ಮಣಿಪುರ: ಶಂಕಿತ ಉಗ್ರರಿಂದ ಎರಡು ಕಾರುಗಳ ಮೇಲೆ ಗುಂಡಿನ ದಾಳಿ; ನಾಲ್ವರು ಸಾವು

ಈ ಗುಂಡಿನ ದಾಳಿಯು ಇಂಫಾಲ-ಉಖ್ರುಲ್ ರಸ್ತೆಯ 'ನ್ಯೂ ​​ಹೆವನ್'(New Heaven) ಪ್ರದೇಶದಲ್ಲಿ ನಡೆದಿದೆ.
Manipur
ಮಣಿಪುರ
Updated on: 

ಉಖ್ರುಲ್: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ ಶಂಕಿತ ಉಗ್ರರು ಎರಡು ಕಾರುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯು ಇಂಫಾಲ-ಉಖ್ರುಲ್ ರಸ್ತೆಯ 'ನ್ಯೂ ​​ಹೆವನ್'(New Heaven) ಪ್ರದೇಶದಲ್ಲಿ ನಡೆದಿದೆ.

"ದಾಳಿಯಲ್ಲಿ ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನಗಳ ಮುಂಭಾಗದ ಗಾಜುಗಳ ಮೇಲೆ ಗುಂಡು ತಗುಲಿದ ಗುರುತುಗಳು ಕಂಡುಬಂದಿವೆ" ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.

Manipur
ಝಾಕಿರ್ ನಾಯಕ್​ಗೆ ಮೋದಿ ಸರ್ಕಾರ ಶಾಕ್: 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಣೆ!

ಕಾಂಗ್‌ಪೋಕ್‌ಪಿಯ ಟಫೌ ಕುಕಿ ಗ್ರಾಮದ ಸಮೀಪ ಮತ್ತು ನೆರೆಯ ಸೇನಾಪತಿ ಜಿಲ್ಲೆಯ ಕೈಲೆಂಗ್‌ಜಾಂಗ್‌ನಲ್ಲಿ, ಪರಸ್ಪರ ವೈರಿ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಯಲ್ಲಿ 42 ವರ್ಷದ ಕುಕಿ ಮಹಿಳೆಯೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಪುರುಷರು ಗಾಯಗೊಂಡಿದ್ದರು. ಈ ಘಟನೆ ನಡೆದ ಮರುದಿನವೇ ಉಗ್ರರ ದಾಳಿ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X