತ್ಯೇಕ ಅಗ್ನಿ ಅವಘಡದಲ್ಲಿ 12 ಮಂದಿ ದುರ್ಮರಣ

ಗ್ರಾಮದ 75 ವರ್ಷದ ಉತ್ತಮ್ ತ್ರಿಂಬಕ್ ಎಂಬುವರು ತಮ್ಮ ಮನೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಪೂಜೆ ಬಳಿಕ, ಊಟ ಮಾಡಿ ಕುಟುಂಬದ ಎಲ್ಲಾ ಸದಸ್ಯರು ಎಂದಿನಂತೆ ಮನೆಯ ಛಾವಣಿಯ ಮೇಲೆ ಮಲಗಿದ್ದರು ಎನ್ನಲಾಗಿದೆ.

ಮೃತರು ಉತ್ತಮ್ ತ್ರಿಂಬಕ್(75), ಅವರ ಪತ್ನಿ ಚಂದ್ರಕಲಾ(70), ಮಗ ಗೋವಿಂದ್(47), ಮಗಳು ಜ್ಯೋತಿ(42), ಮತ್ತು ಮೊಮ್ಮಕ್ಕಳಾದ ಗಾಯತ್ರಿ (16) ಮತ್ತು ಸಿದ್ಧಿ (15) ಎಂದು ಗುರುತಿಸಲಾಗಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ದೀಪ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ದಿನಸಿ ಅಂಗಡಿಯಲ್ಲಿನ ಯಾವುದೋ ಸುಡುವ ವಸ್ತುವಿನಿಂದ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X